ಒಂದೇ ದಿನ ಬೆಂಗಳೂರಲ್ಲಿ ಕೊರೊನಾಗೆ 60 ಸಾವು, ಕೊನೆಯೇ ಇಲ್ಲವೆ ಈ ಮಾರಿಯ ಅಟ್ಟಹಾಸಕ್ಕೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮಹಾಮಾರಿಯ ಆರ್ಭಟ ಮುಂದುವರಿದಿದೆ. ಕೋವಿಡ್-19ಗೆ ರಾಜ್ಯದಲ್ಲಿ ಇವತ್ತು 87 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 929ಕ್ಕೆ ಏರಿಕೆಯಾಗಿದೆ. ಇನ್ನು ರಾಜಧಾನಿ ಬೆಂಗಳೂರು ಒಂದರಲ್ಲೇ ಕೊರೊನಾಗೆ ಇವತ್ತು 60 ಜನರು ಬಲಿಯಾಗಿದ್ದಾರೆ. ಇದರೊಂದಿಗೆ ಬೆಂಗಳೂರಿನಲ್ಲಿ ಸಾವನ್ನಪ್ಪಿದವರ ಸಂಖ್ಯೆ 437ಕ್ಕೇರಿದೆ. ಇವ್ತತು ಹೊಸದಾಗಿ 3176 ಜನರು ಕೊರೊನಾದಿಂದ ಸೋಂಕಿತರಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 47,253ಕ್ಕೆ ಏರಿಕೆಯಾಗಿದೆ. ಹಾಗೇನೆ ಬೆಂಗಳೂರಿನಲ್ಲಿ ಇವತ್ತು 1975 ಜನರು ಹೋಸದಾಗಿ ಕೊರೊನಾದಿಂದ ಪೀಡಿತರಾಗಿದ್ದಾರೆ. 15.07.2020 […]

ಒಂದೇ ದಿನ ಬೆಂಗಳೂರಲ್ಲಿ ಕೊರೊನಾಗೆ 60 ಸಾವು, ಕೊನೆಯೇ ಇಲ್ಲವೆ ಈ ಮಾರಿಯ ಅಟ್ಟಹಾಸಕ್ಕೆ
Follow us
Guru
|

Updated on:Jul 15, 2020 | 7:59 PM

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮಹಾಮಾರಿಯ ಆರ್ಭಟ ಮುಂದುವರಿದಿದೆ. ಕೋವಿಡ್-19ಗೆ ರಾಜ್ಯದಲ್ಲಿ ಇವತ್ತು 87 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 929ಕ್ಕೆ ಏರಿಕೆಯಾಗಿದೆ.

ಇನ್ನು ರಾಜಧಾನಿ ಬೆಂಗಳೂರು ಒಂದರಲ್ಲೇ ಕೊರೊನಾಗೆ ಇವತ್ತು 60 ಜನರು ಬಲಿಯಾಗಿದ್ದಾರೆ. ಇದರೊಂದಿಗೆ ಬೆಂಗಳೂರಿನಲ್ಲಿ ಸಾವನ್ನಪ್ಪಿದವರ ಸಂಖ್ಯೆ 437ಕ್ಕೇರಿದೆ.

ಇವ್ತತು ಹೊಸದಾಗಿ 3176 ಜನರು ಕೊರೊನಾದಿಂದ ಸೋಂಕಿತರಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 47,253ಕ್ಕೆ ಏರಿಕೆಯಾಗಿದೆ. ಹಾಗೇನೆ ಬೆಂಗಳೂರಿನಲ್ಲಿ ಇವತ್ತು 1975 ಜನರು ಹೋಸದಾಗಿ ಕೊರೊನಾದಿಂದ ಪೀಡಿತರಾಗಿದ್ದಾರೆ.

15.07.2020 HMB Kannada

Published On - 6:58 pm, Wed, 15 July 20