ಕೊರೊನಾ ಸೋಂಕಿತರಲ್ಲಿ ಶೇ. 80ರಷ್ಟು ಮಂದಿ ಸಾವಿಗೆ ಇದೇ ಕಾರಣ!

| Updated By: ಸಾಧು ಶ್ರೀನಾಥ್​

Updated on: Aug 11, 2020 | 10:03 AM

ಬೆಂಗಳೂರು: ಇದುವರೆಗೆ ಕೊರೊನಾದಿಂದ ಸಾವನ್ನಪ್ಪಿರುವವರಲ್ಲಿ ಉಸಿರಾಟದ ಸಮಸ್ಯೆಯಿಂದಲೇ ಹೆಚ್ಚು ಸಾವನ್ನಪ್ಪಿದ್ದಾರೆ. ಶೇಕಡಾ 80 ರಷ್ಟು ಸೋಂಕಿತರು ಸತ್ತಿರೋದು ಉಸಿರಾಟದ ಸಮಸ್ಯೆಯಿಂದ ಎಂದು ವೈದ್ಯರು ಉಸಿರಾಟದ ಸಮಸ್ಯೆ ಇರೋರಿಗೆ ಎಚ್ಚರಿಕೆ ನೀಡಿದ್ದಾರೆ. ಹೌದು ಕೊರೊನಾ ರೋಗಿಗಳಿಗೆ ಹೆಚ್ಚಾಗಿ ಬಾಧಿಸುತ್ತಿರೋದು ಉಸಿರಾಟದ ಸಮಸ್ಯೆ. ರಾಜ್ಯದಲ್ಲಿ ಸಾಯುತ್ತಿರೋ ಬಹುತೇಕ ಜನರು ಉಸಿರಾಟದ ಸಮಸ್ಯೆಗೊಳಗಾದವರೇ ಹೆಚ್ಚು. ಪ್ರತೀ ದಿನ ಸಾವನ್ನಪ್ಪುತ್ತಿರೋ ರೋಗಿಗಳ ಪೈಕಿ ಶೇ.80 ರಷ್ಟು ಉಸಿರಾಟದ ಸಮಸ್ಯೆಯಿಂದಲೇ ಜೀವ ಬಿಡ್ತಿದ್ದಾರೆ. ಹೀಗಾಗಿ ಆಸ್ತಮಾ, ವೀಸಿಂಗ್ ಸಮಸ್ಯೆ ಇರೋ ಜನರು ಕೊರೊನಾದಿಂದ ಎಚ್ಚರದಿಂದ […]

ಕೊರೊನಾ ಸೋಂಕಿತರಲ್ಲಿ ಶೇ. 80ರಷ್ಟು ಮಂದಿ ಸಾವಿಗೆ ಇದೇ ಕಾರಣ!
Follow us on

ಬೆಂಗಳೂರು: ಇದುವರೆಗೆ ಕೊರೊನಾದಿಂದ ಸಾವನ್ನಪ್ಪಿರುವವರಲ್ಲಿ ಉಸಿರಾಟದ ಸಮಸ್ಯೆಯಿಂದಲೇ ಹೆಚ್ಚು ಸಾವನ್ನಪ್ಪಿದ್ದಾರೆ. ಶೇಕಡಾ 80 ರಷ್ಟು ಸೋಂಕಿತರು ಸತ್ತಿರೋದು ಉಸಿರಾಟದ ಸಮಸ್ಯೆಯಿಂದ ಎಂದು ವೈದ್ಯರು ಉಸಿರಾಟದ ಸಮಸ್ಯೆ ಇರೋರಿಗೆ ಎಚ್ಚರಿಕೆ ನೀಡಿದ್ದಾರೆ.

ಹೌದು ಕೊರೊನಾ ರೋಗಿಗಳಿಗೆ ಹೆಚ್ಚಾಗಿ ಬಾಧಿಸುತ್ತಿರೋದು ಉಸಿರಾಟದ ಸಮಸ್ಯೆ. ರಾಜ್ಯದಲ್ಲಿ ಸಾಯುತ್ತಿರೋ ಬಹುತೇಕ ಜನರು ಉಸಿರಾಟದ ಸಮಸ್ಯೆಗೊಳಗಾದವರೇ ಹೆಚ್ಚು. ಪ್ರತೀ ದಿನ ಸಾವನ್ನಪ್ಪುತ್ತಿರೋ ರೋಗಿಗಳ ಪೈಕಿ ಶೇ.80 ರಷ್ಟು ಉಸಿರಾಟದ ಸಮಸ್ಯೆಯಿಂದಲೇ ಜೀವ ಬಿಡ್ತಿದ್ದಾರೆ.

ಹೀಗಾಗಿ ಆಸ್ತಮಾ, ವೀಸಿಂಗ್ ಸಮಸ್ಯೆ ಇರೋ ಜನರು ಕೊರೊನಾದಿಂದ ಎಚ್ಚರದಿಂದ ಇರಬೇಕು. ಮಳೆಗಾಲ ಶುರುವಾಗಿದೆ, ವಾತವರಣದಲ್ಲಿ ಶೀತಾಂಶ ಹೆಚ್ಚಾಗಿದೆ. ಇದರಿಂದ ಆಸ್ತಮಾ ರೋಗಿಗಳಿಗೆ ಉಸಿರಾಟದ ತೊಂದರೆ ಕಾಣಿಸಿಕೊಳ್ಳಿದೆ. ಇಂಥಹ ರೋಗಿಗಳಿಗೆ ಕೊರೊನಾ ಕೂಡ ಅಟ್ಯಾಕ್ ಮಾಡಿ ಜೀವಕ್ಕೆ ಕುತ್ತು ತರುತ್ತಿದೆ. ಹೀಗಾಗಿ ಆಸ್ತಮಾ ಇರೋರು ಎಚ್ಚರಿಕೆಯಿಂದ ಇರಬೇಕು ಎಂದು ವೈದ್ಯರು ಸಲಹೆ ಮಾಡಿದ್ದಾರೆ.

ಬೇರೆ ಬೇರೆ ಖಾಯಿಲೆಗಳಿಗಿಂತ, ಉಸಿರಾಟದ ತೊಂದರೆ ಇಂದ ಬಲಿಯಾಗ್ತಿರೋರೆ ಹೆಚ್ಚು. ಉಸಿರಾಟದ ಸಮಸ್ಯೆ ಇರುವವರು ಎಚ್ಚೆತ್ತುಕೊಳ್ಳಲೇಬೇಕು. ಕಳೆದ ಹತ್ತು ದಿನಗಳಲ್ಲಿ ಬರೋಬ್ಬರಿ 998 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಈ ಪೈಕಿ ಸುಮಾರು 800 ಮಂದಿ ಉಸಿರಾಟದ ತೊಂದರೆಯಿಂದಲೇ ಬಲಿಯಾಗಿದ್ದಾರೆ.

ಈ ಮೊದಲೇ ಆಸ್ತಮ, ಕ್ಷಯ, ಶ್ವಾಸಕೋಶ ಸಂಬಂಧಿ ಕಾಯಿಲೆ ಇರುವವರೇ ಹೆಚ್ಚು ಬಲಿಯಾಗುತ್ತಿದ್ದಾರೆ. ಹೀಗಾಗಿ ಇಂಥವರು ಇನ್ನೂ ಮೂರ್ನಾಲ್ಕು ತಿಂಗಳು ಹೆಚ್ಚು ಜಾಗರೂಕತೆಯಿಂದ ಇರಬೇಕು ಎಂದು ಹಿರಿಯ ವೈದ್ಯರು ನಾಗರಿಕರಿಗೆ ಎಚ್ಚರಿಕೆ ನೀಡಿದ್ದಾರೆ.