ಕೋವಿಡ್ ಸೆಂಟರ್‌ನಲ್ಲಿ ಮಹಿಳಾ ಅಧಿಕಾರಿಗಳ ಜೊತೆ ಹಿರಿಯ ಅಧಿಕಾರಿ ಅನುಚಿತ ವರ್ತನೆ?
ಬೆಂಗಳೂರು: ಕೊರೊನಾ ಸೋಂಕಿತರನ್ನು ಗುಣಪಡಿಸಬೇಕಿದ್ದ ಬೆಂಗಳೂರು ನಗರದ ಕೊವಿಡ್ ಕೇರ್ ಸೆಂಟರ್‌ಗಳು ಈಗ ಐಎಎಸ್ ಮತ್ತು ಕೆಎಸ್ ಅಧಿಕಾರಿಗಳ ನಡುವಿನ ಕಿತ್ತಾಟಕ್ಕೆ ವೇದಿಕೆಯಾಗಿವೆ. ಹಿರಿಯ ಐಎಎಸ್ ಅಧಿಕಾರಿಯ ವಿರುದ್ಧ ಏಳು ಜನ ಪ್ರೊಬೆಷನರಿ ತಹಶಿಲ್ದಾರರು ತಿರುಗಿ ಬಿದ್ದಿದ್ದು, ದೂರು ನೀಡಿದ್ದಾರೆ. ಬೆಂಗಳೂರಿನ ಕೋವಿಡ್ ಕೇರ್ ಸೆಂಟರ್ ಗಳ ಟಾಸ್ಕ್ ಫೋರ್ಸ್ ಲೀಡರ್ ಪ್ರೊಬೆಷನರಿ ತಹಶೀಲ್ದಾರಗಳಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಬಿಬಿಎಂಪಿ ಆಯುಕ್ತರಿಗೆ ಏಳು ಜನ ಪ್ರೊಬೆಷನರಿ ತಹಶೀಲ್ದಾರರು ದೂರು ನೀಡಿದ್ದಾರೆ. ಟಾಸ್ಕ್ ಫೊರ್ಸ್ ಲೀಡರ್ ಆಗಿರುವ ಐಎಎಸ್ […]

ಬೆಂಗಳೂರು: ಕೊರೊನಾ ಸೋಂಕಿತರನ್ನು ಗುಣಪಡಿಸಬೇಕಿದ್ದ ಬೆಂಗಳೂರು ನಗರದ ಕೊವಿಡ್ ಕೇರ್ ಸೆಂಟರ್‌ಗಳು ಈಗ ಐಎಎಸ್ ಮತ್ತು ಕೆಎಸ್ ಅಧಿಕಾರಿಗಳ ನಡುವಿನ ಕಿತ್ತಾಟಕ್ಕೆ ವೇದಿಕೆಯಾಗಿವೆ. ಹಿರಿಯ ಐಎಎಸ್ ಅಧಿಕಾರಿಯ ವಿರುದ್ಧ ಏಳು ಜನ ಪ್ರೊಬೆಷನರಿ ತಹಶಿಲ್ದಾರರು ತಿರುಗಿ ಬಿದ್ದಿದ್ದು, ದೂರು ನೀಡಿದ್ದಾರೆ.
ಬೆಂಗಳೂರಿನ ಕೋವಿಡ್ ಕೇರ್ ಸೆಂಟರ್ ಗಳ ಟಾಸ್ಕ್ ಫೋರ್ಸ್ ಲೀಡರ್ ಪ್ರೊಬೆಷನರಿ ತಹಶೀಲ್ದಾರಗಳಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಬಿಬಿಎಂಪಿ ಆಯುಕ್ತರಿಗೆ ಏಳು ಜನ ಪ್ರೊಬೆಷನರಿ ತಹಶೀಲ್ದಾರರು ದೂರು ನೀಡಿದ್ದಾರೆ. ಟಾಸ್ಕ್ ಫೊರ್ಸ್ ಲೀಡರ್ ಆಗಿರುವ ಐಎಎಸ್ ಅಧಿಕಾರಿ, ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಏಳು ಜನ ಪ್ರೊಬೆಷನರಿ ತಹಶೀಲ್ದಾರರಿಗೆ ನಿಮ್ಮ ಮೇಲೆ ಎಫ್ ಐ ಆರ್ ಹಾಕಿಸ್ತೇನೆ, ಸಸ್ಪೆಂಡ್ ಮಾಡಿಸ್ತೇನೆ ಎಂದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇಷ್ಟೇ ಅಲ್ಲ ಮಹಿಳಾ ಅಧಿಕಾರಿಗಳ ಜೊತೆ ಹಿರಿಯ ಅಧಿಕಾರಿ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಡ್ಯೂಟಿಯಲ್ಲಿ ಇರುವ ಬಗ್ಗೆ ಪದೇ ಪದೇ ಸೆಲ್ಫಿ ಕಳುಹಿಸುವಂತೆ ಒತ್ತಡ ಹಾಕ್ತಿದ್ದಾರೆ. ಇದರಿಂದ ನಾವು ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಿದ್ದೇವೆಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
ಆದ್ರೆ ಕೋವಿಡ್ ಕೇರ್ ಸೆಂಟರ್ ಟಾಸ್ಕ್ ಲೀಡರ್ ರಾಜೇಂದ್ರ ಕುಮಾರ್ ಕಠಾರಿಯಾ ಮಾತ್ರ, ನಾನು ಕೆಲಸ ಮಾಡುವಂತೆ ಹೇಳಿದ್ದೆನೆಯೇ ಹೊರತು. ಬೇರೆನೂ ನನಗೆ ಗೊತ್ತಿಲ್ಲ. ಇನ್ನು ದೂರು ಕೊಟ್ಟಿರುವ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.