AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಂಡಿನ ದಾಳಿ, ಅಧ್ಯಕ್ಷ ಟ್ರಂಪ್​ರನ್ನು ಸುರಕ್ಷಿತ ತಾಣಕ್ಕೆ ಕರೆದೊಯ್ದ ಭದ್ರತಾಧಿಕಾರಿಗಳು

[lazy-load-videos-and-sticky-control id=”TZ_EDRao1z4″] ವಾಷಿಂಗ್ಟನ್: ಅಮೆರಿಕ ನೂತನ ಅಧ್ಯಕ್ಷರ ಆಯ್ಕೆಗೆ ಕಸರತ್ತು ನಡೆಸುತ್ತಿರುವ ಸಂದರ್ಭದಲ್ಲಿ ಶಕ್ತಿಕೇಂದ್ರ ವಾಷಿಂಗ್ಟನ್ ಸಮೀಪ ಗುಂಡಿನ ದಾಳಿ ನಡೆದಿದೆ. ಆ ವೇಳೆ, ಶ್ವೇತ ಭವನದ ಒಳಗೆ ಮಹತ್ವದ ಸುದ್ದಿಗೋಷ್ಠಿ ನಡೆಸುತ್ತಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ರಹಸ್ಯ ಸೇವಾ ಭದ್ರತಾಧಿಕಾರಿಗಳು ಸುತ್ತುವರಿದು ಸುರಕ್ಷಿತ ತಾಣಕ್ಕೆ ಕರೆದೊಯ್ದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಪತ್ರಕರ್ತರನ್ನೂ ಸುರಕ್ಷಿತ ತಾಣಕ್ಕೆ ತಲುಪಿಸಲಾಗಿದೆ ಎಂದು ವೈಟ್​ ಹೌಸ್​ ಮೂಲಗಳು ತಿಳಿಸಿವೆ. ಶ್ವೇತ ಭವನದ ಭದ್ರತೆಗೆ ನಿಯೋಜನೆ ಗೊಂಡಿದ್ದ ಭದ್ರತಾಪಡೆಗಳು ಸ್ವಯಂಚಾಲಿತ ರಫಲ್ಸ್​​ನೊಂದಿಗೆ ಶ್ವೇತಭನವನ್ನ […]

ಗುಂಡಿನ ದಾಳಿ, ಅಧ್ಯಕ್ಷ ಟ್ರಂಪ್​ರನ್ನು ಸುರಕ್ಷಿತ ತಾಣಕ್ಕೆ ಕರೆದೊಯ್ದ ಭದ್ರತಾಧಿಕಾರಿಗಳು
ಡೊನಾಲ್ಡ್​ ಟ್ರಂಪ್​
ಸಾಧು ಶ್ರೀನಾಥ್​
|

Updated on:Aug 11, 2020 | 12:58 PM

Share

[lazy-load-videos-and-sticky-control id=”TZ_EDRao1z4″]

ವಾಷಿಂಗ್ಟನ್: ಅಮೆರಿಕ ನೂತನ ಅಧ್ಯಕ್ಷರ ಆಯ್ಕೆಗೆ ಕಸರತ್ತು ನಡೆಸುತ್ತಿರುವ ಸಂದರ್ಭದಲ್ಲಿ ಶಕ್ತಿಕೇಂದ್ರ ವಾಷಿಂಗ್ಟನ್ ಸಮೀಪ ಗುಂಡಿನ ದಾಳಿ ನಡೆದಿದೆ. ಆ ವೇಳೆ, ಶ್ವೇತ ಭವನದ ಒಳಗೆ ಮಹತ್ವದ ಸುದ್ದಿಗೋಷ್ಠಿ ನಡೆಸುತ್ತಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ರಹಸ್ಯ ಸೇವಾ ಭದ್ರತಾಧಿಕಾರಿಗಳು ಸುತ್ತುವರಿದು ಸುರಕ್ಷಿತ ತಾಣಕ್ಕೆ ಕರೆದೊಯ್ದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಪತ್ರಕರ್ತರನ್ನೂ ಸುರಕ್ಷಿತ ತಾಣಕ್ಕೆ ತಲುಪಿಸಲಾಗಿದೆ ಎಂದು ವೈಟ್​ ಹೌಸ್​ ಮೂಲಗಳು ತಿಳಿಸಿವೆ.

ಶ್ವೇತ ಭವನದ ಭದ್ರತೆಗೆ ನಿಯೋಜನೆ ಗೊಂಡಿದ್ದ ಭದ್ರತಾಪಡೆಗಳು ಸ್ವಯಂಚಾಲಿತ ರಫಲ್ಸ್​​ನೊಂದಿಗೆ ಶ್ವೇತಭನವನ್ನ ಸುತ್ತುವರಿದಿದ್ದಾರೆ. ಇದೇ ವೇಳೆ ಶ್ವೇತ ಭವನದ ಉತ್ತರ ಭಾಗದಲ್ಲಿ ಶಸ್ತ್ರಧಾರಿಯೊಬ್ಬ Secret Service guards ಕಣ್ಣಿಗೆ ಬಿದ್ದಿದ್ದು, ಅವನ ಮೇಲೆ ಗುಂಡಿನ ಮಳೆಗರೆದಿದ್ದಾರೆ.

ಪ್ರಪಂಚ ಅಪಾಯಕಾರಿಯಾಗಿದೆ: ಟ್ರಂಪ್​ ಇನ್ನು ಘಟನೆ ನಂತರ ಸುದ್ದಿಗೋಷ್ಠಿ ಮುಂದುವರಿಸಿದ ಮಾತನಾಡಿರುವ ಟ್ರಂಪ್​ ದಾಳಿ ನಡೆದಿದ್ದು ಶ್ವೇತಭವನದ ಹೊರಗಡೆ. ನನಗೆ ಬೆದರಿಕೆ ಇತ್ತು ಎಂದು ಹೇಳಲಾಗದು. ಆದರೂ ಈ ಪ್ರಪಂಚ ಅಪಾಯಕಾರಿಯಾಗಿದೆ. ಇದು ಯಾವುದೂ ವಿರಳ ಘಟನೆ ಎಂದು ತಳ್ಳಿಹಾಕಲಾಗದು ಎಂದರು.

ನನ್ನ ಭದ್ರತಾಧಿಕಾರಿಗಳು ನಿಜಕ್ಕೂ ಅದ್ಭುತ, ಬೆಸ್ಟ್​ ಬೆಸ್ಟ್​. ಅವರು ತಕ್ಷಣ ನನ್ನ ನೆರವಿಗೆ ಧಾವಿಸಿದ್ದಾರೆ. ಅವರ ಕೈಯಲ್ಲಿ ನಾನು ಸುರಕ್ಷಿತವಾಗಿರಬಲ್ಲೆ ಎಂಬ ನಂಬಿಕೆ ನನಗಿದೆ ಎಂದು ಟ್ರಂಪ್​ ಹೇಳಿದರು.

Published On - 8:46 am, Tue, 11 August 20