ಮೈಸೂರು ಅರಮನೆ ಸಾರ್ವಜನಿಕ ವೀಕ್ಷಣೆಗೆ ವಾರದ ಎಲ್ಲಾ ದಿನವು ಮುಕ್ತ.. ಆದರೆ?
ಮೈಸೂರು: ಕೊರೊನಾ ಸೋಂಕು ವ್ಯಾಪಕವಾಗಿ ಹರಡುವುದನ್ನು ತಪ್ಪಿಸಲು ಸಾರ್ವಜನಿಕರು ಹೆಚ್ಚಾಗಿ ಸೇರುವ ಸ್ಥಳಗಳಿಗೆ ಲಾಕ್ಡೌನ್ ಹೇರಿದ್ದ ಸರ್ಕಾರ, ಈಗ ಹಂತಹಂತವಾಗಿ ಲಾಕ್ಡೌನ್ ಸಡಿಲಗೊಳಿಸಿದೆ. ಹಾಗೆಯೇ ಮೈಸೂರಿನ ಪ್ರಸಿದ್ಧ ಪ್ರವಾಸಿ ತಾಣವಾದ ಅರಮನೆಗೂ ಸಹ ಕೊರೊನಾ ಹಾವಳಿಯಿಂದಾಗಿ ಇಷ್ಟು ದಿನಗಳ ಕಾಲ ಸಾರ್ವಜನಿಕರ ವೀಕ್ಷಣೆಗೆ ಕೆಲವೊಂದು ನಿರ್ಬಂಧ ಹೇರಲಾಗಿತ್ತು. ಆದರೆ ಈಗ ಆ ನಿರ್ಬಂಧಗಳಿಗೆ ತೆರೆ ಎಳೆಯಲಾಗಿದೆ. ಇನ್ನು ಮುಂದೆ ಮೈಸೂರು ಅರಮನೆಯನ್ನು ವಾರದ ಎಲ್ಲ ದಿನವೂ ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಿದ್ದು, ವಾರಾಂತ್ಯದ ದಿನಗಳಾದ ಶನಿವಾರ, ಭಾನುವಾರ ಹಾಗೂ […]

ಮೈಸೂರು: ಕೊರೊನಾ ಸೋಂಕು ವ್ಯಾಪಕವಾಗಿ ಹರಡುವುದನ್ನು ತಪ್ಪಿಸಲು ಸಾರ್ವಜನಿಕರು ಹೆಚ್ಚಾಗಿ ಸೇರುವ ಸ್ಥಳಗಳಿಗೆ ಲಾಕ್ಡೌನ್ ಹೇರಿದ್ದ ಸರ್ಕಾರ, ಈಗ ಹಂತಹಂತವಾಗಿ ಲಾಕ್ಡೌನ್ ಸಡಿಲಗೊಳಿಸಿದೆ. ಹಾಗೆಯೇ ಮೈಸೂರಿನ ಪ್ರಸಿದ್ಧ ಪ್ರವಾಸಿ ತಾಣವಾದ ಅರಮನೆಗೂ ಸಹ ಕೊರೊನಾ ಹಾವಳಿಯಿಂದಾಗಿ ಇಷ್ಟು ದಿನಗಳ ಕಾಲ ಸಾರ್ವಜನಿಕರ ವೀಕ್ಷಣೆಗೆ ಕೆಲವೊಂದು ನಿರ್ಬಂಧ ಹೇರಲಾಗಿತ್ತು. ಆದರೆ ಈಗ ಆ ನಿರ್ಬಂಧಗಳಿಗೆ ತೆರೆ ಎಳೆಯಲಾಗಿದೆ.
ಇನ್ನು ಮುಂದೆ ಮೈಸೂರು ಅರಮನೆಯನ್ನು ವಾರದ ಎಲ್ಲ ದಿನವೂ ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಿದ್ದು, ವಾರಾಂತ್ಯದ ದಿನಗಳಾದ ಶನಿವಾರ, ಭಾನುವಾರ ಹಾಗೂ ಸಾರ್ವತ್ರಿಕ ರಜೆ ದಿನಗಳಲ್ಲೂ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30 ರವರೆಗೆ ಸಾರ್ವಜನಿಕ ವೀಕ್ಷಣೆಗೆ ಸಮಯ ನಿಗದಿ ಮಾಡಲಾಗಿದೆ.
ಆದರೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಹಾಗೂ ಪ್ರತಿ ಭಾನುವಾರ ಸಂಜೆ ಆಯೋಜಿಸಲಾಗುತ್ತಿದ್ದ ಅರಮನೆಯ ವಿದ್ಯುತ್ ದೀಪಾಲಂಕಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ಮೈಸೂರು ಅರಮನೆ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದೆ.