ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯ ಬ್ರಿಸ್ಬೇನ್‌ನಲ್ಲಿ ನಡೆಯುತ್ತಿದೆ. ಇಂದು ಪಂದ್ಯದ ಮೂರನೇ ದಿನ. ಮೂರನೇ ದಿನದ ಮೊದಲ ಸೆಷನ್‌ನಲ್ಲಿ ಟೀಂ ಇಂಡಿಯಾ ಚೇತೇಶ್ವರ ಪೂಜಾರ ಹಾಗೂ ನಾಯಕ ಅಜಿಂಕ್ಯಾ ರಹಾನೆ ಅವರ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ಮಳೆಯಿಂದಾಗಿ ಎರಡನೇ ದಿನದ ಮೂರನೇ ಸೆಷನ್‌ನಲ್ಲಿಯೇ ಪಂದ್ಯವನ್ನು ನಿಲ್ಲಿಸಲಾಯಿತು. ಪಂದ್ಯ ನಿಲ್ಲುವ ವೇಳೆಗೆ ಟೀಂ ಇಂಡಿಯಾ ಪ್ರಮುಖ 2 ವಿಕೆಟ್ ಕಳೆದುಕೊಂಡು 62 ರನ್ ಗಳಿಸಿತ್ತು. ನಾಯಕ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ ಪೂಜಾರ ಬ್ಯಾಟಿಂಗ್ ಉಳಿಸಿಕೊಂಡಿದ್ದರು. ಆದರೆ ಇಂದು 3ನೇ ದಿನದಾಟವನ್ನು ಆರಂಭಿಸಿದ ಈ ಜೋಡಿ ಜವಬ್ದಾರಿಯುತ ಆಟಕ್ಕೆ ಮುಂದಾಗಲಿಲ್ಲ. ಭರವಸೆ ಆಟಗಾರನಾಗಿದ್ದ ಪೂಜಾರ 25 ರನ್ ಗಳಿಸಿ ಹ್ಯಾಝೆಲ್ವುಡ್ಗೆ ವಿಕೆಟ್ ಒಪ್ಪಿಸಿದರೆ ನಾಯಕ ರಹಾನೆ 37 ರನ್ ಗಳಿಸಿ ಮಿಚೆಲ್ ಸ್ಟಾರ್ಕ್ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು.
ಇತ್ತೀಚಿನ ವರದಿಯ ಪ್ರಕಾರ ಭೋಜನ ವಿರಾಮದ ಹೊತ್ತಿಗೆ ಟೀಂ ಇಂಡಿಯಾ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡು 161 ರನ್ ಗಳಿಸಿದೆ. 38 ರನ್ ಗಳಿಸಿರುವ ಮಾಯಾಂಕ್ ಅಗರ್ವಾಲ್ ಹಾಗೂ 4 ರನ್ ಗಳಿಸಿರುವ ರಿಷಭ್ ಪಂತ್ ಕ್ರೀಸ್ನಲ್ಲಿದ್ದಾರೆ.
Published On - 7:43 am, Sun, 17 January 21