ಸಿಎಂ BSY ಸಭೆಯಿಂದ ನಿರ್ಗಮಿಸಿದ ಬಳಿಕವೂ ಅಮಿತ್ ಶಾ ಜೊತೆ ಚರ್ಚೆ: ಕುತೂಹಲ ಕೆರಳಿಸಿದ ನಾಯಕರ ಮೀಟಿಂಗ್

ಕೋರ್ ಕಮಿಟಿ ಸಭೆ ಮುಗಿದ ಬಳಿಕವೂ ಅಮಿತ್ ಶಾ ಜೊತೆ ನಾಲ್ವರು ನಾಯಕರು ಚರ್ಚೆ ಮುಂದುವರಿಸಿದರು ಎಂದು ತಿಳಿದುಬಂದಿದೆ. ಅದರಲ್ಲೂ, ಸಿಎಂ ಬಿ.ಎಸ್‌.ಯಡಿಯೂರಪ್ಪ ಸಭೆಯಿಂದ ನಿರ್ಗಮಿಸಿದ ಬಳಿಕವೂ ನಾಯಕರ ಚರ್ಚೆ ಮುಂದುವರಿಯಿತು ಎಂಬ ಮಾಹಿತಿ ಸಿಕ್ಕಿದೆ.

  • TV9 Web Team
  • Published On - 23:59 PM, 16 Jan 2021
ಸಿಎಂ BSY ಸಭೆಯಿಂದ ನಿರ್ಗಮಿಸಿದ ಬಳಿಕವೂ ಅಮಿತ್ ಶಾ ಜೊತೆ ಚರ್ಚೆ: ಕುತೂಹಲ ಕೆರಳಿಸಿದ ನಾಯಕರ ಮೀಟಿಂಗ್
ಅಮಿತ್​ ಶಾ

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆ ಮುಕ್ತಾಯಗೊಂಡಿತು. ವಿಂಡ್ಸರ್ ಮ್ಯಾನರ್​ ಹೋಟೆಲ್​ನಲ್ಲಿ ನಡೆದ ಸಭೆ ಮುಕ್ತಾಯಗೊಂಡಿತು. ಸಭೆಯಲ್ಲಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಡಿ.ವಿ.ಸದಾನಂದಗೌಡ, ಡಿಸಿಎಂ ಗೋವಿಂದ ಕಾರಜೋಳ, ಗೃಹ ಸಚಿವ ಬೊಮ್ಮಾಯಿ, ಸಚಿವರಾದ ಶೆಟ್ಟರ್, ಆರ್.ಅಶೋಕ್, ಲಿಂಬಾವಳಿ, ಈಶ್ವರಪ್ಪ, ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಮತ್ತು ಬಿಜೆಪಿ ರಾಷ್ಟ್ರೀಯ ಪ್ರ. ಕಾರ್ಯದರ್ಶಿ ಸಿ.ಟಿ.ರವಿ ಹಾಜರಿದ್ದರು.

ಈ ನಡುವೆ, ಕೋರ್ ಕಮಿಟಿ ಸಭೆ ಮುಗಿದ ಬಳಿಕವೂ ಅಮಿತ್ ಶಾ ಜೊತೆ ನಾಲ್ವರು ನಾಯಕರು ಚರ್ಚೆ ಮುಂದುವರಿಸಿದರು ಎಂದು ತಿಳಿದುಬಂದಿದೆ. ಅದರಲ್ಲೂ, ಸಿಎಂ ಬಿ.ಎಸ್‌.ಯಡಿಯೂರಪ್ಪ ಸಭೆಯಿಂದ ನಿರ್ಗಮಿಸಿದ ಬಳಿಕವೂ ನಾಯಕರ ಚರ್ಚೆ ಮುಂದುವರಿಯಿತು ಎಂಬ ಮಾಹಿತಿ ಸಿಕ್ಕಿದೆ.

ಅಮಿತ್‌ ಶಾ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌, ಸಿ.ಟಿ.ರವಿ, ಪ್ರಹ್ಲಾದ್‌ ಜೋಶಿ, ಬಿ.ಎಲ್.ಸಂತೋಷ್‌ ಚರ್ಚೆ ನಡೆಸಿದರು ಎಂಬ ಮಾಹಿತಿ ಲಭ್ಯವಾಗಿದೆ. ಅಮಿತ್ ಶಾ ಅವರ ಹೋಟೆಲ್ ಕೊಠಡಿಯಲ್ಲಿ ಗೃಹ ಸಚಿವರ ಜೊತೆ ನಾಲ್ವರ ಪ್ರತ್ಯೇಕ ಮಾತುಕತೆ ತೀವ್ರ ಕುತೂಹಲ ಕೆರಳಿಸಿದೆ.

ಕರ್ನಾಟಕ ಸಿಎಂ ಜೊತೆ ಕೇಂದ್ರ ಸರ್ಕಾರ ಯಾವತ್ತೂ ಇದ್ದೇ ಇರುತ್ತದೆ -BSY ಕಾರ್ಯವೈಖರಿಗೆ ಅಮಿತ್ ಶಾ ಪ್ರಶಂಸೆ