Australia vs India Test Series ಕುತೂಹಲ ಕೆರಳಿಸಿದ ಬ್ರಿಸ್ಬೇನ್ ಟೆಸ್ಟ್: ಭಾರತೀಯ ಬೌಲರ್​ಗಳ ಮೇಲುಗೈ, ಆಸ್ಟ್ರೇಲಿಯಾ 140-4

|

Updated on: Jan 18, 2021 | 7:45 AM

ಬಾರ್ಡರ್-ಗವಾಸ್ಕರ್ ಟ್ರೋಫಿಯ ಕೊನೆಯ ಪಂದ್ಯ ಬ್ರಿಸ್ಬೇನ್‌ನಲ್ಲಿ ನಡೆಯುತ್ತಿದೆ. 2ನೇ ಇನ್ನಿಂಗ್ಸ್​​ ಆರಂಭಿಸಿರುವ ಆಸ್ಟ್ರೇಲಿಯಾ ಪ್ರಮುಖ 4 ವಿಕೆಟ್​ ಕಳೆದುಕೊಂಡು 140 ರನ್​​ ಗಳಿಸಿದೆ.

Australia vs India Test Series ಕುತೂಹಲ ಕೆರಳಿಸಿದ ಬ್ರಿಸ್ಬೇನ್ ಟೆಸ್ಟ್: ಭಾರತೀಯ ಬೌಲರ್​ಗಳ ಮೇಲುಗೈ, ಆಸ್ಟ್ರೇಲಿಯಾ 140-4
ವಿಕೆಟ್​ ಪಡೆದ ಸಂಭ್ರಮದಲ್ಲಿ ಟೀಂ ಇಂಡಿಯಾ ಆಟಗಾರರು
Follow us on

ಬ್ರಿಸ್ಬೇನ್‌: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯ ಕೊನೆಯ ಪಂದ್ಯ ಬ್ರಿಸ್ಬೇನ್‌ನಲ್ಲಿ ನಡೆಯುತ್ತಿದೆ. ಇಂದು ಪಂದ್ಯದ ನಾಲ್ಕನೇ ದಿನವಾಗಿದ್ದು, 2ನೇ ಇನ್ನಿಂಗ್ಸ್​​ ಆರಂಭಿಸಿರುವ ಆಸ್ಟ್ರೇಲಿಯಾ ಪ್ರಮುಖ 4 ವಿಕೆಟ್​ ಕಳೆದುಕೊಂಡು 140 ರನ್​​ ಗಳಿಸಿದೆ.

3ನೇ ದಿನದಾಟದಲ್ಲಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್​ನಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು 336 ರನ್​ ಗಳಿಸಲಷ್ಟೇ ಶಕ್ತವಾಗಿತ್ತು. ಹೀಗಾಗಿ ಮೊದಲ ಇನ್ನಿಂಗ್ಸ್​ನಲ್ಲಿ 33 ರನ್​ಗಳ ಮುನ್ನಡೆ​ ಪಡೆದು 2ನೇ ಇನ್ನಿಂಗ್ಸ್​ ಆರಂಭಿಸಿದ ಆಸ್ಟ್ರೇಲಿಯಾ 3ನೇ ದಿನದಾಟದಂತ್ಯಕ್ಕೆ ವಿಕೆಟ್​ ನಷ್ಟವಿಲ್ಲದೆ 24 ರನ್​ ಗಳಿಸಿತ್ತು. ಆಸಿಸ್​ ಪರ ಆರಂಭಿಕರಾದ ವಾರ್ನರ್​ ಹಾಗೂ ಹ್ಯಾರಿಸ್​ 4ನೇ ದಿನದಾಟಕ್ಕೆ ಬ್ಯಾಟಿಂಗ್​ ಕಾಯ್ದುಕೊಂಡಿದ್ದರು.

ವಿಕೆಟ್​ ನಷ್ಟವಿಲ್ಲದೆ 4ನೇ ದಿನದಾಟ ಆರಂಭಿಸಿದ ಆಸಿಸ್​ಗೆ ಆಘಾತ ನೀಡಿದ್ದು ಟೀಂ ಇಂಡಿಯಾ ವೇಗಿ ಶಾರ್ದೂಲ್​ ಠಾಕೂರ್​. 38 ರನ್​ ಗಳಿಸಿ ಆಡುತ್ತಿದ್ದ ಹ್ಯಾರಿಸ್​ನನ್ನು ಪೆವಿಲಿಯನ್​ಗೆ ಕಳುಹಿಸುವುದರಲ್ಲಿ ಠಾಕೂರ್​ ಯಶಸ್ವಿಯಾದರು.ತದನಂತರ 48 ರನ್​ ಗಳಿಸಿ ಅರ್ಧ ಶತಕದ ಹೊಸ್ತಿಲಿನಲ್ಲಿದ್ದ ಡೇವಿಡ್​ ವಾರ್ನರ್​ ವಾಷಿಂಗ್​ಟನ್​ ಸುಂದರ್​ ಸ್ಪಿನ್​ ಬಲೆಗೆ ಬಿದ್ದರು. ನಂತರ ಬಂದ ಮಾರ್ನಸ್ ಲಾಬುಶೆನ್ 25 ರನ್​ಗಳಿಸಿದ್ದಾಗ​ ವೇಗಿ ಮಹಮದ್​ ಸಿರಾಜ್​ಗೆ ವಿಕೆಟ್​ ಒಪ್ಪಿಸಿ ಪೆವಿಲಿಯನ್​ ಸೇರಿದರು. ಈ ವಿಕೆಟ್​ ನಂತರ ಬಂದ ಮ್ಯಾಥ್ಯೂ ವೇಡ್​ ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ವೇಗಿ ಮಹಮದ್​ ಸಿರಾಜ್​ಗೆ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು.

ಊಟದ ವಿರಾಮದ ವೇಳೆಗೆ 4 ವಿಕೆಟ್​ ಕಳೆದುಕೊಂಡಿರುವ ಆಸಿಸ್​ ಪಡೆ 140 ರನ್​ ಗಳಿಸಿದೆ. ಟೀಂ ಇಂಡಿಯಾ ಪರ ವೇಗಿ ಮಹಮದ್​ ಸಿರಾಜ್​ 2 ವಿಕೆಟ್​ ಪಡೆದಿದ್ದರೆ, ಶಾರ್ದೂಲ್​ ಠಾಕೂರ್​ ಹಾಗೂ ವಾಷಿಂಗ್​ಟನ್​ ಸುಂದರ್​ ತಲಾ 1 ವಿಕೆಟ್​ ಪಡೆದಿದ್ದಾರೆ. ​

Published On - 7:24 am, Mon, 18 January 21