ರಮೇಶಣ್ಣ.. ನಿನಗೆ ಒಳ್ಳೆ ಖಾತೆ ಸಿಕ್ಕಿದೆ, ನೋಡ್ಕೊಂಡು ಸುಮ್ನಿರು -ರೇಣುಕಾಚಾರ್ಯ ಸಿಡಿಮಿಡಿ

ರಮೇಶಣ್ಣ ನಿನಗೆ ಒಳ್ಳೆ ಖಾತೆ ಸಿಕ್ಕಿದೆ, ನೋಡ್ಕೊಂಡು ಸುಮ್ನಿರು. ಸರ್ಕಾರ ಬರಲು ಯಾರೊಬ್ರೂ ನಯಾಪೈಸೆ ಖರ್ಚುಮಾಡಿಲ್ಲ. ಸಿಪಿವೈ​ 9 ಕೋಟಿ ಸಾಲ ಮಾಡಿಕೊಂಡಿದ್ದಾರೆ ಅನ್ನೋದು ಸುಳ್ಳು. ಯಾವ್ದೇ ಸಾಲ ಕೊಟ್ಟಿಲ್ಲವೆಂದು ಎಂಟಿಬಿ ನಾಗರಾಜ್​ ಹೇಳಿದ್ದಾರೆ ಎಂದು ರೇಣುಕಾಚಾರ್ಯ ಹೇಳಿದರು.

ರಮೇಶಣ್ಣ.. ನಿನಗೆ ಒಳ್ಳೆ ಖಾತೆ ಸಿಕ್ಕಿದೆ, ನೋಡ್ಕೊಂಡು ಸುಮ್ನಿರು -ರೇಣುಕಾಚಾರ್ಯ ಸಿಡಿಮಿಡಿ
M.P.ರೇಣುಕಾಚಾರ್ಯ (ಎಡ); ರಮೇಶ್ ಜಾರಕಿಹೊಳಿ (ಬಲ)
Follow us
KUSHAL V
|

Updated on:Jan 17, 2021 | 10:38 PM

ದಾವಣಗೆರೆ: 2 ವರ್ಷ ಕಾಲ ಸಚಿವರಾಗಿದ್ದವರನ್ನು ಸಂಪುಟದಿಂದ ಕೈಬಿಡಿ. ಬೇರೆಯವರಿಗೆ ಅವಕಾಶ ನೀಡಿ ಎಂದು ರೇಣುಕಾಚಾರ್ಯ ಆಗ್ರಹಿಸಿದ್ದಾರೆ. ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಶಾಸಕ M.P.ರೇಣುಕಾಚಾರ್ಯ ಹೇಳಿದ್ದಾರೆ.

ರಮೇಶ್ ಜಾರಕಿಹೊಳಿ ಒಬ್ಬರನ್ನು ವೈಭವೀಕರಿಸುತ್ತಿದ್ದಾರೆ. ರಮೇಶಣ್ಣ ನಿನಗೆ ಒಳ್ಳೆ ಖಾತೆ ಸಿಕ್ಕಿದೆ, ನೋಡ್ಕೊಂಡು ಸುಮ್ನಿರು. ಸರ್ಕಾರ ಬರಲು ಯಾರೊಬ್ರೂ ನಯಾಪೈಸೆ ಖರ್ಚುಮಾಡಿಲ್ಲ. ಸಿಪಿವೈ​ 9 ಕೋಟಿ ಸಾಲ ಮಾಡಿಕೊಂಡಿದ್ದಾರೆ ಅನ್ನೋದು ಸುಳ್ಳು. ಯಾವ್ದೇ ಸಾಲ ಕೊಟ್ಟಿಲ್ಲವೆಂದು ಎಂಟಿಬಿ ನಾಗರಾಜ್​ ಹೇಳಿದ್ದಾರೆ ಎಂದು ರೇಣುಕಾಚಾರ್ಯ ಹೇಳಿದರು.

ಎಲ್ಲಾ ಶಾಸಕರು ನನಗೆ ದೂರವಾಣಿ ಕರೆ ಮಾಡುತ್ತಿದ್ದಾರೆ. ಎಲ್ಲ ಶಾಸಕರು ಸೇರಿ ಸಭೆ ನಡೆಸುತ್ತೇವೆ, ಸಿಎಂ ವಿರುದ್ಧ ಅಲ್ಲ. ಆಗಿರುವ ಅವ್ಯವಸ್ಥೆ, ಲೋಪ ಸರಿಪಡಿಸಲು ಸಭೆ ನಡೆಸುತ್ತೇವೆ ಎಂದು ಶಾಸಕ ರೇಣುಕಾಚಾರ್ಯ ಹೇಳಿದರು.

‘ಬಿಎಸ್​ವೈ ವಿರುದ್ಧ ಮಾತನಾಡಿದ್ರೆ ಬಾಯಲ್ಲಿ ಹುಳ ಬೀಳುತ್ತೆ’ ದೆಹಲಿಯಲ್ಲಿ ಸಿಎಂ ಯಡಿಯೂರಪ್ಪ ವಿರುದ್ಧ ದೂರು ನೀಡಿಲ್ಲ. ಯಡಿಯೂರಪ್ಪ ವಿರುದ್ಧ ನಾನು ಯಾವತ್ತು ನಡೆದುಕೊಂಡಿಲ್ಲ. ಯಡಿಯೂರಪ್ಪ ನನಗೆ ರಾಜಕೀಯ ಪಾಠ ಹೇಳಿಕೊಟ್ಟವರು. ಬಿಎಸ್​ವೈ ವಿರುದ್ಧ ಮಾತನಾಡಿದ್ರೆ ಬಾಯಲ್ಲಿ ಹುಳ ಬೀಳುತ್ತೆ ಎಂದು ಶಾಸಕ ಹೇಳಿದರು.

‘ನಾನು ಪಕ್ಷದ ಶಿಸ್ತಿನ ಸಿಪಾಯಿ, ನಾನು ಬಂಡಾಯ ಅಲ್ಲ’ ನಾನು ಪಕ್ಷದ ಶಿಸ್ತಿನ ಸಿಪಾಯಿ, ನಾನು ಬಂಡಾಯ ಅಲ್ಲ. ಸಿಎಂ ಬಿ.ಎಸ್​.ಯಡಿಯೂರಪ್ಪ ನನ್ನ ತಂದೆಯ ಸಮಾನ. ರಾಜ್ಯ ಬಿಜೆಪಿ ಉಸ್ತುವಾರಿಗೆ ವಾಸ್ತವ ಪರಿಸ್ಥಿತಿ ಮನವರಿಕೆ ಮಾಡಿಕೊಡುತ್ತೇನೆ ಎಂದು ಹೇಳಿದರು.

ಬೈ ಎಲೆಕ್ಷನ್​ನಲ್ಲಿ ಅನಿತಾ ಕುಮಾರಸ್ವಾಮಿ ಜೊತೆ ಸಿ.ಪಿ.ಯೋಗೇಶ್ವರ್ ಒಳಒಪ್ಪಂದ ಮಾಡಿಕೊಂಡಿದ್ದರು. ಈಗ ನನ್ನಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿದೆ ಅನ್ನುತ್ತಿದ್ದಾರೆ ಎಂದು ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ರೇಣುಕಾಚಾರ್ಯ ಕಿಡಿಕಾರಿದರು.

ನಾಳೆ ಮತ್ತೆ ದೆಹಲಿಗೆ ಹೋಗ್ತಿದ್ದೇನೆ. ಹೋಗುವ ಮುನ್ನ ಅಸಮಾಧಾನ ಇರುವ ಶಾಸಕರ ಸಭೆ ಬೆಂಗಳೂರಿನಲ್ಲಿ ನಡೆಯುತ್ತೆ. ಬಿಜೆಪಿ ವರಿಷ್ಠರ ಬಳಿ ವ್ಯವಸ್ಥೆ ಸರಿಪಡಿಸಲು ಒತ್ತಾಯ ಮಾಡುತ್ತೇನೆ. ಎಲ್ಲರೂ ಸೇರಿ ಸಭೆ ನಡೆಸುತ್ತೇವೆ, ಇದು ಸಿಎಂ BSY ವಿರುದ್ಧ ಅಲ್ಲ. ಈಗಾಗಿರುವ ಅವ್ಯವಸ್ಥೆ, ಲೋಪ ಸರಿಪಡಿಸಲು ಸಭೆ ನಡೆಸುತ್ತೇವೆ ಎಂದು ಹೇಳಿದರು.

ನನ್ನ ಬಳಿ ಯಾವುದೇ CD ಇಲ್ಲ.. ಇದು ಅಪ್ರಸ್ತುತ, ಅಸಹ್ಯ -ಸಿ.ಪಿ.ಯೋಗೇಶ್ವರ್

Published On - 10:36 pm, Sun, 17 January 21

ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ