Australia vs India Test Series ಅಂತಿಮ ಟೆಸ್ಟ್​ಗೆ ವರುಣನ ಅಡ್ಡಿ, ಡ್ರಾದತ್ತ ಸಾಗಿದ ನಿರ್ಣಾಯಕ ಪಂದ್ಯ..

|

Updated on: Jan 18, 2021 | 11:38 AM

ಟಿ ವಿರಾಮದ ಬಳಿಕ ಮಳೆಯಿಂದಾಗಿ ಮೂರನೇ ಸೆಷನ್​ ನಂತರ ಆಟ ಪ್ರಾರಂಭವಾಗಿಲ್ಲ. ಮಧ್ಯಾಹ್ನದ ಹೊತ್ತಿಗೆ ಮತ್ತು ಸಂಜೆಯ ಹೊತ್ತಿಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮಾಹಿತಿ ನೀಡಿತ್ತು.

Australia vs India Test Series ಅಂತಿಮ ಟೆಸ್ಟ್​ಗೆ ವರುಣನ ಅಡ್ಡಿ, ಡ್ರಾದತ್ತ ಸಾಗಿದ ನಿರ್ಣಾಯಕ ಪಂದ್ಯ..
ಮಳೆಯಿಂದಾಗಿ ಪಂದ್ಯ ಕೆಲಕಾಲ ಸ್ಥಗಿತಗೊಂಡಿದೆ
Follow us on

ಬ್ರಿಸ್ಬೇನ್‌: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯ ಕೊನೆಯ ಪಂದ್ಯ ಬ್ರಿಸ್ಬೇನ್‌ನಲ್ಲಿ ನಡೆಯುತ್ತಿದೆ. ಪಂದ್ಯದ ನಾಲ್ಕನೇ ದಿನದಾಟದಲ್ಲಿ ಟಿ ವಿರಾಮದ ಹೊತ್ತಿಗೆ ಆಸ್ಟ್ರೇಲಿಯಾದ ಸ್ಕೋರ್ 243/7 ಆಗಿದೆ. ಈ ಮೂಲಕ ಆಸ್ಟ್ರೇಲಿಯಾ 276 ರನ್‌ಗಳ ಮುನ್ನಡೆ ಸಾಧಿಸಿದೆ. ಪ್ಯಾಟ್ ಕಮ್ಮಿನ್ಸ್ ಮತ್ತು ಮಿಚೆಲ್ ಸ್ಟಾರ್ಕ್ ಕ್ರೀಸ್‌ನಲ್ಲಿದ್ದಾರೆ.

ಆದರೆ ಟಿ ವಿರಾಮದ ಬಳಿಕ ಮಳೆಯಿಂದಾಗಿ ಮೂರನೇ ಸೆಷನ್​ ನಂತರ ಆಟ ಪ್ರಾರಂಭವಾಗಿಲ್ಲ. ಮಧ್ಯಾಹ್ನದ ಹೊತ್ತಿಗೆ ಮತ್ತು ಸಂಜೆಯ ಹೊತ್ತಿಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮಾಹಿತಿ ನೀಡಿತ್ತು. ಮಾಹಿತಿಯನ್ವಯ ಮಳೆ ಆರಂಭವಾಗಿದ್ದು, ಪಂದ್ಯ ನಡೆಯುವುದು ಅನುಮಾನವಾಗಿದೆ.

ಇದಕ್ಕೂ ಮೊದಲ ಅಂತಿಮ ಟೆಸ್ಟ್​ ಆರಂಭಗೊಂಡ 2ನೇ ದಿನದಾಟದಲ್ಲಿ ಮಳೆಯಿಂದಾಗಿ ಪಂದ್ಯ ನಿಂತುಹೋಗಿತ್ತು. ಅಲ್ಲದೆ ಬ್ರಿಸ್ಬೇನ್ ಸುತ್ತಮುತ್ತ ಇಂದು ಸಂಜೆಯ ಸಮಯಕ್ಕೆ ಮತ್ತೆ ಮಳೆ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಹೀಗಾಗಿ ಈಗಾಗಲೇ ಪಂದ್ಯದ 2ನೇ ದಿನದಾಟ ಮಳೆಗೆ ಆಹುತಿಯಾಗಿದ್ದು, 4ನೇ ದಿನದಾಟವೂ ಮಳೆಯಿಂದ ರದ್ದಾದರೇ ಪಂದ್ಯ ಭಾಗಶಃ ಡ್ರಾದಲ್ಲಿ ಅಂತ್ಯಗೊಳ್ಳಲ್ಲಿದೆ.

ಈಗಾಗಲೇ ಸರಣಿಯಲ್ಲಿ ಎರಡು ತಂಡಗಳು ತಲಾ ಒಂದೊಂದು ಪಂದ್ಯವನ್ನ ಗೆದ್ದು ಸಮಬಲ ಸಾಧಿಸಿವೆ. ಈ ಪಂದ್ಯವೇನಾದರೂ ಮಳೆಯಿಂದ ರದ್ದಾಗಿ ಡ್ರಾನಲ್ಲಿ ಅಂತ್ಯವಾದರೆ, ಸರಣಿ ಸಮಬಲದೊಂದಿಗೆ ಮುಗಿಯಲಿದೆ. ಹೀಗಾಗಿ ಟೀಂ ಇಂಡಿಯಾ ಕಳೆದ ಬಾರಿಯ ಸರಣಿಯಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಯ ವಿಜೇತ ತಂಡವಾಗಿರುವುದರಿಂದ ಟ್ರೋಫಿ ಟೀಂ ಇಂಡಿಯಾದ ಬಳಿಯಲ್ಲೇ ಉಳಿಯಲಿದೆ.

Published On - 11:31 am, Mon, 18 January 21