ಇಂದು ರೈತ ಮಹಿಳಾ ದಿನ: ಕೇಂದ್ರ ಸರ್ಕಾರದ ವಿರುದ್ಧ ರೈತ ಮಹಿಳೆಯರ ಆಕ್ರೋಶದ ಕೂಗು
ಈ ಮೆರವಣಿಗೆಯಲ್ಲಿ ಭಾರತೀಯ ಮಹಿಳಾ ಒಕ್ಕೂಟ, ಅಖಿಲ ಭಾರತ ಪ್ರಜಾಪ್ರಭುತ್ವ ಮಹಿಳಾ ಸಂಘ, ಅಖಿಲ ಭಾರತ ಮಹಿಳಾ ಪ್ರಗತಿಶೀಲ ಸಂಘ ಮತ್ತು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಭಾಗವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ದೆಹಲಿ: ಕೃಷಿ ಕಾಯ್ದೆಗಳ ವಿರುದ್ಧ ಸಿಡಿದೆದ್ದಿರುವ ಪಂಜಾಬ್ ರೈತರು ಇಂದು ರೈತ ಮಹಿಳಾ ದಿನ ಆಚರಿಸಲು ನಿರ್ಧರಿಸಿವೆ. ಪ್ರತಿವರ್ಷ ಜನವರಿ 15 ರಂದು ನಡೆಯುತ್ತಿದ್ದ ರೈತ ಮಹಿಳಾ ದಿನವನ್ನು ಈ ವರ್ಷ ಬದಲಾದ ದಿನದಂದು ಆಚರಿಸಲು ಹೋರಾಟ ನಿರತ ಮಹಿಳೆಯರು ನಿರ್ಧರಿಸಿದ್ದಾರೆ.
ರೈತ ಮಹಿಳಾ ದಿನದ ಪ್ರಯುಕ್ತ ದೆಹಲಿಯ ಬೀದಿಗಳಲ್ಲಿ ಮೆರವಣಿಗೆಗಳನ್ನು ನಡೆಸಲು ರೈತ ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾ ನಿರ್ಧರಿಸಿದ್ದು, ಅಪಾರ ಪ್ರಮಾಣದ ಮಹಿಳೆಯರು ಜಾಥಾದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಜನವರಿ 26ರಂದು ನಡೆಸಲು ನಿರ್ಧರಿಸಲು ಟ್ರ್ಯಾಕ್ಟರ್ ಪರೇಡ್ಗೆ ಬಲ ತುಂಬಲು ಇಂದಿನ ರೈತ ಮಹಿಳಾ ದಿನದ ಆಚರಣೆ ಸಹಕಾರಿಯಾಗಲಿದೆ ಎಂದು ರೈತ ಸಂಘಟನೆಗಳು ತಿಳಿಸಿವೆ. ಅಲ್ಲದೇ ಹರಿಯಾಣದ ಸಾವಿರಾರು ಯುವತಿಯರು ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ಪರೇಡ್ ನಡೆಸಲು ಟ್ರ್ಯಾಕ್ಟರ್ ಚಾಲನೆ ಕಲಿತಿದ್ದಾರೆ.
ಭಾಗವಹಿಸಲಿರುವ ಸಂಘಟನೆಗಳು ಈ ಮೆರವಣಿಗೆಯಲ್ಲಿ ಭಾರತೀಯ ಮಹಿಳಾ ಒಕ್ಕೂಟ, ಅಖಿಲ ಭಾರತ ಪ್ರಜಾಪ್ರಭುತ್ವ ಮಹಿಳಾ ಸಂಘ, ಅಖಿಲ ಭಾರತ ಮಹಿಳಾ ಪ್ರಗತಿಶೀಲ ಸಂಘ ಮತ್ತು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಭಾಗವಹಿಸುತ್ತಿವೆ ಎಂದು ತಿಳಿದುಬಂದಿದೆ. ದೆಹಲಿ ಒಂದೇ ಅಲ್ಲದೇ ಕೇರಳ, ತಮಿಳುನಾಡು ಮುಂತಾದ ರಾಜ್ಯಗಳಲ್ಲೂ ರೈತ ಮಹಿಳೆಯರ ದಿನದ ಪ್ರಯುಕ್ತ ಮೆರವಣಿಗೆ ನಡೆಸಲಿದ್ದೇವೆ ಎಂದು ರೈತ ಸಂಘಟನೆಗಳು ತಿಳಿಸಿವೆ.
ಟ್ರ್ಯಾಕ್ಟರ್ ಪೆರೇಡ್ಗೆ ಹರಿಯಾಣ ಯುವತಿಯರ ಸಿದ್ಧತೆ; ಗಣರಾಜ್ಯೋತ್ಸವದಂದು ಇವರೂ ದೆಹಲಿಗೆ ಧಾವಿಸಲಿದ್ದಾರೆ