India vs Australia Test Series | ಟೀಮ್ ಇಂಡಿಯಾದ ಸದಸ್ಯರ ವಿರುದ್ಧ ಸಲ್ಲದ ಆರೋಪ ಮಾಡಲಾರಂಭಿಸಿದ ಆಸ್ಸೀ ಮಿಡಿಯಾ

|

Updated on: Jan 02, 2021 | 8:39 PM

ಎರಡನೆ ಟೆಸ್ಟ್​ನಲ್ಲಿ ಭಾರತದ ವಿರುದ್ಧ ಸೋತು ದಿಗ್ಭ್ರಾಂತಿಗೊಳಗಾಗಿರುವ ಆಸ್ಟ್ರೇಲಿಯಾ ಆಟಗಾರರು ಮತ್ತು ಅಲ್ಲಿನ ಮಾಧ್ಯಮಗಳಿಗೆ ಆ ಸೋಲನ್ನು ಆರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮೂರನೆ ಟೆಸ್ಟ್​ಗೆ ಮೊದಲು ಭಾರತದ ಆಟಗಾರರನ್ನು ಒತ್ತಡಕ್ಕೆ ಸಿಲುಕಿಸಲು ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ.

India vs Australia Test Series | ಟೀಮ್ ಇಂಡಿಯಾದ ಸದಸ್ಯರ ವಿರುದ್ಧ ಸಲ್ಲದ ಆರೋಪ ಮಾಡಲಾರಂಭಿಸಿದ ಆಸ್ಸೀ ಮಿಡಿಯಾ
ಹೋಟೆಲ್​ನಲ್ಲಿ ಊಟ ಮಾಡುತ್ತಿರುವ ಭಾರತೀಯ ಆಟಗಾರರು
Follow us on

ಆಸ್ಟ್ರೇಲಿಯಾದಲ್ಲಿ ಟೆಸ್ಟ್​ ಸರಣಿ ಆಡುತ್ತಿರುವ ಟೀಮ್ ಇಂಡಿಯಾದ ಸದಸ್ಯರಿಗೆ ಅನಗತ್ಯ ಕಿರಿಕಿರಿ ಉಂಟು ಮಾಡಿ ಒತ್ತಡಕ್ಕೆ ಸಿಕ್ಕಿಸುವ ಪ್ರಯತ್ನ ಆ ದೇಶದಲ್ಲಿ ಜೋರಾಗಿ ನಡೆದಿರುವಂತಿದೆ. ಸಾಮಾನ್ಯವಾಗಿ, ಆಸ್ಟ್ರೇಲಿಯಾದ ಹಾಲಿ ಮತ್ತು ಮಾಜಿ ಆಟಗಾರರು ಭಾರತೀಯ ಆಟಗಾರರ ಬಗ್ಗೆ ಇಲ್ಲಸಲ್ಲದ ಕಾಮೆಂಟ್ ಮಾಡಿ ಅವರ ಫೋಕಸ್ ಕೆಡಿಸುವ ಪ್ರಯತ್ನ ಮಾಡುತ್ತಾರೆ. ಆದರೆ ಈಗ ಅಲ್ಲಿನ ಮಿಡಿಯಾ ಕೂಡ ಅವರೊಂದಿಗೆ ಕೈ ಜೋಡಿಸಿದಂತಿದೆ.

ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಆಸ್ಟ್ರೇಲಿಯಾದ ಜನಪ್ರಿಯ ಪತ್ರಿಕೆಗಳಲ್ಲೊಂದು. ಸದರಿ ಪತ್ರಿಕೆಯಲ್ಲಿ ಇಂದು ಪ್ರಕಟವಾಗಿರುವ ವರದಿಯೊಂದರಲ್ಲಿ, ಭಾರತೀಯ ಕ್ರಿಕೆಟ್ ನಿಯಂತ್ರಣ (ಬಿಸಿಸಿಐ), ಟೀಮ್ ಇಂಡಿಯಾದ ಐವರು ಸದಸ್ಯರು ಕೊವಿಡ್-19 ಶಿಷ್ಟಾಚಾರಗಳನ್ನು ಉಲ್ಲಂಘಿಸಿರುವ ಕುರಿತು ತನಿಖೆ ನಡೆಸುತ್ತಿದೆ ಎಂದು ಹೇಳಲಾಗಿದೆ.

ಆದರೆ, ಈ ಆರೋಪವನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಬಿಸಿಸಿಐ, ಆ ವರದಿಯು ಭಾರತದ ಆಟಗಾರರನ್ನು ಅನಗತ್ಯ ಒತ್ತಡಕ್ಕೆ ಸಿಲುಕಿಸುವ ಕುತಂತ್ರವಾಗಿದೆ ಅಂತ ಹೇಳಿದೆ.

ಹೆಸರು ಹೇಳಿಕೊಳ್ಳಲಿಚ್ಛಿಸದ ಬಿಸಿಸಿಐನ ಆಧಿಕಾರಿಯೊಬ್ಬರು ಭಾರತೀಯ ಸುದ್ದಿ ಸಂಸ್ಥೆಯೊಂದಿಗೆ ಮಾತಾಡಿ, ‘ಆಸ್ಟ್ರೇಲಿಯಾದ ಮಿಡಿಯಾ ಅಲ್ಲಿನ ಆಟಗಾರರ ವಿಸ್ತೃತ ಭಾಗವಾಗಿದೆ. ಭಾರತೀಯ ಆಟಗಾರರ ಬಗ್ಗೆ ಸಲ್ಲದ ಕಾಮೆಂಟ್​ಗಳನ್ನು ಕೇವಲ ಆಸ್ಸೀ ಆಟಗಾರರಷ್ಟೇ ಮಾಡುವುದಿಲ್ಲ, ಮಾಧ್ಯಮದರೂ ಅವರರೊಂದಿಗೆ ಸೇರಿಬಿಡುತ್ತಾರೆ. ಟೀಮ್ ಇಂಡಿಯಾದ ಪ್ರತಿಯೊಬ್ಬ ಸದಸ್ಯನಿಗೆ ಕೊವಿಡ್-19 ಶಿಷ್ಟಾಚಾರಗಳ ಬಗ್ಗೆ ಸಂಪೂರ್ಣ ಅರಿವಿದೆ. ಅವರೆಲ್ಲ ಪ್ರಜ್ಞಾವಂತರು’ ಎಂದು ಹೇಳಿದ್ದಾರೆ.

ನವಲ್​ದೀಪ್ ಸಿಂಗ್ ಪಾವತಿಸಿದ ಬಿಲ್ ಇದೇ

ಅಸಲಿಗೆ ಆಗಿದ್ದೇನೆಂದರೆ, ಶುಕ್ರವಾರದಂದು ರೋಹಿತ್ ಶರ್ಮ, ಶುಭ್ಮನ್ ಗಿಲ್, ನವದೀಪ್ ಸೈನಿ ಮತ್ತು ರಿಷಬ್ ಪಂತ್ ಮೆಲ್ಬರ್ನ್ ನಗರದಲ್ಲಿನ ಹೋಟೆಲೊಂದಕ್ಕೆ ಮಧ್ಯಾಹದ ಊಟ ಮಾಡಲು ತೆರಳಿದ್ದಾರೆ. ಅದೇ ಸಮಯಕ್ಕೆ ಅಲ್ಲಿಗೆ ತನ್ನ ಪತ್ನಿಯೊಂದಿಗೆ ಆಗಮಿಸಿದ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಆಟಗಾರರನ್ನು ಕಂಡು ತಂಬಾ ಖುಷಿಯಾಗಿದ್ದಾರೆ. ಟೀಮ್ ಇಂಡಿಯಾ ಕಟ್ಟಾ  ಅಭಿಮಾನಿಯ ಹೆಸರು ನವಲ್​ದೀಪ್ ಸಿಂಗ್. ಈ ಮಹಾಶಯ ಆಟಗಾರರಿಗೆ ಗೊತ್ತಾಗದಂತೆ ಅವರ ಬಿಲ್ ಅನ್ನು ತಾವೇ ಪಾವತಿಸಿಬಿಟ್ಟಿದ್ದಾರೆ. ನಂತರ ತಮ್ಮ ಟ್ವಿಟ್ಟರ್ ಹ್ಯಾಂಡಲ್​ನಲ್ಲಿ ಆಟಗಾರರನ್ನು ಭೇಟಿಯಾಗಿದ್ದು, ಅವರೊಂದಿಗೆ ಮಾತಾಡಿದ್ದನ್ನು ಬರೆದುಕೊಳ್ಳುವಾಗ, ಪಂತ್ ಅವರನ್ನು ತಬ್ಬಿಕೊಂಡೆ ಅಂತಲೂ ಬರೆದುಬಿಟ್ಟಿದ್ದಾರೆ. ಈ ತಬ್ಬಿಕೊಂಡಿರುವ ವಿಷಯವನ್ನೇ ಸಿಡ್ನಿ

ಬಿಸಿಸಿಐ ಕಚೇರಿ

ಮಾರ್ನಿಂಗ್ ಹೆರಾಲ್ಡ್ ದೊಡ್ಡದನ್ನಾಗಿ ಮಾಡಿ ಪ್ರಕಟಿಸಿದೆ. ಬಯೊ-ಸೆಕ್ಯುರಿಟಿ-ಬಬಲ್​ನಿಂದ ಆಚೆ ಬರುತ್ತಿರುವ ಭಾರತದ ಆಟಗಾರರು ಕೊವಿಡ್-19ಗೆ ಸಂಬಂಧಿಸಿದ ಶಿಷ್ಟಾಚಾರಗಳನ್ನು ಗಾಳಿಗೆ ತೂರುತ್ತಿದ್ದಾರೆ ಅಂತ ವರದಿಯಲ್ಲಿ ಹೇಳಲಾಗಿದೆ.

ಆದರೆ, ನವಲ್​ದೀಪ್ ಸಿಂಗ್ ಇಂದು ಬೆಳಗ್ಗೆ, ನಾನು ಯಾವ ಅಟಗಾರನನ್ನೂ ತಬ್ಬಿಕೊಳ್ಳಲಿಲ್ಲ, ನನ್ನ ಬಗ್ಗೆ ಹೆಚ್ಚಿಸಿಕೊಳ್ಳಲು ಹಾಗೆ ಬರೆದುಕೊಂಡೆ ಅಂತ ಸ್ಪಷ್ಟೀಕರಣ ನೀಡಿದ್ದಾರೆ.

‘ಮೆಲ್ಬರ್ನ್​ನಲ್ಲಿ ಅನುಭವಿಸಿದ ಹೀನಾಯ ಸೋಲಿನಿಂದ ಆಸ್ಟ್ರೇಲಿಯನ್ನರು ಕಂಗೆಟ್ಟಿದ್ದಾರೆ. ಸರಣಿಯಲ್ಲಿ ಭಾರತ ಹಾಗೆ ಕಮ್ ಬ್ಯಾಕ್ ಮಾಡಬಹುದೆಂದು ನಿರೀಕ್ಷಿಸಿರದ ಆಸ್ಸೀಗಳಿಗೆ ದೊಡ್ಡ ಆಘಾತವಾಗಿದೆ. ಮುಂದಿನ ಟೆಸ್ಟ್​ಗಳಲ್ಲೂ ಸೋಲುಣ್ಣುವ ಭೀತಿ ಅವರನ್ನು ಕಾಡುತ್ತಿದೆ. ಹಾಗಾಗೇ ಅವರು ಟೀಮ್ ಇಂಡಿಯಾದ ಸದಸ್ಯರ ವಿರುದ್ಧ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ,’ ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ.

ರಹಾನೆ ಒಂದು ಟೆಸ್ಟ್ ಗೆದ್ದ ಮಾತ್ರಕ್ಕೆ ಕೊಹ್ಲಿಗಿಂತ ಶ್ರೇಷ್ಠ ನಾಯಕನಾಗಲಾರ: ದೀಪ್​ ದಾಸ್​ಗುಪ್ತಾ

Published On - 7:19 pm, Sat, 2 January 21