ಬೆಂಗಳೂರು ಕೊವಿಡ್ ಉಸ್ತುವಾರಿ ಸಚಿವರ ಕ್ಷೇತ್ರದಲ್ಲೇ ನಿರ್ಲಕ್ಷ್ಯ

ಬೆಂಗಳೂರು: ನಗರದ ಕೊವಿಡ್ ಉಸ್ತುವಾರಿ ಹೊತ್ತಿರುವ ಕಂದಾಯ ಸಚಿವ ಆರ್​.ಅಶೋಕ್​ ಕ್ಷೇತ್ರದಲ್ಲೇ ಅಧಿಕಾರಿಗಳ ನಿರ್ಲಕ್ಷ್ಯ ಕಂಡುಬಂದಿದೆ. ಸಚಿವರ ಕ್ಷೇತ್ರವಾದ ಪದ್ಮನಾಭನಗರದಲ್ಲಿ ನಿನ್ನೆ ಒಬ್ಬರಿಗೆ ಕೊರೊನಾ ಸೋಂಕು ಪತ್ತೆಯಾಗಿತ್ತು. ಹಾಗಾಗಿ ಪದ್ಮನಾಭನಗರದ ಇಟ್ಟಮಡು ಬಳಿ ವಾಸವಿದ್ದ ಸೋಂಕಿತ ವ್ಯಕ್ತಿಯನ್ನು ನಿನ್ನೆ ರಾತ್ರಿ ಆಸ್ಪತ್ರೆಗೆ ಶಿಫ್ಟ್ ಮಾಡಿದ್ರು. ಸೋಂಕಿತನಿದ್ದ ರಸ್ತೆಯನ್ನ ಸ್ಯಾನಿಟೈಸ್​ ಮಾಡಿಲ್ಲ! ಆದರೂ ಇಲ್ಲಿಯವರೆಗೆ ಸೋಂಕಿತ ವಾಸವಿದ್ದ ರಸ್ತೆಯನ್ನ ಸ್ಯಾನಿಟೈಸ್ ಮಾಡಿಲ್ಲವಂತೆ. ಜೊತೆಗೆ ಅದೇ ರಸ್ತೆಯಲ್ಲಿ ಸಾರ್ವಜನಿಕರು ಹಾಗೂ ಮಕ್ಕಳು ಓಡಾಡುವ ಪರಿಸ್ಥಿತಿ ಎದುರಾಗಿದೆ ಎಂದು ಸ್ಥಳೀಯರು ಆಕ್ರೋಶ […]

ಬೆಂಗಳೂರು ಕೊವಿಡ್ ಉಸ್ತುವಾರಿ ಸಚಿವರ ಕ್ಷೇತ್ರದಲ್ಲೇ ನಿರ್ಲಕ್ಷ್ಯ

Updated on: Jun 28, 2020 | 11:16 AM

ಬೆಂಗಳೂರು: ನಗರದ ಕೊವಿಡ್ ಉಸ್ತುವಾರಿ ಹೊತ್ತಿರುವ ಕಂದಾಯ ಸಚಿವ ಆರ್​.ಅಶೋಕ್​ ಕ್ಷೇತ್ರದಲ್ಲೇ ಅಧಿಕಾರಿಗಳ ನಿರ್ಲಕ್ಷ್ಯ ಕಂಡುಬಂದಿದೆ. ಸಚಿವರ ಕ್ಷೇತ್ರವಾದ ಪದ್ಮನಾಭನಗರದಲ್ಲಿ ನಿನ್ನೆ ಒಬ್ಬರಿಗೆ ಕೊರೊನಾ ಸೋಂಕು ಪತ್ತೆಯಾಗಿತ್ತು. ಹಾಗಾಗಿ ಪದ್ಮನಾಭನಗರದ ಇಟ್ಟಮಡು ಬಳಿ ವಾಸವಿದ್ದ ಸೋಂಕಿತ ವ್ಯಕ್ತಿಯನ್ನು ನಿನ್ನೆ ರಾತ್ರಿ ಆಸ್ಪತ್ರೆಗೆ ಶಿಫ್ಟ್ ಮಾಡಿದ್ರು.

ಸೋಂಕಿತನಿದ್ದ ರಸ್ತೆಯನ್ನ ಸ್ಯಾನಿಟೈಸ್​ ಮಾಡಿಲ್ಲ!
ಆದರೂ ಇಲ್ಲಿಯವರೆಗೆ ಸೋಂಕಿತ ವಾಸವಿದ್ದ ರಸ್ತೆಯನ್ನ ಸ್ಯಾನಿಟೈಸ್ ಮಾಡಿಲ್ಲವಂತೆ. ಜೊತೆಗೆ ಅದೇ ರಸ್ತೆಯಲ್ಲಿ ಸಾರ್ವಜನಿಕರು ಹಾಗೂ ಮಕ್ಕಳು ಓಡಾಡುವ ಪರಿಸ್ಥಿತಿ ಎದುರಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವರ ಕ್ಷೇತ್ರದಲ್ಲೇ ಹೀಗಾದ್ರೆ ಇನ್ನು ಜನಸಾಮಾನ್ಯರ ಏರಿಯಾಗಳ ಪರಿಸ್ಥಿತಿ ಏನು ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.

ಟಿವಿ 9 ವರದಿ ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು
ಇನ್ನು ಟಿವಿ9 ನಲ್ಲಿ ಈ ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಅಧಿಕಾರಿಗಳು ರಸ್ತೆಯನ್ನು ಸ್ಯಾನಿಟೈಸ್ ಮಾಡಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪಾಲಿಕೆಯ ಸಿಬ್ಬಂದಿ ರಸ್ತೆಗೆ ಔಷಧಿ ಸಿಂಪಡಿಸಿ ಸ್ಯಾನಿಟೈಸ್​ ಮಾಡಿದರು.

Published On - 10:39 am, Sun, 28 June 20