ಅನ್ಲಾಕ್ ಸಮಯದಲ್ಲಿ ಕೊರೊನಾವನ್ನು ಸೋಲಿಸಬೇಕಿದೆ -ಪ್ರಧಾನಿ ಮೋದಿ ಕರೆ
ದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ 66ನೇ ಆವೃತ್ತಿಯ ಮನ್ ಕೀ ಬಾತ್‌ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಕಾರ್ಯಕ್ರಮದಲ್ಲಿ ಅನೇಕ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು ಕೊರೊನಾ ಮಹಾಮಾರಿಯಿಂದ ಮಾನವ ಕುಲಕ್ಕೆ ಸಂಕಷ್ಟ ಎದುರಾಗಿದೆ. 2020ನೇ ವರ್ಷ ಬೇಗ ಮುಗಿಯುತ್ತಿಲ್ಲ ಎಂದು ಅನಿಸುತ್ತಿದೆ. 2020ನೇ ವರ್ಷ ಕೆಲವರಿಗೆ ಇಷ್ಟವಾಗುತ್ತಿದೆ. ಕೆಲವರಿಗೆ ಇಷ್ಟವಾಗುತ್ತಿಲ್ಲ ಎಂದು 2020ವರ್ಷದಲ್ಲಿ ಎದುರಾದ ಸಂಕಷ್ಟದ ಕುರಿತು ಮಾತನಾಡುದ್ರು. ಪ್ರಸಕ್ತ ವರ್ಷದಲ್ಲಿ ಪ್ರಕೃತಿ ವಿಕೋಪಗಳು ಸಹ ಸಂಭವಿಸಿವೆ. ಈ ವರ್ಷ ಹಲವು ಸವಾಲುಗಳು ಎದುರಾಗುತ್ತಿವೆ. […]
ದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ 66ನೇ ಆವೃತ್ತಿಯ ಮನ್ ಕೀ ಬಾತ್‌ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಕಾರ್ಯಕ್ರಮದಲ್ಲಿ ಅನೇಕ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು ಕೊರೊನಾ ಮಹಾಮಾರಿಯಿಂದ ಮಾನವ ಕುಲಕ್ಕೆ ಸಂಕಷ್ಟ ಎದುರಾಗಿದೆ. 2020ನೇ ವರ್ಷ ಬೇಗ ಮುಗಿಯುತ್ತಿಲ್ಲ ಎಂದು ಅನಿಸುತ್ತಿದೆ. 2020ನೇ ವರ್ಷ ಕೆಲವರಿಗೆ ಇಷ್ಟವಾಗುತ್ತಿದೆ. ಕೆಲವರಿಗೆ ಇಷ್ಟವಾಗುತ್ತಿಲ್ಲ ಎಂದು 2020ವರ್ಷದಲ್ಲಿ ಎದುರಾದ ಸಂಕಷ್ಟದ ಕುರಿತು ಮಾತನಾಡುದ್ರು.
ಪ್ರಸಕ್ತ ವರ್ಷದಲ್ಲಿ ಪ್ರಕೃತಿ ವಿಕೋಪಗಳು ಸಹ ಸಂಭವಿಸಿವೆ. ಈ ವರ್ಷ ಹಲವು ಸವಾಲುಗಳು ಎದುರಾಗುತ್ತಿವೆ. ಸವಾಲುಗಳನ್ನು ಮೆಟ್ಟಿ ನಾವು ಒಂದಾಗಿ ಮುನ್ನಡೆಯಬೇಕು. ಕೊರೊನಾ ವಿರುದ್ಧ ಹೋರಾಟ ಸುದೀರ್ಘವಾಗಿ ನಡೆಯಲಿದೆ. ಲಡಾಖ್‌ನಲ್ಲಿ ಭಾರತದ ಕಡೆ ಕಣ್ಣೆತ್ತಿ ನೋಡಿದವರಿಗೆ ನಮ್ಮ ಸೈನಿಕರು ತಕ್ಕ ಪ್ರತ್ಯುತ್ತರವನ್ನು ನೀಡಿದ್ದಾರೆ.
ಶೌರ್ಯ ಮೆರೆದು ಹುತಾತ್ಮರಾದ ಸೈನಿಕರಿಗೆ ದೇಶದ ಜನರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಹುತಾತ್ಮರಾದ ಸೈನಿಕರ ಕುಟುಂಬಸ್ಥರು ತಮ್ಮ ಮನೆಯಿಂದ ಮತ್ತೊಬ್ಬರನ್ನು ಸೇನೆಗೆ ಕಳಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಗಡಿಗಳ ರಕ್ಷಣೆ ವಿಚಾರದಲ್ಲಿ ಸೇನೆಯ ತಾಕತ್ತು ನೋಡಿದ್ದೇವೆ. ಭಾರತ ಸ್ನೇಹಕ್ಕೂ ಸಿದ್ಧ, ಕಣ್ಣಲ್ಲಿ ಕಣ್ಣಿಟ್ಟು ನೋಡೋಕೂ ಸಿದ್ಧ. ಹುತಾತ್ಮ ಸೈನಿಕರ ಶೌರ್ಯವನ್ನು ಇಡೀ ದೇಶ ಕೊಂಡಾಡ್ತಿದೆ. ಇಡೀ ದೇಶ ಹುತಾತ್ಮ ಸೈನಿಕರಿಗೆ ಕೃತಜ್ಞವಾಗಿದೆ ಎಂದು ಗಡಿಯಲ್ಲಿ ಚೀನಾ ವಿರುದ್ಧ ಹೋರಾಡಿ ಹುತಾತ್ಮರಾದ ಸೈನಿಕರನ್ನು ಮೋದಿ ನೆನಪಿಸಿಕೊಂಡಿದ್ದಾರೆ.
ಮಾಸ್ಕ್ ಧರಿಸಿ, ನಿರ್ಲಕ್ಷ್ಯ ಬೇಡ ನಮ್ಮ ಲಕ್ಷ್ಯ ಆತ್ಮ ನಿರ್ಭರ ಭಾರತ ನಿರ್ಮಾಣವಾಗಿದೆ. ಅನ್ಲಾಕ್ ಸಮಯದಲ್ಲಿ ಕೊರೊನಾವನ್ನು ಸೋಲಿಸಬೇಕಿದೆ. ಕೊರೊನಾ ನಿಯಂತ್ರಣ ಜತೆ ಅರ್ಥವ್ಯವಸ್ಥೆ ಸದೃಢಗೊಳಿಸಬೇಕು. ಕೊರೊನಾದಿಂದ ನಮ್ಮನ್ನ ರಕ್ಷಿಸಿಕೊಳ್ಳಲು ಮಾಸ್ಕ್ ಧರಿಸಬೇಕು. ದೈಹಿಕ ಅಂತರ ಕಾಪಾಡಿಕೊಳ್ಳಬೇಕು. ಅಭಿವೃದ್ಧಿಗಾಗಿ ಹಲವು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಸಂಕಷ್ಟದ ವೇಳೆ ಹಲವು ವಲಯಗಳ ಅಭಿವೃದ್ಧಿಗೆ ನಿರ್ಧಾರ ಮಾಡಲಾಗಿದೆ. ಕಲ್ಲಿದ್ದಲು ಗಣಿ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿದ್ದೇವೆ. ಇದ್ರ ಜತೆಗೆ ಬಾಹ್ಯಾಕಾಶ ಕ್ಷೇತ್ರದಲ್ಲೂ ಸಾಧನೆ ಮಾಡಲಾಗಿದೆ. ಕೃಷಿ ಕ್ಷೇತ್ರದಲ್ಲೂ ದಶಕಗಳಿಂದ ಲಾಕ್‌ಡೌನ್ ಜಾರಿಯಲ್ಲಿತ್ತು. ಆದರೆ ನಾವು ಕೃಷಿ ಕ್ಷೇತ್ರವನ್ನೂ ಅನ್ಲಾಕ್ ಮಾಡಿದ್ದೇವೆ. ಐತಿಹಾಸಿಕ ನಿರ್ಣಯದೊಂದಿಗೆ ಹೊಸ ಗುರಿ ಮುಟ್ಟುತ್ತಿದ್ದೇವೆ.
ಪ್ರತಿಯೊಬ್ಬ ಭಾರತೀಯ ಮತ್ತೊಬ್ಬನ ನೆರವಿಗೆ ಸಿದ್ಧರಿದ್ದಾರೆ ಅರುಣಾಚಲ ಪ್ರದೇಶದ ಸಿಯಾನ್ ಜಿಲ್ಲೆಯ ಮಿಲೆನ್ ಗ್ರಾಮದಲ್ಲಿ ಒಂದು ಉತ್ತಮ ವ್ಯವಸ್ಥೆ ಮಾಡಲಾಗಿದೆ. ಆ ಗ್ರಾಮದ ಉದಾಹರಣೆ ಇಡೀ ದೇಶಕ್ಕೆ ಪ್ರೇರಣೆಯಾಗಿದೆ. ಕೊರೊನಾ ಬಂದಾಗ ಇಡೀ ಗ್ರಾಮ ಲಾಕ್‌ಡೌನ್ ಮಾಡಿದ್ದರು. ಗ್ರಾಮದ ಹೊರಗಡೆ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಿದ್ದರು. ಕ್ವಾರಂಟೈನ್ಗಾಗಿ 14 ಗುಡಿಸಲು ನಿರ್ಮಾಣ ಮಾಡಿದ್ದಾರೆ. ಪ್ರತಿಯೊಬ್ಬ ಭಾರತೀಯ ಮತ್ತೊಬ್ಬನ ನೆರವಿಗೆ ಸಿದ್ಧರಿದ್ದಾರೆ ಎಂದರು.
ಜೊತೆಗೆ ನಿಮಗೆ ಸಮಯ ಸಿಕ್ಕರೆ ಹಿರಿಯರ ಸಂದರ್ಶನ ಮಾಡಿ. ನಿಮ್ಮ ಹಿರಿಯರ ಬಾಲ್ಯ ಜೀವನದ ಬಗ್ಗೆ ಪ್ರಶ್ನೆ ಮಾಡಿ. ಅವರು ನಾಟಕ, ಸಿನಿಮಾ ನೋಡುತ್ತಿದ್ದರಾ ಎಂದು ಪ್ರಶ್ನಿಸಿ ಅವರು ನೀಡುವ ಉತ್ತರದಿಂದ ನಿಮಗೆ ಜ್ಞಾನ ಸಿಗಲಿದೆ ಎಂದು ದೇಶದ ಯುವಕರು, ಮಕ್ಕಳಲ್ಲಿ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ. ಹಾಗೂ ಕರ್ನಾಟಕದ ಕಾಮೇಗೌಡರ ಬಗ್ಗೆ ಮೋದಿ ಮನ್ ಕೀ ಬಾತ್‌ನಲ್ಲಿ ಪ್ರಸ್ತಾಪಿಸಿದ್ರು. ಈ ವೇಳೆ ಅವರು 17 ಸಣ್ಣ ಸಣ್ಣ ಕೆರೆಗಳನ್ನು ನಿರ್ಮಾಣ ಮಾಡಿದ್ದಾರೆ. ಕೆರೆಗಳನ್ನು ನಿರ್ಮಿಸಿ ನೀರಿನ ಸಮಸ್ಯೆಯನ್ನು ಬಗೆಹರಿಸಿದ್ದಾರೆ ಎಂದ್ರು. ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಬಳಸುವಂತೆ ಮನವಿ
Published On - 10:59 am, Sun, 28 June 20