ನಿವೃತ್ತಿಯಾದ ನಾಲ್ಕೇ ದಿನಕ್ಕೆ ಕೋವಿಡ್ ವಾರಿಯರ್ ಸಾವು! ಎಲ್ಲಿ?
ಕೊರೊನಾ ಸೋಂಕಿತರ ಆರೈಕೆಯಲ್ಲಿ ನರ್ಸ್ಗಳ ಪಾತ್ರ ದೊಡ್ಡದು. ತೆಲಂಗಾಣದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡ್ತಿದ್ದ ಹೆಡ್ ನರ್ಸ್ ಒಬ್ಬರು ಸೋಂಕಿನಿಂದಲೇ ಮೃತಪಟ್ಟಿದ್ದಾರೆ. ವಿಪರ್ಯಾಸ ಅಂದ್ರೆ, ಸರ್ಕಾರಿ ಆಸ್ಪತ್ರೆಯಿಂದ 4 ದಿನದ ಹಿಂದೆಯಷ್ಟೇ ನಿವೃತ್ತಿ ಹೊಂದಿದ್ದರು. ಸೋಂಕು ಪತ್ತೆ ಬಳಿಕ ಎದೆರೋಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. 5 ಲಕ್ಷ ದಾಟಿದ ಸೋಂಕಿತರು ಭಾರತದಲ್ಲಿ ಕೊರೊನಾ ಸೋಂಕು ಅಬ್ಬರಿಸಿ ಬೊಬ್ಬರಿಯುತ್ತಲೇ ಇದೆ. ದೇಶದಲ್ಲಿ ಸೋಂಕಿತರ ಸಂಖ್ಯೆ 5 ಲಕ್ಷದ 9 ಸಾವಿರದ 446ಕ್ಕೆ ಏರಿಕೆಯಾಗಿದೆ. ಕಳೆದ 24 […]
ಕೊರೊನಾ ಸೋಂಕಿತರ ಆರೈಕೆಯಲ್ಲಿ ನರ್ಸ್ಗಳ ಪಾತ್ರ ದೊಡ್ಡದು. ತೆಲಂಗಾಣದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡ್ತಿದ್ದ ಹೆಡ್ ನರ್ಸ್ ಒಬ್ಬರು ಸೋಂಕಿನಿಂದಲೇ ಮೃತಪಟ್ಟಿದ್ದಾರೆ. ವಿಪರ್ಯಾಸ ಅಂದ್ರೆ, ಸರ್ಕಾರಿ ಆಸ್ಪತ್ರೆಯಿಂದ 4 ದಿನದ ಹಿಂದೆಯಷ್ಟೇ ನಿವೃತ್ತಿ ಹೊಂದಿದ್ದರು. ಸೋಂಕು ಪತ್ತೆ ಬಳಿಕ ಎದೆರೋಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
5 ಲಕ್ಷ ದಾಟಿದ ಸೋಂಕಿತರು ಭಾರತದಲ್ಲಿ ಕೊರೊನಾ ಸೋಂಕು ಅಬ್ಬರಿಸಿ ಬೊಬ್ಬರಿಯುತ್ತಲೇ ಇದೆ. ದೇಶದಲ್ಲಿ ಸೋಂಕಿತರ ಸಂಖ್ಯೆ 5 ಲಕ್ಷದ 9 ಸಾವಿರದ 446ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 18,552 ಮಂದಿಗೆ ಕೊರೊನ ಸೋಂಕು ದೃಢವಾಗಿದ್ದು, ಸೋಂಕಿನಿಂದ ಈವರೆಗೂ 15,689 ಜನರು ಮೃತಪಟ್ಟಿದ್ದಾರೆ. 2,95, 917 ಜನರು ಸೋಂಕಿನಿಂದ ಗುಣಮುಖ ರಾದ್ರೆ, 1,97,840 ಜನರು ಸೋಂಕಿನಿಂದ ನರಳುತ್ತಿದ್ದಾರೆ.
ದೆಹಲಿಯಲ್ಲಿ ಟೆಸ್ಟಿಂಗ್ ಹೆಚ್ಚಳ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮೆರೀತಿದೆ. ಈವರೆಗೂ ಸೋಂಕಿನ ಸಂಖ್ಯೆ 73,780 ದಾಟಿದ್ರೆ, 2 ಸಾವಿರಕ್ಕೂ ಅಧಿಕ ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಹೀಗಾಗಿ, ಕೊರೊನಾ ಟೆಸ್ಟಿಂಗ್ ಸೆಂಟರ್ ಹೆಚ್ಚಳ ಮಾಡಿದ್ದು, ನಿನ್ನೆ ಒಂದೇ ದಿನ 21,144 ಜನರಿಗೆ ಕೊರೊನಾ ತಪಾಸಣೆ ನಡೆಸಿರೋದಾಗಿ ಸಿಎಂ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ಕೊರೊನಾ ಟೆಸ್ಟಿಂಗ್ ನಾಲ್ಕು ಪಟ್ಟು ಹೆಚ್ಚಾಗಿರೋದಾಗಿ ಕೇಜ್ರಿವಾಲ್ ಹೇಳಿದ್ದಾರೆ.
ನೂಡಲ್ ಅಧಿಕಾರಿಗಳಿಗೆ ಉಸ್ತುವಾರಿ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಒಂದೂವರೆ ಲಕ್ಷದತ್ತ ಮುಟ್ಟುತ್ತಿದ್ದು, 6,931 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಮುಂಬೈನಲ್ಲಿ ಹೆಚ್ಚು ಸೋಂಕಿತರು ಸಾವನ್ನಪ್ಪಿದ್ದರೂ ಸಹ, ಮುಂಬೈ ಪಾಲಿಕೆ ಮೃತರ ಸಂಖ್ಯೆ ನೀಡುವಲ್ಲಿ ಸುಳ್ಳು ಲೆಕ್ಕ ನೀಡ್ತಿದೆ ಅನ್ನೋ ಆರೋಪ ಎದುರಾಗಿದೆ. ಹೀಗಾಗಿ, ಜುಲೈ 1 ರಿಂದ ಬಿಎಂಸಿ ಆಸ್ಪತ್ರೆಗಳಲ್ಲಿರುವ ನೂಡಲ್ ಅಧಿಕಾರಿಗಳೇ ಕೊರೊನಾ ಮೃತರ ಬಗ್ಗೆ ಮಾಹಿತಿ ನೀಡಲಿದ್ದಾರೆ ಅಂತಾ ಬಾಂಬೆ ಮಹಾನಗರ ಪಾಲಿಕೆ ಹೇಳಿದೆ.
ವಿಮೆಗೆ ಆಸ್ಪತ್ರೆ ಬಿಲ್ ಅಗತ್ಯವಿಲ್ಲ ಹೆಲ್ತ್ ಇನ್ಯೂರೆನ್ಸ್ ಮೊತ್ತವನ್ನ ಪಡೆಯಲು ಆಸ್ಪತ್ರೆಗಳಿಗೆ ದಾಖಲಾಗಲೇಬೇಕು ಅನ್ನೋ ನಿಯಮವಿದೆ. ಆದ್ರೆ, ಪಾಲಿಸಿಯ ಲಾಭ ಪಡೆಯಲು ದಿನದ 24 ಗಂಟೆಯಾದರೂ ಅಡ್ಮಿಟ್ ಆಗಬೇಕು. ಆದ್ರೆ, ಕೊರೊನಾ ಸೋಂಕಿತರಲ್ಲಿ ಕೆಲವರು ಆಸ್ಪತ್ರೆಗೆ ದಾಖಲಾಗದೇ, ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವವರಿಗೂ ಇನ್ಸೂರೆನ್ಸ್ ಮೊತ್ತ ಪಡೆಯಲು ಅವಕಾಶ ನೀಡುವುದಾಗಿ ICICI ಜನರಲ್ ಇನ್ಸುರೆನ್ಸ್ ಮುಖ್ಯಸ್ಥ ಸಂಜಯ್ ದತ್ತ ಹೇಳಿದ್ದಾರೆ.
ಇಂಧನ ಗಗನಕ್ಕೆ ಭಾರತೀಯರಿಗೆ ಒಂದ್ಕಡೆ ಇಂಧನ ಬರೆ ಎಳೆಯುತ್ತಿದ್ದರೆ, ಮತ್ತೊಂದ್ಕಡೆ ಇಂಧನ ಬೆರೆ ಬರೆ ಎಳೆಯುತ್ತಿದೆ. ದೇಶದಲ್ಲಿ ಕಳೆದ 21 ದಿನಗಳಿಂದ ಕೊರೊನಾ ಸೋಂಕು ನಿರಂತರವಾಗಿ ಹಬ್ಬುತ್ತಲೇ ಇದ್ದು, ಇಂದೂ ಕೂಡ ತೈಲ ಬೆಲೆ ಏರಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ದರ 25 ಪೈಸೆ ಏರಿಕೆಯಾಗಿದ್ರೆ, ಪ್ರತಿ ಲೀಟರ್ ಡೀಸೆಲ್ ದರ 21 ಪೈಸೆ ಏರಿಕೆಯಾಗಿದೆ. ಅಲ್ಲಿಗೆ 21 ದಿನದಲ್ಲಿ ಲೀಟರ್ ಪೆಟ್ರೋಲ್ ಬೆಲೆ ₹9.12 ಪೈಸೆಯಷ್ಟ ದುಬಾರಿಯಾದ್ರೆ, ಡೀಸೆಲ್ ಬೆಲೆ 10.77 ರೂಪಾಯಿ ಏರಿಕೆಯಾದಂತಾಗಿದೆ.
43 BSF ಸಿಬ್ಬಂದಿಗೆ ಸೋಂಕು ಕೊರೊನಾ ವಾರಿಯರ್ಸ್ ಪಾಲಿಗೆ ವೈರಸ್ ವೈರಿಯಾಗಿ ಪರಿಣಮಿಸುತ್ತಿದೆ. ಇಂದೂ ಮತ್ತೆ 43 ಗಡಿ ಭದ್ರತಾ ಸಿಬ್ಬಂದಿಗೆ ಸೋಂಕು ತಗುಲಿದೆ. 24 ಗಂಟೆಗಳಲ್ಲೇ ಸೋಂಕು ಈ ಪರಿ ಹೆಚ್ಚಾಗಿದ್ದಕ್ಕೆ ಬಿಎಸ್ಎಫ್ನಲ್ಲಿ ಉಳಿದ ಸಿಬ್ಬಂದಿಗೂ ಸೋಂಕಿನ ಭೀತಿ ಶುರುವಾಗಿದೆ. ಈ ವರೆಗೂ 911 ಜನರಿಗೆ ಕೊರೊನಾ ಸೋಂಕು ಹಬ್ಬಿದ್ದು, 633 ಸಿಬ್ಬಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
Published On - 4:50 pm, Sat, 27 June 20