ಕೋಲಾರ: ರಸ್ತೆ ಮೇಲೆ ಜೋತುಬಿದ್ದ ಕೇಬಲ್ಗೆ ಸಿಕ್ಕಿ ಆಟೋ ಡ್ರೈವರ್ ಒಬ್ಬ ಹಾರಿ ಬಂದು ಮಹಿಳೆ ಮೇಲೆ ಬಿದ್ದಿರುವ ಪ್ರಸಂಗ ನಗರದ ಹೊರವಲಯದ ಕೊಂಡರಾಜನಹಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ರಸ್ತೆ ಮೇಲೆ ಬಿದ್ದಿದ್ದ ಕೇಬಲ್ಗೆ ಆಟೋ ಸಿಲುಕಿಕೊಂಡಿದ್ದ ಚಾಲಕನು ಅದನ್ನ ಬಿಡಿಸೋಕೆ ಮುಂದಾದ. ಈ ನಡುವೆ ಬೇರೊಂದು ಗಾಡಿಯ ಚಕ್ರಕ್ಕೆ ಕೇಬಲ್ ಸಿಕ್ಕಿಹಾಕಿಕೊಂಡ ಪರಿಣಾಮ ಆಟೋದಿಂದ ಅದನ್ನ ಬಿಡಿಸಲು ಯತ್ನಿಸುತ್ತಿದ್ದ ಚಾಲಕನನ್ನ ವೈಯರ್ ಸಮೇತ ಹಾರುವಂತೆ ಮಾಡಿತು. ಇದರಿಂದ ಇದಕ್ಕಿದ್ದಂತೆ ಹಾರಿದ ಅಟೋ ಚಾಲಕ ಅಲ್ಲೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬಳ ಮೇಲೆ ಬಿದ್ದಿದ್ದಾನೆ.
ಅದೃಷ್ಟವಶಾತ್ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಹಿಳೆ ಹಾಗೂ ಆಟೋ ಡ್ರೈವರ್ಗೆ ಸಣ್ಣಪುಟ್ಟ ಗಾಯಗಳಾಗಿದ್ದಿ ಚಿಕಿತ್ಸೆಗೆಂದು ಅಸ್ಪತ್ರೆಗೆ ದಾಖಲಿಸಲಾಗಿದೆ.
Published On - 1:32 pm, Wed, 29 July 20