ಮಾರ್ಕೆಟ್​ಗೆ ಎಂಟ್ರಿ ಕೊಟ್ಟ ಅವರೆಕಾಯಿ.. ಎಲ್ಲೆಲ್ಲೂ ಅದರದೇ ಘಮ, ಬೇರೆ ತರಕಾರಿಗಳಿಗೆ ಗುಡ್​ಬೈ ಹೇಳಿ ಖರೀದಿಗೆ ಮುಗಿಬಿದ್ದ ಗ್ರಾಹಕರು

ಚಳಿಗಾಲದಲ್ಲಿ ಮಾತ್ರ ಮಾರುಕಟ್ಟೆಗೆ ಲಗ್ಗೆಯಿಡುವ ಅವರೆಕಾಯಿ ಸವಿರುಚಿಯನ್ನ ಸವಿಯದವರೇ ಇಲ್ಲ. ಮಾರುಕಟ್ಟೆಯಲ್ಲಿ ತರಕಾರಿಗಳನ್ನೇ ಮೀರಿಸುವ ಹಾಗೆ ನಾಟಿ ಅವರೆಕಾಯಿ ಲಗ್ಗೆಯಿಟ್ಟಿದೆ. ಚಿಕ್ಕಬಳ್ಳಾಪುರದ ಮಾರ್ಕೆಟ್‌ನಲ್ಲಿ ಅವರೆಕಾಯಿಯದ್ದೇ ದರ್ಬಾರ್ ಆಗಿದೆ.

ಮಾರ್ಕೆಟ್​ಗೆ ಎಂಟ್ರಿ ಕೊಟ್ಟ ಅವರೆಕಾಯಿ.. ಎಲ್ಲೆಲ್ಲೂ ಅದರದೇ ಘಮ, ಬೇರೆ ತರಕಾರಿಗಳಿಗೆ ಗುಡ್​ಬೈ ಹೇಳಿ ಖರೀದಿಗೆ ಮುಗಿಬಿದ್ದ ಗ್ರಾಹಕರು
ಅವರೆಕಾಯಿ
Follow us
|

Updated on:Dec 24, 2020 | 7:41 AM

ಚಿಕ್ಕಬಳ್ಳಾಪುರ: ಚಳಿಗಾಲಕ್ಕೂ ಅವರೆಕಾಯಿಗೋ ಅದೇನು ನಂಟೋ ಗೊತ್ತಿಲ್ಲ. ಚಳಿ ಜೋರಾಗುತ್ತಿದ್ದಂತೆಯೇ ನಾಟಿ ಅವರೇಕಾಯಿ ಫಸಲು ಹೆಚ್ಚಾಗುತ್ತೆ. ಈ ಬಾರಿ ವಿಪರೀತ ಚಳಿ ಇರೋ ಕಾರಣ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಅವರೇಕಾಯಿ ಫಸಲು ಚೆನ್ನಾಗಿ ಬಂದಿದ್ದು, ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಅವರೆಕಾಯಿ ಪ್ರಿಯರು ಮುಗಿಬಿದ್ದು ಖರೀದಿಸುತ್ತಿದ್ದಾರೆ.

ಇನ್ನು ತರಕಾರಿ ಮಾರುಕಟ್ಟೆಗಳಲ್ಲಿ ಅವರೆಕಾಯಿಯದ್ದೇ ಹವಾ.. ಮಾರ್ಕೆಟ್‌ನಲ್ಲಿ ಗ್ರಾಹಕರು ಅವರೆಕಾಯಿ ನೋಡಿದ್ದೆ ತಡ, ತರಹೇವಾರಿ ತರಕಾರಿಗಳಿಗೆ ಗುಡ್ ಬೈ ಹೇಳಿ ಅವರೆಕಾಯಿಯತ್ತ ಚಿತ್ತ ಹರಿಸುತ್ತಿದ್ದಾರೆ. ಕೆಜಿ ಅವರೆಕಾಯಿಗೆ ಚಿಕ್ಕಬಳ್ಳಾಪುರದಲ್ಲಿ 40 ರೂಪಾಯಿ ಇದೆ, ಅದರಲ್ಲೂ ಚಿಕ್ಕಬಳ್ಳಾಪುರದ ಅವರೆಕಾಯಿಗೆ ಬೆಂಗಳೂರಿನಲ್ಲಿ ಭಾರೀ ಡಿಮ್ಯಾಂಡ್ ಇದೆ.

ಹಾಗಾಗಿ ಕೆ.ಆರ್.ಮಾರುಕಟ್ಟೆಯಲ್ಲಿ ಕೆ.ಜಿ. ಅವರೆಕಾಯಿಗೆ 50 ರಿಂದ 60 ರೂಪಾಯಿ ಇದೆ. ಬೆಳಗಾಗುತ್ತಿದ್ದಂತೆ ಖಾಸಗಿ ಬಸ್, ಟೆಂಪೋಗಳ ಮೂಲಕ ಚಿಕ್ಕಬಳ್ಳಾಫುರದ ಅವರೆಕಾಯಿ ಬೆಂಗಳೂರಿಗೆ ಸೇರುತ್ತಿದೆ.

ಒಟ್ನಲ್ಲಿ ಚಿಕ್ಕಬಳ್ಳಾಪುರದಲ್ಲಿ ಕಮಾಲ್ ಮಾಡುತ್ತಿರುವ ನಾಟಿ ಅವರೆಕಾಯಿ, ಗ್ರಾಹಕರ ಬಾಯಲ್ಲಿ ನೀರೂರಿಸುತ್ತ ಬೆಂಗಳೂರಿನ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಕಷ್ಟಪಟ್ಟು ಬೆಳೆದ ರೈತರ ಜೇಬು ಕೂಡ ತುಂಬುತ್ತಿದೆ.

ಸಜ್ಜನ್ ರಾವ್ ಸರ್ಕಲ್​ನಲ್ಲಿ ಅವರೆ ಮೇಳ, ಆದ್ರೆ ಕಸ, ಟ್ರಾಫಿಕ್​ನದ್ದೇ ಪ್ರಾಬ್ಲಂ

Published On - 7:30 am, Thu, 24 December 20

ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ