ಬಾಯಿ ವಾಸನೆ ಬರುತ್ತಿದೆ ಎಂದರೆ ಅದನ್ನು ನಿರ್ಲಕ್ಷಿಸೋಕೆ ಯಾರೂ ಬಯಸುವುದಿಲ್ಲ. ಇದು ಅವಮಾನಕರವೂ ಹೌದು. ನಾವು ಸೇವಿಸುವ ಆಹಾರಗಳು ಅನೇಕ ಬಾರಿ ದುರ್ವಾಸನೆ ಬೀರುವ ಉಸಿರಾಟವನ್ನು ನಮ್ಮ ದಿನವನ್ನು ಹಾಳುಮಾಡಲು ಕಾರಣವಾಗಬಹುದು. ಹಾಗಾದರೆ, ದುರ್ವಾಸನೆಯನ್ನು ಉಂಟುಮಾಡುವ ಐದು ಆಹಾರಗಳಿಂದ ನೀವು ದೂರವಿರಿ.
ಮೀನು ಮತ್ತು ಮಾಂಸ
ನಮ್ಮ ಹೊಟ್ಟೆಯಲ್ಲಿರುವ ಆಮ್ಲಗಳು ಮತ್ತು ಬ್ಯಾಕ್ಟೀರಿಯಾಗಳು ಮೀನು ಮತ್ತು ಮಾಂಸದ ಪ್ರೋಟೀನ್‌ಗಳನ್ನು ಅಮೈನೋ ಆಮ್ಲಗಳಾಗಿ ವಿಭಜಿಸುತ್ತವೆ. ಈ ಅವಧಿಯಲ್ಲಿ ದುರ್ವಾಸನೆ ಹುಟ್ಟಿಕೊಳ್ಳುತ್ತದೆ. ಇದು ಬಾಯಿಯ ಮೂಲಕ ಹೊರ ಬರುತ್ತದೆ. ಇನ್ನು, ಮೀನು ತಿಂದಾದ ಮೇಲೆ ಸೋಂಪು ಅಥವಾ ಅಡಿಕೆ ಪುಡಿ ಬಾಯಿಗೆ ಹಾಕಿಕೊಳ್ಳದೆ ಇದ್ದರೆ ಬಾಯಿ ವಾಸನೆ ಬರುತ್ತದೆ. ಹೀಗಾಗಿ ಮಾಂಸಾಹಾರವನ್ನು ಆದಷ್ಟು ಕಡಿಮೆ ಮಾಡಿ.
ಬೆಳ್ಳುಳ್ಳಿ
ಬೆಳ್ಳುಳ್ಳಿ ಹೆಚ್ಚಿನ ಸಂಖ್ಯೆಯ ಸಲ್ಫರ್ ಸಂಯುಕ್ತಗಳನ್ನು ಹೊಂದಿರುತ್ತದೆ. ಇದು ವಾಸನೆ ಕಾರಕ. ಬೆಳ್ಳುಳ್ಳಿ ತಿನ್ನುವುದರಿಂದ ಬಾಯಿ ವಾಸನೆ ಉಂಟಾಗುತ್ತದೆ. ಬೆಳ್ಳುಳ್ಳಿ ಒಳಗೊಂಡಿರುವ ಆಹಾರವನ್ನು ತಿನ್ನುವುದರಿಂದ ಕೆಟ್ಟ ಉಸಿರಾಟ ಹೆಚ್ಚಾಗುತ್ತದೆ. ಸಂಶೋಧನೆಯ ಪ್ರಕಾರ, ಬೆಳ್ಳುಳ್ಳಿ ಸೇವನೆಯು ಅಲೈಲ್ ಮೀಥೈಲ್ ಸಲ್ಫೈಡ್ ಎಂಬ ಸಲ್ಫರ್ ಸಂಯುಕ್ತದ ಉತ್ಪಾದನೆಗೆ ಕಾರಣವಾಗುತ್ತದೆ, ಇದು ನಮ್ಮ ಹೊಟ್ಟೆಯಿಂದ ಚಯಾಪಚಯಗೊಳ್ಳುವುದಿಲ್ಲ.
ಈರುಳ್ಳಿ
ಈರುಳ್ಳಿ ಮತ್ತು ಬೆಳ್ಳುಳ್ಳಿ ಒಂದೇ ಕುಟುಂಬಕ್ಕೆ ಸೇರಿದೆ. ಬೆಳ್ಳುಳ್ಳಿಯಂತೆ, ಈರುಳ್ಳಿಯಲ್ಲೂ ಹೆಚ್ಚಿನ ಸಂಖ್ಯೆಯ ಸಲ್ಫ್ಯೂರಿಕ್ ಸಂಯುಕ್ತಗಳಿವೆ. ಈರುಳ್ಳಿಯನ್ನು ಹಾಗೆಯೇ ಸೇವಿಸುವುದರಿಂದ ಇದು ದುರ್ವಾಸನೆಯನ್ನು ಉಂಟುಮಾಡುತ್ತದೆ. ಈರುಳ್ಳಿ ಬೇಯಿಸಿ ತಿನ್ನುವುದರಿಂದ ಬಾಯಿಯ ವಾಸನೆ ಸ್ವಲ್ಪ ಕಡಿಮೆ ಮಾಡಬಹುದು.
ಹಾಲು ಮತ್ತು ಹಾಲಿನ ಉತ್ಪನ್ನ
ಹಾಲು ಮತ್ತು ಚೀಸ್ ಸೇವನೆಯು ಬಾಯಿ ವಾಸನೆಗೆ ಕಾರಣವಾಗುತ್ತದೆ. ಡೈರಿ ಉತ್ಪನ್ನಗಳಲ್ಲಿನ ಅಮೈನೊ ಆಮ್ಲಗಳು ನಮ್ಮ ಒಸಡುಗಳಲ್ಲಿರುವ ಬ್ಯಾಕ್ಟೀರಿಯಾದಿಂದ ಒಡೆಯಲ್ಪಡುತ್ತವೆ, ಇದು ದುರ್ವಾಸನೆಯನ್ನು ಹೊಂದಿರುವ ಸಲ್ಫರ್ ಸಂಯುಕ್ತಗಳ ಉತ್ಪಾದನೆಗೆ ಕಾರಣವಾಗುತ್ತದೆ.
ಕಾಫಿ
ಅನೇಕರಿಗೆ ಕಾಫಿ ಕುಡಿಯುವ ಹವ್ಯಾಸ ಇರುತ್ತದೆ. ಕಾಫಿಯಲ್ಲಿ ಕೆಫೀನ್ ಅಂಶ ಇರುತ್ತದೆ. ಇದು ನಮ್ಮ ಬಾಯಿಯಲ್ಲಿ ಲಾಲಾರಸವನ್ನು ಒಣಗಿಸುತ್ತದೆ ಮತ್ತು ಅತಿಯಾದ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದರಿಂದ ಕೆಟ್ಟ ಉಸಿರಾಟವನ್ನು ಉಂಟುಮಾಡುತ್ತದೆ.
ಇದನ್ನೂ ಓದಿ: Bad Breath: ಬಾಯಿ ದುರ್ವಾಸನೆಯ ಶೀಘ್ರ ಶಮನಕ್ಕೆ ಇಲ್ಲಿದೆ ಮನೆ ಮದ್ದು