ಮೊದಲ ದಿನದ ಕಲೆಕ್ಷನ್​ನಲ್ಲಿ ಮುಗ್ಗರಿಸಿದ ಅಕ್ಷಯ್ ಕುಮಾರ್ ಸಿನಿಮಾ; ಮತ್ತೊಂದು ಸೋಲು?

|

Updated on: Apr 12, 2024 | 6:55 AM

Bade Miyan Chote Miyan Collection: ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾ ಮೂಲಕ ದೊಡ್ಡ ಮಟ್ಟದಲ್ಲಿ ಗೆಲ್ಲುವ ಕನಸು ಕಂಡಿದ್ದರು ಅಕ್ಷಯ್. ಆದರೆ, ಈ ಚಿತ್ರ ಮೊದಲ ದಿನ ಗಳಿಕೆ ಮಾಡಿದ್ದು ಕೇವಲ 15 ಕೋಟಿ ರೂಪಾಯಿ. ಇದರಿಂದ ಅಕ್ಷಯ್ ಕುಮಾರ್​ಗೆ ಮತ್ತೊಂದು ಸೋಲಿನ ಭಯ ಕಾಡಿದೆ.

 ಮೊದಲ ದಿನದ ಕಲೆಕ್ಷನ್​ನಲ್ಲಿ ಮುಗ್ಗರಿಸಿದ ಅಕ್ಷಯ್ ಕುಮಾರ್ ಸಿನಿಮಾ; ಮತ್ತೊಂದು ಸೋಲು?
ಅಕ್ಷಯ್​ ಕುಮಾರ್​, ಟೈಗರ್​ ಶ್ರಾಫ್​
Follow us on

ಈದ್ ಪ್ರಯುಕ್ತ ಅಕ್ಷಯ್ ಕುಮಾರ್ (Akshay Kumar) ಹಾಗೂ ಟೈಗರ್ ಶ್ರಾಫ್ ನಟನೆಯ ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾ ಏಪ್ರಿಲ್ 11ರಂದು ರಿಲೀಸ್ ಆಯಿತು. ಹಬ್ಬದ ಕಾರಣಕ್ಕೆ ಸರ್ಕಾರಿ ರಜೆ ಇತ್ತು. ಇದರ ಜೊತೆಗೆ ದೊಡ್ಡ ಪಾತ್ರವರ್ಗ ಬೇರೆ. ಹೀಗಾಗಿ, ಸಿನಿಮಾ ಭರ್ಜರಿ ಗಳಿಕೆ ಮಾಡಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಇದು ಸುಳ್ಳಾಗಿದೆ. ಈ ಚಿತ್ರ ಮೊದಲ ದಿನ ಗಳಿಕೆ ಅಂದುಕೊಂಡ ರೀತಿಯಲ್ಲಿ ಆಗಿಲ್ಲ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ.

ಅಕ್ಷಯ್ ಕುಮಾರ್ ಅವರು ಸತತ ಸೋಲುಗಳನ್ನು ಕಾಣುತ್ತಾ ಬರುತ್ತಿದ್ದಾರೆ. ಅವರು ದೊಡ್ಡ ಗೆಲುವು ಕಾಣದೆ ಅದೆಷ್ಟೋ ಸಮಯ ಕಳೆದು ಹೋಗಿದೆ. ಈ ಕಾರಣದಿಂದಲೇ ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾ ಮೂಲಕ ದೊಡ್ಡ ಮಟ್ಟದಲ್ಲಿ ಗೆಲ್ಲುವ ಕನಸು ಕಂಡಿದ್ದರು. ಆದರೆ, ಈ ಚಿತ್ರ ಮೊದಲ ದಿನ ಗಳಿಕೆ ಮಾಡಿದ್ದು ಕೇವಲ 15 ಕೋಟಿ ರೂಪಾಯಿ. ಇದರಿಂದ ಅಕ್ಷಯ್ ಕುಮಾರ್​ಗೆ ಮತ್ತೊಂದು ಸೋಲಿನ ಭಯ ಕಾಡಿದೆ.

ಇದನ್ನೂ ಓದಿ: ನಿಮಗೂ ಅಕ್ಷಯ್ ಕುಮಾರ್ ಹೆಸರಲ್ಲಿ ಕರೆ ಬರಹುದು ಎಚ್ಚರ; ಮೋಸ ಹೋಗದಿರಿ

ಸಣ್ಣ ಬಜೆಟ್ ಸಿನಿಮಾ ಆಗಿ, ದೊಡ್ಡ ಸ್ಟಾರ್​ಗಳು ಇಲ್ಲ ಎಂದರೆ 15 ಕೋಟಿ ರೂಪಾಯಿ ನಿಜಕ್ಕೂ ದೊಡ್ಡ ಮೊತ್ತವೇ. ಆದರೆ,  ‘ಬಡೇ ಮಿಯಾ ಚೋಟೆ ಮಿಯಾ’ ವಿಚಾರದಲ್ಲಿ ಹಾಗಿಲ್ಲ. ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಪೃಥ್ವಿರಾಜ್ ಸುಕುಮಾರನ್ ಸೇರಿ ಅನೇಕ ಸ್ಟಾರ್​ಗಳು ಸಿನಿಮಾದಲ್ಲಿ ನಟಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಇದು ಬಿಗ್ ಬಜೆಟ್ ಸಿನಿಮಾ. ಹೀಗಾಗಿ ಚಿತ್ರದ ಮೊದಲ ದಿನದ ಗಳಿಕೆ ಕನಿಷ್ಠ 30-40 ಕೋಟಿ ರೂಪಾಯಿ ದಾಟಬೇಕಿತ್ತು. ಆದರೆ, 15 ಕೋಟಿ ರೂಪಾಯಿಗೆ ಸಿನಿಮಾ ಸಮಾಧಾನಪಟ್ಟುಕೊಂಡಿದೆ.


ಅತ್ತ ಅಜಯ್ ದೇವಗನ್ ನಟನೆಯ ‘ಮೈದಾನ್’ ಚಿತ್ರದ ಗಳಿಕೆ ಮತ್ತಷ್ಟು ಹೀನಾಯವಾಗಿದೆ. ಬುಧವಾರ ಈ ಸಿನಿಮಾ 2.6 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಗುರುವಾರ 4.50 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಒಟ್ಟಾರೆ ಕಲೆಕ್ಷನ್ 7.10 ಕೋಟಿ ರೂಪಾಯಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ