ಕೊರೊನಾ ಹೋರಾಟಕ್ಕೆ ಮಗಳ ಮದುವೆ ಮುಂದೂಡಿದ ಜಿಲ್ಲಾ ಆರೋಗ್ಯಾಧಿಕಾರಿ
ಬಾಗಲಕೋಟೆ: ಕೊರೊನಾ ಅನ್ನೋ ಹೆಮ್ಮಾರಿ ದೇಶದಲ್ಲಿ ರುದ್ರತಾಂಡವ ಆಡುತ್ತಿದೆ. ಜನ ಕೊರೊನಾ ಅಟ್ಟಹಾಸಕ್ಕೆ ನಲುಗಿ ಹೋಗಿದ್ದಾರೆ. ಹೆಮ್ಮಾರಿಯಿಂದ ಪ್ರತಿ ದಿನ ಪ್ರತಿ ಕ್ಷಣ ನರಕ ಅನುಭವಿಸುತ್ತಿದ್ದಾರೆ. ಕೊರೊನಾದಿಂದ ಅದೆಷ್ಟೋ ಕನಸುಗಳು ಬೀದಿಗೆ ಬಿದ್ದಿವೆ. ಅದರಂತೆ ಕೊರೊನಾ ವಾರಿಯರ್ಸ್ ತಮ್ಮ ಜೀವದ ಹಂಗು ತೊರೆದು, ತಮ್ಮ ಕುಟುಂಬವನ್ನ ಮರೆತು ಜನರ ಜೀವವನ್ನ ಉಳಿಸಿಲು ಪಣ ತೊಟ್ಟಿದ್ದಾರೆ. ದಿಟ್ಟ ಅಧಿಕಾರಿ ಕೊರೊನಾ ವಿರುದ್ಧ ಹೊರಾಡುತ್ತಾ, ಜನರಿಗಾಗಿ ದೊಡ್ಡ ದೊಡ್ಡ ತ್ಯಾಗ ಮಾಡುತ್ತಿದ್ದಾರೆ. ಇಂದು ನಡೆಯಬೇಕಾಗಿದ್ದ ಮದುವೆ ಮುಂದೂಡಿದ ಅಧಿಕಾರಿ! ಬಾಗಲಕೋಟೆ […]
ಬಾಗಲಕೋಟೆ: ಕೊರೊನಾ ಅನ್ನೋ ಹೆಮ್ಮಾರಿ ದೇಶದಲ್ಲಿ ರುದ್ರತಾಂಡವ ಆಡುತ್ತಿದೆ. ಜನ ಕೊರೊನಾ ಅಟ್ಟಹಾಸಕ್ಕೆ ನಲುಗಿ ಹೋಗಿದ್ದಾರೆ. ಹೆಮ್ಮಾರಿಯಿಂದ ಪ್ರತಿ ದಿನ ಪ್ರತಿ ಕ್ಷಣ ನರಕ ಅನುಭವಿಸುತ್ತಿದ್ದಾರೆ. ಕೊರೊನಾದಿಂದ ಅದೆಷ್ಟೋ ಕನಸುಗಳು ಬೀದಿಗೆ ಬಿದ್ದಿವೆ.
ಅದರಂತೆ ಕೊರೊನಾ ವಾರಿಯರ್ಸ್ ತಮ್ಮ ಜೀವದ ಹಂಗು ತೊರೆದು, ತಮ್ಮ ಕುಟುಂಬವನ್ನ ಮರೆತು ಜನರ ಜೀವವನ್ನ ಉಳಿಸಿಲು ಪಣ ತೊಟ್ಟಿದ್ದಾರೆ. ದಿಟ್ಟ ಅಧಿಕಾರಿ ಕೊರೊನಾ ವಿರುದ್ಧ ಹೊರಾಡುತ್ತಾ, ಜನರಿಗಾಗಿ ದೊಡ್ಡ ದೊಡ್ಡ ತ್ಯಾಗ ಮಾಡುತ್ತಿದ್ದಾರೆ.
ಇಂದು ನಡೆಯಬೇಕಾಗಿದ್ದ ಮದುವೆ ಮುಂದೂಡಿದ ಅಧಿಕಾರಿ! ಬಾಗಲಕೋಟೆ ಜಿಲ್ಲಾ ಆರೋಗ್ಯಾಧಿಕಾರಿ ಅನಂತ ದೇಸಾಯಿ ಕೊರೊನಾ ಹೋರಾಟದಲ್ಲಿ ಧುಮುಕಿದ್ದು, ತಮ್ಮ ಮುದ್ದಾದ ಮಗಳ ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾರೆ. ತಮಗೆ ಇರುವ ಒಬ್ಬಳೆ ಮಗಳಾದ ಅಕ್ಷತಾ ಮದುವೆ ಇವತ್ತು ನಡೆಯ ಬೇಕಿತ್ತು. ಆದ್ರೆ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿರೋದ್ರಿಂದ ಡಿಹೆಚ್‌ಒ ಆದ ಇವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ.
ಜಿಲ್ಲೆಯ ಜನರನ್ನು ಕೊರೊನಾದಿಂದ ಮುಕ್ತ ಮಾಡುವ ಹೊಣೆಗಾರಿಕೆ ಇದೆ. ಇದರಿಂದ ಇವರು ತಮ್ಮ ಒಬ್ಬಳೆೇ ಮಗಳಾದ ಅಕ್ಷತಾ ಮದುವೆಯನ್ನೇ ಕ್ಯಾನ್ಸಲ್ ಮಾಡಿ ಜನರ ಕಾಳಜಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಈಗಾಗಲೇ ಮಗಳ ಮದುವೆಗಾಗಿ ಹಾಲ್‌ನ್ನು ಕೂಡ ಬುಕ್ ಮಾಡಿ, ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಆದರೆ ಜನರು ಸಂಕಷ್ಟದಲ್ಲಿರುವಾಗ ನಾನು ಸಂಭ್ರಮ ಪಡೋದು ಅರ್ಥವಿಲ್ಲ ಅಂತ ಮುದುವೆಯನ್ನ ಮುಂದಕ್ಕೆ ಹಾಕಿ, ಜನರಿಗಾಗಿ ದುಡಿಯುತ್ತಿದ್ದಾರೆ.
ಅನಂತ ದೇಸಾಯಿ ಮಗಳು ಅಕ್ಷತಾ ಓರ್ವ ಸಾಪ್ಟವೇರ್ ಎಂಜಿನಿಯರ್ ಆಗಿದ್ದು, ಬೆಂಗಳೂರಿನ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಕೂಡ ತಾವು ಮೆಚ್ಚಿದ ಹುಡುಗನ ಜೊತೆ ಮದುವೆಯಾಗಿ ಸುಂದರ ಜೀವನ ನಡೆಸುವ ಕನಸು ಕಂಡಿದ್ದರು. ಅಂದುಕೊಂಡಂತೆ ಆಗಿದ್ದರೆ ಇವತ್ತು ಇವರು ಹಸೆಮಣೆ ಏರಬೇಕಿತ್ತು. ಮನೆ ಮುಂದೆ ಅಲಂಕಾರ, ಸಂಭ್ರಮ ಸಡಗರ ಸಂತಸ ಮೇಳೈಸಿಬೇಕಿತ್ತು. ಆದರೆ ಹೆಮ್ಮಾರಿ ಕೊರೊನಾ ಮದುವೆಯ ಸಂಭ್ರಮಕ್ಕೆ ಬ್ರೆಕ್ ಹಾಕಿದೆ.
ಇನ್ನು ಡಿಹೆಚ್‌ಒ ದೇಸಾಯಿ ಜನರ ರಕ್ಷಣೆಗಾಗಿ ಹಗಲು ರಾತ್ರಿ ಎನ್ನದೆ ದುಡಿಯುತ್ತಿದ್ದಾರೆ. ಮನೆಯವರ ಸುರಕ್ಷತೆಗಾಗಿ ಮನೆಯಲ್ಲಿ ಒಂದು ರೂಮಲ್ಲಿ ಸ್ಟೇ ಮಾಡುತ್ತಿದ್ದು ಪತ್ನಿ ಮಕ್ಕಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಇನ್ನು ಅನಂತ ದೇಸಾಯಿ ಕಾರ್ಯಕ್ಕೆ ಮನೆಯವರು ಸಾತ್ ನೀಡಿದ್ದು, ಸ್ವಲ್ಪಮಟ್ಟಿಗೆ ಭಯ, ಆತಂಕ ಇದೆ. ಮುದುವೆ ಮೂಂದೂಡಿದ್ದಕ್ಕೆ ಪತ್ನಿ ಮತ್ತು ಮಗಳ ಒಪ್ಪಿಗೆ ಇದ್ದು, ಜನರ ರಕ್ಷಣೆ ಮುಖ್ಯ ಅಂತಿದ್ದಾರೆ.
ಒಟ್ಟಾರೆ ಕೊರೊನಾ ಕರ್ತವ್ಯದಲ್ಲಿ ಮುಳುಗಿದ ಹಿರಿಯ ಕಿರಿಯ ಅಧಿಕಾರಿಗಳು ಮನೆ, ಮಕ್ಕಳು, ಸಂಭ್ರಮ ಮರೆತಿದ್ದಾರೆ. ಅದರಲ್ಲಿ ಅನಂತ ದೇಸಾಯಿ ಕೂಡ ಒಬ್ಬರಾಗಿದ್ದು, ಆರೋಗ್ಯ ಇಲಾಖೆ ಮುಂದಾಳತ್ವ ವಹಿಸಿಕೊಂಡು ಕೊರೊನಾ ಕಟ್ಟಿ ಹಾಕೋಕೆ ಮುನ್ನುಗ್ಗುತ್ತಿದ್ದಾರೆ. ಆದಷ್ಟು ಬೇಗ ಒಳ್ಳೆಯ ದಿನಗಳು ಬಂದು, ಡಿಹೆಚ್‌ಒ ಮಗಳಾದ ಅಕ್ಷತಾ ಅವರ ಮುದುವೆ ಯಾವುದೇ ವಿಘ್ನ ಇಲ್ಲದೆ ನಡೆಯಲಿ ಅಂತಾ ಹಾರೈಸೋಣ. https://www.facebook.com/Tv9Kannada/videos/675422006556184/
Published On - 11:18 am, Mon, 27 April 20