ವೈಕುಂಠ ಏಕಾದಶಿ ಆಚರಣೆಗೆ ಬೆಂಗಳೂರು ನಗರ ಡಿಸಿ ಬ್ರೇಕ್, ದೇವಸ್ಥಾನದಲ್ಲಿ ಭಕ್ತರಿಗಿಲ್ಲ ದೇವರ ದರ್ಶನ

| Updated By: Team Veegam

Updated on: Dec 21, 2020 | 6:06 PM

ಬೆಂಗಳೂರಿನ ಕಲಾಸಿಪಾಳ್ಯದ ಕೆ.ಆರ್ ರಸ್ತೆಯಲ್ಲಿರುವ ಕೋಟೆ ಶ್ರೀ ಪ್ರಸನ್ನ ವೆಂಕಟರಮಣ ದೇಗುಲದಲ್ಲಿ ಇದೇ ಡಿಸೆಂಬರ್ 25 ಕ್ಕೆ ಜರುಗಲಿರುವ ವೈಕುಂಠ ಏಕಾದಶಿಯಲ್ಲಿ ದೇವರ ದರ್ಶನಕ್ಕೆ ನಿರ್ಬಂಧ ಹೆರಿದ್ದಾರೆ.

ವೈಕುಂಠ ಏಕಾದಶಿ ಆಚರಣೆಗೆ ಬೆಂಗಳೂರು ನಗರ ಡಿಸಿ ಬ್ರೇಕ್, ದೇವಸ್ಥಾನದಲ್ಲಿ ಭಕ್ತರಿಗಿಲ್ಲ ದೇವರ ದರ್ಶನ
Follow us on

ಬೆಂಗಳೂರು: ಕೊರೊನಾ ಎರಡನೆ ಅಲೆಯ ಆತಂಕ ಹೆಚ್ಚಾಗುತ್ತಿರುವ ಬೆನ್ನಲ್ಲೇ ವೈಕುಂಠ ಏಕಾದಶಿ ಆಚರಣೆಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಬ್ರೇಕ್ ಹಾಕಿದ್ದಾರೆ.

ಬೆಂಗಳೂರು ನಗರ ಜಿಲ್ಲಾಧಿಕಾರಿ ಶಿವಮೂರ್ತಿ ಈ ಆದೇಶ ಹೊರಡಿಸಿದ್ದು, ಬೆಂಗಳೂರಿನ ಕಲಾಸಿಪಾಳ್ಯದ ಕೆ.ಆರ್. ರಸ್ತೆಯಲ್ಲಿರುವ ಕೋಟೆ ಶ್ರೀ ಪ್ರಸನ್ನ ವೆಂಕಟರಮಣ ದೇಗುಲದಲ್ಲಿ ಇದೇ ಡಿಸೆಂಬರ್ 25 ಕ್ಕೆ ಜರುಗಲಿರುವ ವೈಕುಂಠ ಏಕಾದಶಿಯಲ್ಲಿ ದೇವರ ದರ್ಶನಕ್ಕೆ ನಿರ್ಬಂಧ ಹೇರಿದ್ದಾರೆ.

ಆದರಿಂದ ವೈಕುಂಠ ಏಕಾದಶಿ ದಿನ ನಡೆಯುವ ಕಾರ್ಯಕ್ರಮಗಳು ಅರ್ಚಕರ ನೇತೃತ್ವದಲ್ಲಿ ಮಾತ್ರ ನಡೆಯತಕ್ಕದ್ದು ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಅಲ್ಲದೆ ಕೊರೊನಾ ಎರಡನೆ ಅಲೆಯ ಆತಂಕ ಹೆಚ್ಚಾಗಿರುವುದರಿಂದ ಕೊರೊನಾ ಸೋಂಕಿನ ಹರಡುವಿಕೆಯನ್ನ ತಪ್ಪಿಸಲು ಈ ಕ್ರಮ ತೆಗೆದುಕೊಂಡಿರುವುದಾಗಿ ಜಿಲ್ಲಾಡಳಿತ ಸಮರ್ಥನೆ ನೀಡಿದೆ.

Published On - 5:51 pm, Mon, 21 December 20