ಮೈಸೂರು: ಬಾನಂಗಳದಲ್ಲಿ ಚಿಲಿಪಿಲಿಗಳ ರಂಗೂಲಿ.. ತಮ್ಮದೇ ಲೋಕದಲ್ಲಿ ತೇಲಾಡೋ ಬಾನಾಡಿಗಳು.. ಒಮ್ಮೆ ದಡದಲ್ಲಿ, ಮತ್ತೊಮ್ಮೆ ನೀರಲ್ಲಿ, ಮಗದೊಮ್ಮೆ ಬಾನಲ್ಲಿ.. ಎಲ್ಲೆಲ್ಲೂ ಈ ಚಿಲಿಪಿಗಳದ್ದೇ ಆಟ.. ಪಕ್ಷಿಲೋಕದ್ದೇ ತುಂಟಾಟ.. ಆಕಾಶದಿಂದ ಒಮ್ಮೆ ಕಣ್ಣು ಹಾಯಿಸಿದ್ರೆ ಜಲಾಶಯದ ತುಂಬ ಕಾಣೋ ಪಕ್ಷಿಗಳ ಲೋಕ..
ಮೈಸೂರಿನ ಕಬಿನಿ ಜಲಾಶಯದ ಹಿನ್ನೀರಿನಲ್ಲೀಗ ಬಾನಾಡಿಗಳ ಕಲರವ ಜೋರಾಗಿದೆ. ಮೈಸೂರಿಗೆ ದೂರದ ಊರಿನಿಂದ ಬಂದಿರೋ ವಿದೇಶಿ ಪಕ್ಷಿಗಳು ತುಂಟಾಟ ಆಡ್ತಿವೆ. ವರ್ಷದ ಕೊನೆಯಲ್ಲಿ ಬರೋ ಈ ಬಾರ್‌ಹೆಡ್ ಗೊಸ್ ಪಕ್ಷಿಗಳು ಮೂರು ತಿಂಗಳ ಕಾಲ ಮೈಸೂರಿನಲ್ಲೇ ಬೀಡು ಬಿಟ್ಟಿರ್ತಾವೆ. ಅದರಲ್ಲೂ ಚಳಿಗಾಲದ ಸಂದರ್ಭದಲ್ಲಿ ಹೆಚ್.ಡಿ. ಕೋಟೆಯ ಬೀಚನಹಳ್ಳಿಯ ಕಬಿನಿ ಡ್ಯಾಂಗೆ ಲಗ್ಗೆ ಇಡುತ್ವೆ. ಅವುಗಳ ಎಂಟ್ರಿಯಿಂದ ಜಲಾಶಯದ ಅಂದ ದುಪ್ಪಟ್ಟಾಗುತ್ತದೆ.
ಸಾಂಸ್ಕೃತಿಕ ನಗರಿಯಲೊಂದು ವಲಸೆ ಹಕ್ಕಿಗಳ ಲೋಕ:
ಇನ್ನು ಈ ಬಾರ್ ಹೆಡ್ ಗೂಸ್ ಪಕ್ಷಿಗಳು ವಲಸೆ ಹಕ್ಕಿಗಳಾಗಿದ್ದು ನೇಪಾಳ, ಮಂಗೋಲಿಯಾ, ಸೈಬಿರಿಯಾ ದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಇವುಗಳು ಸಂತಾನೋತ್ಪತ್ತಿಗಾಗಿ ನದಿಗಳು ಹಾಗೂ ಜಲಾಶಯದ ಹಿನ್ನೀರನ್ನ ಆಯ್ಕೆ ಮಾಡಿಕೊಳ್ಳುತ್ತವೆ. ಮೂರ್ನಾಲ್ಕು ತಿಂಗಳಗಳ ಕಾಲ ವಲಸೆ ಬಂದು ಕಬಿನಿ ಡ್ಯಾಂ ಬಳಿಯೇ ಬೀಡು ಬಿಟ್ಟಿರುತ್ತವೆ. ಹೊಲ ಗದ್ದೆಗಳಲ್ಲಿ ಆಹಾರ ಸೇವಿಸಿ ಸಂತಾನೋತ್ಪತ್ತಿ ಮುಗಿಸಿ ವಾಪಸ್ಸಾಗುತ್ತವೆ.
ಪಕ್ಷಿಲೋಕದ ನೋಟವೇ ಬಲುಚೆಂದ.. ಅದ್ರಲ್ಲೂ ಅರಮನೆ ನಗರಿಗೆ ದೂರದೂರಿಂದ ಹಿಂಡು ಹಿಂಡಾಗಿ ಬರೋ ಈ ಪಕ್ಷಿಗಳನ್ನ ಆಟ ತುಂಟಾಟ ನೋಡೋಕೆ ಎರಡು ಕಣ್ಣು ಸಾಲೋದಿಲ್ಲ.
-ದಿಲೀಪ್
ವಿದ್ಯಾಕಾಶಿಯಲ್ಲಿ ಹಕ್ಕಿಗಳ ಮಾರಣಹೋಮ: ಔಷಧಕ್ಕೆಂದು ಸದ್ದಿಲ್ಲದೆ ಮಾಯವಾಗ್ತಿದೆ ಪಕ್ಷಿ ಸಂಕುಲ