ಬೆಂಗಳೂರು: ಇಷ್ಟು ದಿನ ಕೇಂದ್ರ ಮತ್ತು ರಾಜ್ಯದ ಆಡಳಿತಾರೂಢ ಬಿಜೆಪಿ ಪಕ್ಷದವರು ಲವ್ ಜಿಹಾದ್ ನಿಷೇಧ ಅಸ್ತ್ರವನ್ನು ಜೋರಾಗಿಯೇ ಝಳಪಿಸುತ್ತಾ ಬಂದಿದ್ದರು. ಕೆಲ ರಾಜ್ಯಗಳಲ್ಲಿ ಲವ್ ಜಿಹಾದ್ ನಿಷೇಧಗೊಳಿಸುವಲ್ಲಿ ಬಿಜೆಪಿ ಸರ್ಕಾರಗಳು ಯಶಸ್ವಿಯೂ ಆಗಿವೆ. ಅದೇ ಧಾಟಿಯಲ್ಲಿ ಕರ್ನಾಟಕದಲ್ಲಿಯೂ ಇಂದಿನಿಂಧ ಆರಂಭವಾಗಿರುವ ಚಳಿಗಾಲದ ಅಧಿವೇಶನದಲ್ಲಿ ಇನ್ನೇನು ಲವ್ ಜಿಹಾದ್ ನಿಷೇಧಗೊಳಿಸುತ್ತಾರೆ ಎಂದೇ ಪರಿಭಾವಿಸಲಾಗಿತ್ತು.
ಎಲ್ಲ ಮಹಾಮಹಿಮ ನಾಯಕರು ಇನ್ನೇನು ಲವ್ ಜಿಹಾದ್ ನಿಷೇಧ ಆಗಿಯೇಬಿಟ್ಟಿತು ಎಂದು ಹೇಳಿದ್ದರು. ಆದರೆ ಅದನ್ನು ಬಿಜೆಪಿ ಸರ್ಕಾರ ಜಾರಿಗೆ ತರುವುದು ಹಾಗಿರಲಿ; ಕಂದಾಯ ಸಚಿವ ಅಶೋಕ್ ಅವರು ಅದರ ಬಗ್ಗೆ ಬೀದಿಬದಿಯಲ್ಲಿ ಮಾತನಾಡುವಂತೆ ಡವ್ ಜಿಹಾದೂ ಇಲ್ಲ, ಲವ್ ಜಿಹಾದೂ ಇಲ್ಲ ಎಂದು ವ್ಯಂಗ್ಯವಾಗಿ ಮಾತನಾಡುತ್ತಾ.. ಲವ್ ಜಿಹಾದ್ ನಿಷೇಧಕ್ಕೆ ಸದ್ಯಕ್ಕೆ ಎಳ್ಳುನೀರು ಬಿಟ್ಟಿದ್ದಾರೆ.
ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನದಲ್ಲಿ ಗೋ ಹತ್ಯೆ ಹಾಗೂ ಲವ್ ಜಿಹಾದ್ ವಿಷಯಗಳ ಕುರಿತು ಬಿಸಿಬಿಸಿ ಚರ್ಚೆ ನಡೆಯುವ ಎಲ್ಲಾ ಮುನ್ಸೂಚನೆ ಕಂಡುಬಂದಿತ್ತು. ಆದರೆ, ಕಂದಾಯ ಸಚಿವ ಆರ್. ಅಶೋಕ್ ಈ ಕುರಿತು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ.
ಅಧಿವೇಶನದಲ್ಲಿ ಪಾಲ್ಗೊಳ್ಳುವುದ್ಕೂ ಮುನ್ನ ವಿಧಾನಸೌಧದ ಮೆಟ್ಟಿಲಿಗಳ ಮೇಲೆ ನಿಂತು ಸುದ್ದಿಗಾರರೊಂದಿಗೆ ಮಾತನಾಡುತ್ತಾ.. ಈ ಬಾರಿ ಗೋ ಹತ್ಯೆ ನಿಷೇಧ ಕಾನೂನು ತಂದೇ ತರುತ್ತೇವೆ ಎಂದು ಕಂದಾಯ ಸಚಿವ R.ಅಶೋಕ್ ಹೇಳಿದರಾದರೂ ಲವ್ ಜಿಹಾದ್ ಕಾನೂನು ಮುಂದಿನ ಅಧಿವೇಶನದಲ್ಲಿ ಜಾರಿಯಾಗಲಿದೆ. ಈ ಬಾರಿ ಲವ್ ಜಿಹಾದೂ ಇಲ್ಲ, ಡವ್ ಜಿಹಾದೂ ಇಲ್ಲ ಎಂದು ನಗೆಯಾಡಿದರು.
ಇಂದಿನಿಂದ 7 ದಿನಗಳ ಕಾಲ ಚಳಿಗಾಲದ ಅಧಿವೇಶನ: ಮಂಡನೆಯಾಗತ್ತಾ ಲವ್ ಜಿಹಾದ್, ಗೋ ಹತ್ಯೆ ನಿಷೇಧ ಕಾಯ್ದೆ?
ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತರಲು ತಡವೇಕೆ? -ಸರ್ಕಾರಕ್ಕೆ ಖಾದರ್ ಸವಾಲ್