AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುರೋಪ್, ಭಾರತ ಆಯ್ತು! ಈಗ ಕೊವಿಡ್​ ಮೂಲ ಆಸ್ಟ್ರೇಲಿಯಾ ಎಂದು ತಗಾದೆ ತೆಗೆದ ಚೀನಾ

ದಿನೇ ದಿನೇ ಒಂದೊಂದು ದೇಶದ ಮೇಲೆ ಆರೋಪ ಹೊರಿಸುವ ಚೀನಾವನ್ನು ನೋಡಿದರೆ ಕಳ್ಳನ ಮನಸ್ಸು ಹುಳ್ಳಗೆ ಎಂಬ ಗಾದೆ ನೆನಪಾಗುತ್ತದೆ. ಸದ್ಯ ಚೀನಾ ಏನೇ ಹೇಳಿದರೂ ಬಾಕಿ ರಾಷ್ಟ್ರಗಳು ಅದನ್ನು ನಂಬದಂತಹ ಸ್ಥಿತಿ ನಿರ್ಮಾಣವಾಗಿದೆ.

ಯುರೋಪ್, ಭಾರತ ಆಯ್ತು! ಈಗ ಕೊವಿಡ್​ ಮೂಲ ಆಸ್ಟ್ರೇಲಿಯಾ ಎಂದು ತಗಾದೆ ತೆಗೆದ ಚೀನಾ
ಪ್ರಾತಿನಿಧಿಕ ಚಿತ್ರ
Skanda
| Updated By: ಸಾಧು ಶ್ರೀನಾಥ್​|

Updated on: Dec 07, 2020 | 12:37 PM

Share

ಕೊರೊನಾ ವೈರಸ್​ನ ಜನ್ಮಭೂಮಿ ಚೀನಾ ಎಂದು ವಿಶ್ವದ ಬಹುತೇಕ ದೇಶಗಳು ಹೇಳುತ್ತಿದ್ದರೆ ಚೀನಾ ಮಾತ್ರ ಅದನ್ನು ಒಪ್ಪಿಕೊಳ್ಳಲು ಸುತಾರಾಂ ತಯಾರಿಲ್ಲ. ಜಗತ್ತಿನಾದ್ಯಂತ ಕೊವಿಡ್ ಹಬ್ಬಿಸಿದ ಕಳಂಕದಿಂದ ಮುಕ್ತವಾಗಲು ಹೆಣಗಾಡುತ್ತಿರುವ ಡ್ರ್ಯಾಗನ್ ರಾಷ್ಟ್ರ ಬೇರೆ ಬೇರೆ ದೇಶಗಳ ಮೇಲೆ ಗೂಬೆ ಕೂರಿಸುವ ಯತ್ನ ಮಾಡುತ್ತಿದೆ.

ಕಾಂಗರೂ ಮೇಲೆ ಡ್ರ್ಯಾಗನ್​ಗೆ ಅನುಮಾನ ಇತ್ತೀಚೆಗಷ್ಟೇ ಕೊವಿಡ್​ನ ಮೂಲ ಯುರೋಪ್ ಎಂದು ಬಾಣ ಬಿಟ್ಟಿದ್ದ ಡ್ರ್ಯಾಗನ್, ನಂತರ ಭಾರತದ ಕಡೆ ಬೊಟ್ಟು ಮಾಡಿತ್ತು. ಆದರೆ ಈಗ ಭಾರತವನ್ನು ಬಿಟ್ಟು ಆಸ್ಟ್ರೇಲಿಯಾ ಮೇಲೆ ಗೂಬೆ ಕೂರಿಸಲು ಹೊರಟಿದೆ. ಕೊವಿಡ್​ ವೈರಾಣು ಚೀನಾದಲ್ಲಿ ಹುಟ್ಟಿದ್ದು ಅಲ್ಲವೇ ಅಲ್ಲ. ಅದು ಆಸ್ಟ್ರೇಲಿಯಾದಿಂದ ಚೀನಾಕ್ಕೆ ಬಂದಿರುವ ಸಾಧ್ಯತೆ ಇದೆ ಎಂದು ಕಾಂಗರೂ ನಾಡಿನ ಮೇಲೆ ಹೊಸ ಆರೋಪ ಮಾಡಿದೆ.

ಆಸ್ಟ್ರೇಲಿಯಾದಿಂದ ಆಮದು ಮಾಡಿಕೊಳ್ಳುವ ಬೀಫ್ ಮೂಲಕ ಕೊರೊನಾ ನಮ್ಮ ದೇಶಕ್ಕೆ ಬಂದಿದೆ. ಕೋಲ್ಡ್​ ಚೈನ್ ಸ್ಟೋರೇಜ್ ಮೂಲಕ ಚೀನಾಕ್ಕೆ ವೈರಸ್ ಕಾಲಿಟ್ಟಿದೆ. ಜೊತೆಗೆ ಹುನಾನ್ ಮಾರುಕಟ್ಟೆಯಲ್ಲಿ ಬ್ರೆಜಿಲ್, ಜರ್ಮನಿ ದೇಶಗಳಿಂದ ಆಮದು ಮಾಡಿಕೊಂಡ ಸೀಫುಡ್ ಮಾರಾಟ ಮಾಡುವುದರಿಂದ ವೈರಸ್​ ಕೋಲ್ಡ್​ ಸ್ಟೋರೇಜ್ ಮೂಲಕ ಬಂದಿರುವ ಸಾಧ್ಯತೆಯೇ ಹೆಚ್ಚು ಎಂದು ಡ್ರ್ಯಾಗನ್​ ದೇಶ ಹೊಸ ವರಸೆ ಶುರು ಮಾಡಿದೆ.

ಗ್ಲೋಬಲ್​ ಟೈಮ್ಸ್​ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ ಚೀನಾದ ಕಮ್ಯೂನಿಸ್ಟ್​ ಪಕ್ಷದ ಗ್ಲೋಬಲ್ ಟೈಮ್ಸ್ ಪತ್ರಿಕೆ ಪ್ರಕಟಿಸಿರುವ ಲೇಖನದಲ್ಲಿ ಈ ಅಭಿಪ್ರಾಯಗಳು ವ್ಯಕ್ತವಾಗಿವೆ. ಕೊರೊನಾ ವೈರಸ್ ಮೊಟ್ಟಮೊದಲು ಕಾಣಿಸಿಕೊಂಡಿದ್ದು ಚೀನಾದ ವುಹಾನ್ ಪ್ರಾಂತ್ಯದಲ್ಲಿ ಎಂದು ಬಹಳಷ್ಟು ಅಧ್ಯಯನಗಳು ಹೇಳುತ್ತಿದ್ದರೂ ಚೀನಾ ಮಾತ್ರ ತನಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ನುಣುಚಿಕೊಳ್ಳಲು ಯತ್ನಿಸುವುದರಲ್ಲಿ ನಿರತವಾಗಿದೆ.

ಕೋತಿ ತಾನು ಮೊಸರು ತಿಂದು ಮೇಕೆ ಬಾಯಿಗೆ ಒರೆಸಿತು ದಿನೇ ದಿನೇ ಒಂದೊಂದು ದೇಶದ ಮೇಲೆ ಆರೋಪ ಹೊರಿಸುವ ಚೀನಾವನ್ನು ನೋಡಿದರೆ ಕಳ್ಳನ ಮನಸ್ಸು ಹುಳ್ಳಗೆ ಎಂಬ ಗಾದೆ ನೆನಪಾಗುತ್ತದೆ. ಸದ್ಯ ಚೀನಾ ಏನೇ ಹೇಳಿದರೂ ಬಾಕಿ ರಾಷ್ಟ್ರಗಳು ಅದನ್ನು ನಂಬದಂತಹ ಸ್ಥಿತಿ ನಿರ್ಮಾಣವಾಗಿದೆ. ಆಸ್ಟ್ರೇಲಿಯಾ ನಂತರ ಚೀನಾ ತಾನು ತಿಂದ ಮೊಸರನ್ನು ಯಾರ ಮೂತಿಗೆ ಹಚ್ಚುತ್ತೋ ಕಾದು ನೋಡಬೇಕು.

ಚೀನಾಗೆ ಹೊಸ ವರ್ಷ: ಆದ್ರೆ ಸಂಭ್ರಮ ಇಲ್ಲ, ಕೊರೊನಾವೈರಸ್ ಸೂತಕ ಎಲ್ಲ ಕಡೆ!

ಕೊರೊನಾ ಹುಟ್ಟಿದ್ದು ಚೀನಾದಲ್ಲಿ ಅಲ್ಲ ಭಾರತದಲ್ಲಿ.. ಚೀನಾ ಹೊಸ ವರಸೆಗೆ ಬಿದ್ದು ಬಿದ್ದು ನಕ್ಕ ಸಂಶೋಧಕರು