ನಿಮ್ಮ ಸಂಪರ್ಕದಲ್ಲಿದ್ದ ವ್ಯಕ್ತಿ ಸೋಂಕಿತರಾಗಿದ್ದಾರೆ, ಎಚ್ಚರಿಕೆ.. ಎಂದು ಸಂದೇಶ ಕಳಿಸುತ್ತದೆ ಈ ಆ್ಯಪ್
ಆ್ಯಪ್ ಇನ್ಸ್ಟಾಲ್ ಮಾಡಿಕೊಂಡ ಗ್ರಾಹಕರು ಪರಸ್ಪರ ಹತ್ತಿರ ಬಂದರೆ ಆ್ಯಪ್ ತಾನಾಗಿಯೇ ಡೇಟಾ ಸಂಗ್ರಹಿಸುತ್ತದೆ. ಒಮ್ಮೆ ಡೇಟಾ ಸಂಗ್ರಹವಾದ ನಂತರ ಆ ಇಬ್ಬರಲ್ಲಿ ಯಾವುದೇ ವ್ಯಕ್ತಿ ನಿರ್ದಿಷ್ಟ ದಿನದೊಳಗೆ ಸೋಂಕಿತನಾದರೂ ಇನ್ನೊಂದು ವ್ಯಕ್ತಿಗೆ ಪರೀಕ್ಷೆ ಮಾಡಿಸಿಕೊಳ್ಳುವಂತೆ ಎಚ್ಚರಿಕೆಯ ಸಂದೇಶ ರವಾನೆಯಾಗುತ್ತದೆ.
ಕೊವಿಡ್ ಸೋಂಕಿತರ ಮೇಲೆ ನಿಗಾ ವಹಿಸೋಕೆ ತಾಂತ್ರಿಕವಾಗಿ ಸಾಕಷ್ಟು ಅಧ್ಯಯನ ನಡೆಯುತ್ತಿದೆ. ಭಾರತದಲ್ಲಿ ಆರಂಭಿಕ ಹಂತದಲ್ಲೇ ಆರೋಗ್ಯ ಸೇತು ಎಂಬ ಆ್ಯಪ್ ಬಿಡುಗಡೆ ಮಾಡಲಾಗಿತ್ತು. ಆದರೆ ಅಮೆರಿಕಾದಲ್ಲಿ ಆರೋಗ್ಯ ಸೇತುವಿಗಿಂತಲೂ ಸುರಕ್ಷಿತ ಮತ್ತು ಸುಧಾರಿತ ತಂತ್ರಜ್ಞಾನವೊಂದು ಸಿದ್ಧವಾಗಿದೆ.
ಗೂಗಲ್ ಮತ್ತು ಆ್ಯಪಲ್ ಕಂಪೆನಿಯ ಸಹಭಾಗಿತ್ವದಲ್ಲಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. ಮೊಬೈಲ್ ಬ್ಲೂಟೂತ್ ಮುಖಾಂತರ ಡೇಟಾ ಸಂಗ್ರಹಿಸುವ ಕ್ರಮ ಇದಾಗಿದ್ದು ಸಂಗ್ರಹವಾಗುವ ವಿವರಗಳು ಯಾವುದೇ ರೀತಿಯಲ್ಲೂ ಸೋರಿಕೆಯಾಗದು ಎಂದು ಕಂಪೆನಿಗಳು ಭರವಸೆ ನೀಡಿವೆ.
ಅಮೆರಿಕಾದ ಜನರಿಗೆ ಆ್ಯಪ್ ಲಭ್ಯ ಅಮೆರಿಕಾದ ಕೆಲ ಪ್ರಾಂತ್ಯಗಳ ಜನರಿಗೆ ಈ ಆ್ಯಪ್ ಬಳಸಲು ಸ್ಥಳೀಯ ಆಡಳಿತದಿಂದ ಅನುಮತಿ ಸಿಕ್ಕಿದೆ. ಆ್ಯಪ್ ಇನ್ಸ್ಟಾಲ್ ಮಾಡಿಕೊಂಡ ಗ್ರಾಹಕರು ಪರಸ್ಪರ ಹತ್ತಿರ ಬಂದರೆ ಆ್ಯಪ್ ತಾನಾಗಿಯೇ ಡೇಟಾ ಸಂಗ್ರಹಿಸುತ್ತದೆ. ಒಮ್ಮೆ ಡೇಟಾ ಸಂಗ್ರಹವಾದ ನಂತರ ಆ ಇಬ್ಬರಲ್ಲಿ ಯಾವುದೇ ವ್ಯಕ್ತಿ ನಿರ್ದಿಷ್ಟ ದಿನದೊಳಗೆ ಸೋಂಕಿತನಾದರೂ ಇನ್ನೊಂದು ವ್ಯಕ್ತಿಗೆ ಪರೀಕ್ಷೆ ಮಾಡಿಸಿಕೊಳ್ಳುವಂತೆ ಎಚ್ಚರಿಕೆಯ ಸಂದೇಶ ರವಾನೆಯಾಗುತ್ತದೆ.
ಆದರೆ, ಈ ಸಂದರ್ಭದಲ್ಲಿ ಸೋಂಕಿತನ ಹೆಸರು ಮತ್ತು ವಿವರ ಗೌಪ್ಯವಾಗಿಯೇ ಇರುತ್ತದೆ. ಬದಲಾಗಿ ನೀವು ಸೋಂಕಿತರ ಸಂಪರ್ಕಕ್ಕೆ ಬಂದಿದ್ದೀರಿ ಎಂಬ ಸಂದೇಶವಷ್ಟೇ ರವಾನೆಯಾಗುತ್ತದೆ. ಆ್ಯಪಲ್ ಮತ್ತು ಗೂಗಲ್ ಸ್ಟೋರ್ಗಳಲ್ಲಿ ಈ ಆ್ಯಪ್ ಲಭ್ಯವಿದೆ.
ಅಮೆರಿಕಾದ ಕೆಲವು ಪ್ರಾಂತ್ಯಗಳನ್ನು ಹೊರತುಪಡಿಸಿದರೆ ಮಿಕ್ಕೆಲ್ಲಾ ಕಡೆಗಳಲ್ಲಿ ಅ್ಯಪ್ ಬಳಕೆಗೆ ಲಭ್ಯವಿದೆ. ಒಂದು ವೇಳೆ ಬಳಕೆದಾರರು ಸೋಂಕಿತರ ಸಂಪರ್ಕಕ್ಕೆ ಬಂದ ನಂತರ ಆ್ಯಪ್ ಬಳಕೆಗೆ ಅನುಮತಿ ಇಲ್ಲದ ಪ್ರದೇಶಕ್ಕೆ ಹೋದರೂ ಎಚ್ಚರಿಕೆ ಸಂದೇಶ ರವಾನೆಯಾಗುತ್ತದೆ ಎಂದು ತಿಳಿದುಬಂದಿದೆ.
ಜನಪ್ರಿಯ ಆ್ಯಪ್ಗಳಲ್ಲಿಯೂ ವೈರಸ್ ಪತ್ತೆ; ಇವು ನಿಮ್ಮ ಮೊಬೈಲ್ನಲ್ಲೂ ಇವೆಯಾ ಒಮ್ಮೆ ಚೆಕ್ ಮಾಡಿಕೊಳ್ಳಿ!
Published On - 2:59 pm, Mon, 7 December 20