‘ಪಾಸಿಟಿವ್’ ವಧು! PPE kit ತೊಟ್ಟು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

ಜೈಪುರ: ಕೊರೊನಾ ಬಂದ್ಮೇಲೆ ಮದುವೆ ಸಮಾರಂಭಗಳನ್ನ ಏರ್ಪಡಿಸೋದೇ ಕಷ್ಟ ಎಂಬಂತಾಗಿದೆ. ಆದರೆ, ಇಲ್ಲೊಂದು ಜೋಡಿ ಮದುವೆ ದಿನ ಕೊರೊನಾ ಪಾಸಿಟಿವ್ ರಿಪೋರ್ಟ್​ ಬಂತು ಅಂತ ಪಿಪಿಇ ಕಿಟ್ ತೊಟ್ಟು ಮದುವೆ ಆಗಿದ್ದಾರೆ. ಮದುವೆ ದಿನವೇ ಕೊರೊನಾ ಪಾಸಿಟಿವ್.. ರಾಜಸ್ಥಾನದ ಶಹಬಾದ್ ಸಮೀಪವಿರುವ ಕೋವಿಡ್ ಸೆಂಟರ್​ ಒಂದರಲ್ಲಿ ಈ ವಿಶೇಷ ಮದುವೆ ನಡೆದಿದೆ. ವಧುವಿಗೆ ಮದುವೆ ದಿನವೇ ಕೊರೊನಾ ಪಾಸಿಟಿವ್ ಕಾಣಿಸಿಕೊಂಡ ಕಾರಣ ವಧು-ವರ ಇಬ್ಬರೂ ಪಿಪಿಇ ಕಿಟ್ ಧರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸರ್ಕಾರದ ನಿಯಮಗಳ ಪ್ರಕಾರವೇ […]

‘ಪಾಸಿಟಿವ್’ ವಧು! PPE kit ತೊಟ್ಟು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ
ಮದುವೆ ದಿನವೇ ಕೊರೊನಾ ಪಾಸಿಟಿವ್, PPE kit ತೊಟ್ಟು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ
Skanda

| Edited By: sadhu srinath

Dec 07, 2020 | 12:06 PM

ಜೈಪುರ: ಕೊರೊನಾ ಬಂದ್ಮೇಲೆ ಮದುವೆ ಸಮಾರಂಭಗಳನ್ನ ಏರ್ಪಡಿಸೋದೇ ಕಷ್ಟ ಎಂಬಂತಾಗಿದೆ. ಆದರೆ, ಇಲ್ಲೊಂದು ಜೋಡಿ ಮದುವೆ ದಿನ ಕೊರೊನಾ ಪಾಸಿಟಿವ್ ರಿಪೋರ್ಟ್​ ಬಂತು ಅಂತ ಪಿಪಿಇ ಕಿಟ್ ತೊಟ್ಟು ಮದುವೆ ಆಗಿದ್ದಾರೆ.

ಮದುವೆ ದಿನವೇ ಕೊರೊನಾ ಪಾಸಿಟಿವ್.. ರಾಜಸ್ಥಾನದ ಶಹಬಾದ್ ಸಮೀಪವಿರುವ ಕೋವಿಡ್ ಸೆಂಟರ್​ ಒಂದರಲ್ಲಿ ಈ ವಿಶೇಷ ಮದುವೆ ನಡೆದಿದೆ. ವಧುವಿಗೆ ಮದುವೆ ದಿನವೇ ಕೊರೊನಾ ಪಾಸಿಟಿವ್ ಕಾಣಿಸಿಕೊಂಡ ಕಾರಣ ವಧು-ವರ ಇಬ್ಬರೂ ಪಿಪಿಇ ಕಿಟ್ ಧರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಸರ್ಕಾರದ ನಿಯಮಗಳ ಪ್ರಕಾರವೇ ಮದುವೆ ನಡೆಸಲಾಗಿದೆ ಎಂದು ವರದಿಯಾಗಿದೆ. ಸದ್ಯ ಪಿಪಿಇ ಕಿಟ್ ಧರಿಸಿ ಹಸೆಮಣೆ ಏರಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಜನ ತರಹೇವಾರಿ ಕಮೆಂಟ್ ಮಾಡಿದ್ದಾರೆ.

ಕೊರೊನಾ ಸಮಯದಲ್ಲಿ ಮತ್ತೆ ತಲೆ ಎತ್ತಿದ ಬಾಲ್ಯ ವಿವಾಹ ಪದ್ಧತಿ, 6 ತಿಂಗಳಲ್ಲಿ 1,791ಕೇಸ್ ದಾಖಲು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada