
ಬೆಂಗಳೂರು:ಕೊರೊನಾ ಮಹಾಮಾರಿ ಈ ವರ್ಷ ಎಲ್ಲ ಹಬ್ಬಹರಿದಿನಗಳ ಸಂಭ್ರವನ್ನು ಕಿತ್ತುಕೊಂಡಿರುವಂತೆ ಈಗ ದಸರಾ ಮೇಲೂ ತನ್ನ ಕರಾಳ ಛಾಯೆ ಬೀರಿದೆ. ಸದ್ಯಕ್ಕೆ ರಾಜಧಾನಿಯಲ್ಲಿ ದಸರಾ ಪೂಜೆಗೆ ಅವಕಾಶವನ್ನು ನೀಡಲಾಗಿದೆಯಾದರೂ ಅನೇಕ ಷರತ್ತುಗಳು ಅನ್ವಯವಾಗಲಿವೆ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಹೇಳಿದ್ದಾರೆ.
ಮಾರ್ಗಸೂಚಿಗಳ ಬಿಡುಗಡೆ
ಸಾರ್ವಜನಿಕ ಹಾಲ್, ಪ್ರದೇಶದಲ್ಲಿ ಕಾರ್ಯಕ್ರಮ ಮಾಡುವುದಾದ್ರೆ 200 ಜನಕ್ಕಿಂತ ಹೆಚ್ಚು ಜನ ಕಾರ್ಯಕ್ರಮಕ್ಕೆ ಸೇರುವಂತಿಲ್ಲ. ಇನ್ನು ಮೈದಾನಗಳಲ್ಲಿ ದಸರಾ ಮಾಡುವುದಾದರೆ ಬಿಬಿಎಂಪಿ ಅನುಮತಿ ಬೇಕೇಬೇಕು. ಕಡ್ಡಾಯವಾಗಿ ದೈಹಿಕ ಅಂತರ ಪಾಲಿಸಬೇಕು, ಸ್ಯಾನಿಟೈಸ್ ಮಾಡಬೇಕು ಎಂದು ಆಯುಕ್ತ ಮಂಜುನಾಥ ಪ್ರಸಾದ್ ಎಚ್ಚರಿಕೆ ಮಿಶ್ರಿತ ಷರತ್ತು ವಿಧಿಸಿದ್ದಾರೆ.