ಬೆಂಗಳೂರು: ನಗರದ 46 ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ ನೋಟಿಸ್ ಜಾರಿಗೊಳಿಸಿದೆ. ಕೊರೊನಾ ಸೋಂಕಿತರಿಗೆ ತಕ್ಷಣ ಬೆಡ್ ನೀಡದ ಕಾರಣ ಹಾಗೂ ಬಿಬಿಎಂಪಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ 46 ಖಾಸಗಿ ಆಸ್ಪತ್ರೆಗಳ ವಿರುದ್ಧ ನೋಟಿಸ್ ನೀಡಲಾಗಿದೆ.
ಕೊರೊನಾ ಸೋಂಕಿತರಿಗೆ ಖಾಸಗಿ ಆಸ್ಪತ್ರೆಯಲ್ಲಿ ಶೇ.50ರಷ್ಟು ಬೆಡ್ ಮೀಸಲು ಇಡಬೇಕು ಎಂದು ಸರ್ಕಾರ ಆದೇಶ ನೀಡಿದೆ. ಸರ್ಕಾರದ ಸೂಚಿಸಿದ್ದರೂ ಸೋಂಕಿತರಿಗೆ ಬೆಡ್ ಇಲ್ಲ ಎಂದು ಬೆಂಗಳೂರು ಖಾಸಗಿ ಆಸ್ಪತ್ರೆಗಳು ಹೇಳುತ್ತಿವೆ. ಹೀಗಾಗಿ ಸೋಂಕಿತರನ ಶಿಫ್ಟ್ ಮಾಡಲು BBMPಗೆ ಅಡಚಣೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಒಟ್ಟು 46 ಆಸ್ಪತ್ರೆಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಅಲ್ಲದೆ ಜುಲೈ 6ರಂದು ಟಿವಿ9ನಲ್ಲಿ ‘ಖಾಲಿ ಬೆಡ್ ಕಳ್ಳಾಟ’ ಎಂಬ ಶಿಶಿಕೆ ಅಡಿ ಅಭಿಯಾನ ಮಾಡಲಾಗಿತ್ತು. ಈ ಅಭಿಯಾನದಿಂದ ಎಚ್ಚೆತ್ತ ಬಿಬಿಎಂಪಿ ಅಧಿಕಾರಿಗಳು ಈಗ ಖಾಸಗಿ ಆಸ್ಪತ್ರೆ ವಿರುದ್ಧ ನೋಟಿಸ್ ಕಳಿಸಿವೆ.
Published On - 10:16 am, Fri, 10 July 20