ಮಳೆರಾಯನ ಭಾರಿ ಅಬ್ಬರ: ಮನೆ, ಬೆಳೆ ಜಲಾವೃತ
ಬಾಗಲಕೋಟೆ: ಜಿಲ್ಲೆಯ ಹಲವೆಡೆ ನಿನ್ನೆ ರಾತ್ರಿ ಸುರಿದ ಮಳೆ ಭಾರಿ ಅವಾಂತರ ಸೃಷ್ಟಿಸಿದೆ. ಶೂರ್ಪಾಲಿ ಗ್ರಾಮದ ತೋಟದ ಮನೆಗಳು, ಪುನರ್‌ವಸತಿ ಕೇಂದ್ರದ ಬಳಿಯಿರುವ ಮನೆಗಳಿಗೆ ನೀರು ನುಗ್ಗಿದ್ದು ಜನ ಪರದಾಡುವಂತಾಗಿದೆ. ನಿನ್ನೆ ರಾತ್ರಿ ತುಬಚಿ, ಜಂಬಗಿ ಕೆಡಿ, ಶೂರ್ಪಾಲಿ ಗ್ರಾಮಗಳಲ್ಲಿ ಮಳೆಯ ಅಬ್ಬರ ಜೋರಾಗಿತ್ತು. ಧಾರಾಕಾರ ಸುರಿದ ಮಳೆಗೆ ಗ್ರಾಮಗಳು ನಲುಗಿ ಹೋಗಿವೆ. ಶೂರ್ಪಾಲಿ ಗ್ರಾಮದ ತೋಟದ ಮನೆಗಳಿಗೆ ಹಾಗೂ ಪುನರ್ ವಸತಿ ಕೇಂದ್ರದ ಸಮೀಪದ ಮನೆಗಳಿಗೂ ನೀರು ನುಗ್ಗಿದೆ. ಮೊಣಕಾಲೆತ್ತರದವರೆಗೂ ಮನೆ ಸುತ್ತ ಮಳೆ ನೀರು […]
ಬಾಗಲಕೋಟೆ: ಜಿಲ್ಲೆಯ ಹಲವೆಡೆ ನಿನ್ನೆ ರಾತ್ರಿ ಸುರಿದ ಮಳೆ ಭಾರಿ ಅವಾಂತರ ಸೃಷ್ಟಿಸಿದೆ. ಶೂರ್ಪಾಲಿ ಗ್ರಾಮದ ತೋಟದ ಮನೆಗಳು, ಪುನರ್‌ವಸತಿ ಕೇಂದ್ರದ ಬಳಿಯಿರುವ ಮನೆಗಳಿಗೆ ನೀರು ನುಗ್ಗಿದ್ದು ಜನ ಪರದಾಡುವಂತಾಗಿದೆ.
ನಿನ್ನೆ ರಾತ್ರಿ ತುಬಚಿ, ಜಂಬಗಿ ಕೆಡಿ, ಶೂರ್ಪಾಲಿ ಗ್ರಾಮಗಳಲ್ಲಿ ಮಳೆಯ ಅಬ್ಬರ ಜೋರಾಗಿತ್ತು. ಧಾರಾಕಾರ ಸುರಿದ ಮಳೆಗೆ ಗ್ರಾಮಗಳು ನಲುಗಿ ಹೋಗಿವೆ. ಶೂರ್ಪಾಲಿ ಗ್ರಾಮದ ತೋಟದ ಮನೆಗಳಿಗೆ ಹಾಗೂ ಪುನರ್ ವಸತಿ ಕೇಂದ್ರದ ಸಮೀಪದ ಮನೆಗಳಿಗೂ ನೀರು ನುಗ್ಗಿದೆ. ಮೊಣಕಾಲೆತ್ತರದವರೆಗೂ ಮನೆ ಸುತ್ತ ಮಳೆ ನೀರು ಆವರಿಸಿದೆ.
ಹೊಲಗಳು ನೀರಿನಿಂದ ತುಂಬಿ ಹೋಗಿವೆ. ಮನೆಗಳು, ಬೆಳೆಗಳು ಜಲಾವೃತವಾಗಿವೆ. ಜನ, ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಹೈರಾಣಾಗಿದ್ದಾರೆ. ಕಳೆದ ವರ್ಷ ಆದ ಕೃಷ್ಣಾ ಪ್ರವಾಹ ಮಾಸುವ ಮುನ್ನವೇ ಈಗ ಮತ್ತೆ ಇಂತಹ ಸಂಕಷ್ಟ ಎದುರಿಸುತ್ತಿರುವುದು ಜನರಿಗೆ ಆತಂಕ ತಂದಿದೆ.
Published On - 11:20 am, Fri, 10 July 20