ಬೆಂಗಳೂರು: ನಾಮಫಲಕದಲ್ಲಿ ಕನ್ನಡ ನಿರ್ಲಕ್ಷ್ಯಿಸಿದ 14,000 ಅಂಗಡಿ ಮಾಲೀಕರಿಗೆ ಬಿಬಿಎಂಪಿ ನೋಟಿಸ್ ನೀಡಿದೆ. ನಾಮಫಲಕಗಳಲ್ಲಿ ಶೇಕಡಾ 60ರಷ್ಟು ಕನ್ನಡ ಬಳಕೆ ಕಡ್ಡಾಯವಾಗಿ ಮಾಡಬೇಕು ಎಂದು ಬಿಬಿಎಂಪಿ ಆದೇಶಿಸಿತ್ತು. ಅಲ್ಲದೆ ನವೆಂಬರ್ ಅಂತ್ಯದೊಳಗೆ ಕನ್ನಡ ನಾಮಫಲಕ ಅಳವಡಿಸಬೇಕು ಎಂದು ಹೇಳಿತ್ತು.
ಆದರೆ ಕೆಲವು ಹೋಟೆಲ್, ಮಾಲ್ ಮಾಲೀಕರು ಆದೇಶವನ್ನು ಪಾಲಿಸಿಲ್ಲ. ಹಾಗಾಗಿ ಬಿಬಿಎಂಪಿ ಆದೇಶ ಪಾಲಿಸದ ಅಂಗಡಿ ಮಾಲೀಕರಿಗೆ ನೋಟಿಸ್ ನೀಡಿದೆ. ಇನೈದು ದಿನದಲ್ಲಿ ಕನ್ನಡ ಬೋರ್ಡ್ ಹಾಕದಿದ್ದರೆ ಉದ್ದಿಮೆ ಪರವಾನಗಿ ರದ್ದು ಮಾಡಿ, ಅಂಗಡಿಗಳನ್ನು ಸಹ ಮುಚ್ಚುವುದಾಗಿ ಎಚ್ಚರಿಕೆ ನೀಡಿದ್ದೇವೆ ಎಂದು ಮೇಯರ್ ಗೌತಮ್‌ಕುಮಾರ್ ತಿಳಿಸಿದ್ದಾರೆ.
Published On - 8:08 am, Fri, 22 November 19