ನಿತ್ಯಾನಂದ ಕಾಣಿಸ್ತಿಲ್ಲ.. ಬಿಡದಿ ಪೀಠಕ್ಕೆ ಕಾಲಿಟ್ಟು ವರ್ಷವಾಗಿದೆ!

ರಾಮನಗರ: ಗುಜರಾತ್​ನ ಅಹಮದಾಬಾದ್ ಬಳಿ ಇರೋ ನಿತ್ಯಾನಂದ ಆಶ್ರಮದಿಂದ ಯುವತಿಯೊಬ್ಬಳ ನಿಗೂಢ ನಾಪತ್ತೆಯ ಬೆನ್ನಲ್ಲೇ ಈಗ ನಿತ್ಯಾನಂದ ಸ್ವಾಮೀಜಿ ಕೂಡ ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಹಲವು ತಿಂಗಳಿಂದ ನಿತ್ಯಾನಂದ ಸ್ವಾಮೀಜಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದೂವರೆ ವರ್ಷದಿಂದ ಬಿಡದಿಯ ನಿತ್ಯಾನಂದ ಧ್ಯಾನಪೀಠದ ಕಡೆಯೂ ಆತ ಮುಖ ಮಾಡಿಲ್ಲವಂತೆ. ದೇಶ ಬಿಟ್ಟು ಪರಾರಿಯಾದ್ರಾ ನಿತ್ಯಾನಂದ? ಬಿಡದಿಯ ಆಶ್ರಮದ ಸಿಬ್ಬಂದಿ, ನಿತ್ಯಾನಂದ ಸ್ವಾಮೀಜಿ ಗುಜರಾತ್ ಆಶ್ರಮದಲ್ಲಿದ್ದಾರೆ, ಉತ್ತರ ಭಾರತ ಪ್ರವಾಸದಲ್ಲಿದ್ದಾರೆ ಅನ್ನುತ್ತಿದ್ದಾರೆ. ಆದರೆ ನಿತ್ಯಾನಂದ ಅಲ್ಲೆಲ್ಲೂ ಇಲ್ಲ. ಆತ್ಯಾಚಾರ […]

ನಿತ್ಯಾನಂದ ಕಾಣಿಸ್ತಿಲ್ಲ.. ಬಿಡದಿ ಪೀಠಕ್ಕೆ ಕಾಲಿಟ್ಟು ವರ್ಷವಾಗಿದೆ!
Follow us
ಸಾಧು ಶ್ರೀನಾಥ್​
|

Updated on:Nov 21, 2019 | 3:58 PM

ರಾಮನಗರ: ಗುಜರಾತ್​ನ ಅಹಮದಾಬಾದ್ ಬಳಿ ಇರೋ ನಿತ್ಯಾನಂದ ಆಶ್ರಮದಿಂದ ಯುವತಿಯೊಬ್ಬಳ ನಿಗೂಢ ನಾಪತ್ತೆಯ ಬೆನ್ನಲ್ಲೇ ಈಗ ನಿತ್ಯಾನಂದ ಸ್ವಾಮೀಜಿ ಕೂಡ ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಹಲವು ತಿಂಗಳಿಂದ ನಿತ್ಯಾನಂದ ಸ್ವಾಮೀಜಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದೂವರೆ ವರ್ಷದಿಂದ ಬಿಡದಿಯ ನಿತ್ಯಾನಂದ ಧ್ಯಾನಪೀಠದ ಕಡೆಯೂ ಆತ ಮುಖ ಮಾಡಿಲ್ಲವಂತೆ.

ದೇಶ ಬಿಟ್ಟು ಪರಾರಿಯಾದ್ರಾ ನಿತ್ಯಾನಂದ? ಬಿಡದಿಯ ಆಶ್ರಮದ ಸಿಬ್ಬಂದಿ, ನಿತ್ಯಾನಂದ ಸ್ವಾಮೀಜಿ ಗುಜರಾತ್ ಆಶ್ರಮದಲ್ಲಿದ್ದಾರೆ, ಉತ್ತರ ಭಾರತ ಪ್ರವಾಸದಲ್ಲಿದ್ದಾರೆ ಅನ್ನುತ್ತಿದ್ದಾರೆ. ಆದರೆ ನಿತ್ಯಾನಂದ ಅಲ್ಲೆಲ್ಲೂ ಇಲ್ಲ. ಆತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ಆರೋಪಗಳನ್ನು ಎದುರಿಸುತ್ತಿರುವ ನಿತ್ಯಾನಂದವ 6 ತಿಂಗಳಿನಿಂದ ನಿರಂತರವಾಗಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿಲ್ಲ. ರಾಮನಗರದ ಮೂರನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಡಿಸೆಂಬರ್ 9 ರಂದು ನಿತ್ಯಾನಂದರ ವಿಚಾರಣೆ ನಡೆಯಲಿದ್ದು, ಇದುವರೆಗೂ ನಿತ್ಯಾನಂದನ ಸುಳಿವೇ ಇಲ್ಲ.

ಓರಿಜಿನಲ್ ಪಾಸ್ ಪೋರ್ಟ್ ಬ್ಲಾಕ್ ಇನ್ನು, ನಿತ್ಯಾನಂದನ ಓರಿಜಿನಲ್ ಪಾಸ್ ಪೋರ್ಟ್ ಬ್ಲಾಕ್ ಆಗಿದ್ದು, ನಕಲಿ ಪಾರ್ಸ್ ಪೋರ್ಟ್ ಮೂಲಕ ದ್ವೀಪರಾಷ್ಟ್ರಕ್ಕೆ ಹೋಗಿದ್ದಾರಾ ಎಂಬ ಶಂಕೆಯೂ ವ್ಯಕ್ತವಾಗಿದೆ. ಆಸ್ಟ್ರೇಲಿಯಾ ಸಮೀಪದ ದ್ವೀಪವೊಂದರಲ್ಲಿ ತಂಗಿದ್ದಾನೆ ಎಂಬ ಮಾಹಿತಿಯೂ ಇದೆ. ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಸಣ್ಣಪುಟ್ಟ ಕಾರಣ ಕೊಟ್ಟು ವಿಚಾರಣೆ ಮುಂದಕ್ಕೆ ತಳ್ಳುತ್ತಿದ್ದಾರೆನೋ ಎಂಬ ಅನುಮಾನವೂ ಮೂಡಿದೆ.

Published On - 3:56 pm, Thu, 21 November 19