ಬಿಬಿಎಂಪಿ ಇನ್ನು ಒಂದು ತಿಂಗಳಲ್ಲಿ ಕ್ಲೋಸ್?

|

Updated on: Oct 15, 2019 | 7:18 PM

ಬೆಂಗಳೂರು:ಕರ್ತವ್ಯಲೋಪ ಎಸಗಿದ ಬಿಬಿಎಂಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್​ನಿಂದ ಮಹತ್ವದ ಸೂಚನೆ ರವಾನೆಯಾಗಿದೆ. ಒಂದು ಕಾಲದಲ್ಲಿ ಹಸಿರು ನಗರವಾಗಿದ್ದ ಬೆಂಗಳೂರು, ಇಂದು ಹದಗೆಟ್ಟಿದಂತಹ ಸ್ಥಿತಿ ನಿರ್ಮಾಣವಾಗಿದೆ ಇದಕ್ಕೆ ಬಿಬಿಎಂಪಿಯೇ ನೇರ ಹೊಣೆ. ಕರ್ತವ್ಯ ನಿರ್ವಹಣೆಯಲ್ಲಿ ಬಿಬಿಎಂಪಿಯು ವೈಫಲ್ಯ ಕಂಡಿದೆ. ತ್ಯಾಜ್ಯ ವಿಲೇವಾರಿಯಲ್ಲಿ ಬಿಬಿಎಂಪಿ ಸಂಪೂರ್ಣ ವಿಫಲವಾಗಿದೆ. ಕರ್ತವ್ಯಲೋಪ ಎಸಗಿದ ಬಿಬಿಎಂಪಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ, ಬಿಬಿಎಂಪಿ ವಿಸರ್ಜನೆ ಕುರಿತು 1 ತಿಂಗಳಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂದು ಹೈಕೋರ್ಟ್ ವಿಭಾಗೀಯ ಪೀಠ ರಾಜ್ಯ ಸರ್ಕಾರಕ್ಕೆ […]

ಬಿಬಿಎಂಪಿ ಇನ್ನು ಒಂದು ತಿಂಗಳಲ್ಲಿ ಕ್ಲೋಸ್?
Follow us on

ಬೆಂಗಳೂರು:ಕರ್ತವ್ಯಲೋಪ ಎಸಗಿದ ಬಿಬಿಎಂಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್​ನಿಂದ ಮಹತ್ವದ ಸೂಚನೆ ರವಾನೆಯಾಗಿದೆ.

ಒಂದು ಕಾಲದಲ್ಲಿ ಹಸಿರು ನಗರವಾಗಿದ್ದ ಬೆಂಗಳೂರು, ಇಂದು ಹದಗೆಟ್ಟಿದಂತಹ ಸ್ಥಿತಿ ನಿರ್ಮಾಣವಾಗಿದೆ ಇದಕ್ಕೆ ಬಿಬಿಎಂಪಿಯೇ ನೇರ ಹೊಣೆ. ಕರ್ತವ್ಯ ನಿರ್ವಹಣೆಯಲ್ಲಿ ಬಿಬಿಎಂಪಿಯು ವೈಫಲ್ಯ ಕಂಡಿದೆ. ತ್ಯಾಜ್ಯ ವಿಲೇವಾರಿಯಲ್ಲಿ ಬಿಬಿಎಂಪಿ ಸಂಪೂರ್ಣ ವಿಫಲವಾಗಿದೆ. ಕರ್ತವ್ಯಲೋಪ ಎಸಗಿದ ಬಿಬಿಎಂಪಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ, ಬಿಬಿಎಂಪಿ ವಿಸರ್ಜನೆ ಕುರಿತು 1 ತಿಂಗಳಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂದು ಹೈಕೋರ್ಟ್ ವಿಭಾಗೀಯ ಪೀಠ ರಾಜ್ಯ ಸರ್ಕಾರಕ್ಕೆ ತೀವ್ರ ತರಾಟೆ ತೆಗೆದುಕೊಂಡಿದೆ.

ಬೆಂಗಳೂರಿನ ನಾಗರಿಕರ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತಿದೆ. ಸಂವಿಧಾನದ ಆರ್ಟಿಕಲ್ 21 ಪ್ರಕಾರ ಜೀವಿಸುವ ಹಕ್ಕು ಉಲ್ಲಂಘನೆಯಾಗಿದೆ. 2016ರ ಎಂಎಸ್​ಡಬ್ಯ್ಲೂ ನಿಯಮ ಜಾರಿಗೆ ಹೈಕೋರ್ಟ್ ಗಡುವು ಮಾಡಿದೆ. ಎರಡು ತಿಂಗಳಲ್ಲಿ ಸರ್ಕಾರ, ಬಿಬಿಎಂಪಿ ನಿಯಮ ಜಾರಿ ಮಾಡಬೇಕು, ಇಲ್ಲವಾದರೆ ಕಟ್ಟಡ ನಿರ್ಮಾಣಗಳಿಗೇ ನಿರ್ಬಂಧ ಹೇರುತ್ತೇವೆ ಎಂದು ಸಿಜೆ ಎ.ಎಸ್.ಒಕಾ & ನ್ಯಾ.ಕೃಷ್ಣಕುಮಾರ್​ರವರ ಪೀಠ ಆದೇಶ ನೀಡಿದೆ.

Published On - 7:07 pm, Tue, 15 October 19