ವೆಂಟಿಲೇಟರ್ಗಾಗಿ ಅಲೆದು ಅಲೆದು ಕೊನೆಯುಸಿರೆಳೆದ ಪೌರಕಾರ್ಮಿಕ
ಬೆಂಗಳೂರು: ಸೂಕ್ತ ಸಮಯಕ್ಕೆ ವೆಂಟಿಲೇಟರ್ ಸಿಗದೆ ಮತ್ತೊಬ್ಬ ಪೌರಕಾರ್ಮಿಕ ನಗರದಲ್ಲಿ ಸಾವನ್ನಪ್ಪಿದ್ದಾರೆ. ಪುಲಿಕೇಶಿನಗರ ಸಬ್ಡಿವಿಷನ್ ವಾರ್ಡ್ ನಂಬರ್ 61ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೃತ ಪೌರಕಾರ್ಮಿಕನಿಗೆ ನಿನ್ನೆ ಸಂಜೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಆದರೆ, ರಾತ್ರಿ 9 ಗಂಟೆಯವರೆಗೆ ಎಲ್ಲಿಯೂ ವೆಂಟಿಲೇಟರ್ ಮತ್ತು ಬೆಡ್ ಸಿಗಲೇ ಇಲ್ಲ. ಬಿಬಿಎಂಪಿ ಡ್ಯಾಶ್ಬೋರ್ಡ್ನಲ್ಲಿ 250+ ವೆಂಟಿಲೇಟರ್ ಬೆಡ್ಗಳು ಖಾಲಿ ಇವೆ ಎಂಬ ಮಾಹಿತಿ ಸಿಕ್ಕಿತ್ತು. ಆದರೆ ಖಾಸಗಿ ಆಸ್ಪತ್ರೆಗಳಿಗೆ ಹೋದರೆ ವೆಂಟಿಲೇಟರ್ ಇಲ್ಲ ಎಂಬ ಸಬೂಬು ಹೇಳಿದರಂತೆ. ಕೊನೆಗೆ, ದೇವನಹಳ್ಳಿಯ […]
ಬೆಂಗಳೂರು: ಸೂಕ್ತ ಸಮಯಕ್ಕೆ ವೆಂಟಿಲೇಟರ್ ಸಿಗದೆ ಮತ್ತೊಬ್ಬ ಪೌರಕಾರ್ಮಿಕ ನಗರದಲ್ಲಿ ಸಾವನ್ನಪ್ಪಿದ್ದಾರೆ. ಪುಲಿಕೇಶಿನಗರ ಸಬ್ಡಿವಿಷನ್ ವಾರ್ಡ್ ನಂಬರ್ 61ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೃತ ಪೌರಕಾರ್ಮಿಕನಿಗೆ ನಿನ್ನೆ ಸಂಜೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಆದರೆ, ರಾತ್ರಿ 9 ಗಂಟೆಯವರೆಗೆ ಎಲ್ಲಿಯೂ ವೆಂಟಿಲೇಟರ್ ಮತ್ತು ಬೆಡ್ ಸಿಗಲೇ ಇಲ್ಲ.
ಬಿಬಿಎಂಪಿ ಡ್ಯಾಶ್ಬೋರ್ಡ್ನಲ್ಲಿ 250+ ವೆಂಟಿಲೇಟರ್ ಬೆಡ್ಗಳು ಖಾಲಿ ಇವೆ ಎಂಬ ಮಾಹಿತಿ ಸಿಕ್ಕಿತ್ತು. ಆದರೆ ಖಾಸಗಿ ಆಸ್ಪತ್ರೆಗಳಿಗೆ ಹೋದರೆ ವೆಂಟಿಲೇಟರ್ ಇಲ್ಲ ಎಂಬ ಸಬೂಬು ಹೇಳಿದರಂತೆ. ಕೊನೆಗೆ, ದೇವನಹಳ್ಳಿಯ ಆಕಾಶ್ ಆಸ್ಪತ್ರೆಗೆ ಸಾಗಿಸುವಾಗ ಪೌರಕಾರ್ಮಿಕ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಹೀಗಾಗಿ, ಮೃತ ಪೌರಕಾರ್ಮಿಕನ ಕುಟುಂಬಸ್ಥರು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published On - 11:00 am, Sun, 26 July 20