ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೇಕ್ ಇನ್ ಇಂಡಿಯಾ ಯೋಜನೆ ಶುರುವಾಗಿದೆ. ಒಂದೆಡೆ HALಗೆ ವಿಮಾನ ನಿರ್ಮಾಣ ಕಾರ್ಯಕ್ಕೆ ರಕ್ಷಣಾ ಸಚಿವಾಲಯದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಮತ್ತೊಂದೆಡೆ ಬೆಂಗಳೂರಿನ ಸರ್ಕಲ್, ರಸ್ತೆ ಬ್ಯೂಟಿಫಿಕೇಷನ್ ಶುರುವಾಗಿದೆ. ಸದ್ಯ ಈಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸೂಚನೆಯಂತೆ ಸಿಎಂ ಗೃಹ ಕಚೇರಿ ಬಳಿ ಮೇಕ್ ಇನ್ ಇಂಡಿಯಾ ಲಾಂಛನ ಸ್ಥಾಪನೆಗೆ ಸಿದ್ಧತೆ ನಡೆಯುತ್ತಿದೆ.
ಒಂದು ಸಾವಿರ ಕೆಜಿ ತೂಕದ ಲಾಂಛನ ಸ್ಥಾಪನೆಗೆ ಸಿದ್ಧತೆ ನಡೆಯುತ್ತಿದೆ. BBMP ಆಯುಕ್ತ ಮಂಜುನಾಥ್ ಪ್ರಸಾದ್ ನೇತೃತ್ವದಲ್ಲಿ ಮೇಕ್ ಇನ್ ಇಂಡಿಯಾ ಲಾಂಛನ ಸ್ಥಾಪನೆ ಮಾಡಲಾಗುತ್ತೆ. ಈ ಸಂಬಂಧ ನಿನ್ನೆ BBMP ಆಯುಕ್ತ ಮಂಜುನಾಥ್ ಪ್ರಸಾದ್ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಜತೆಗೆ ಬೆಂಗಳೂರಿನ ರಸ್ತೆಗಳ ಬ್ಯೂಟಿಫಿಕೇಷನ್‌ಗೂ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಸದ್ಯ ಮೇಕ್ ಇನ್ ಇಂಡಿಯಾ ಯೋಜನೆಯಡಿ ಬೆಂಗಳೂರು ಮತ್ತಷ್ಟು ಸ್ಮಾರ್ಟ್ ಆಗಲಿದೆ.
RCEPಯಿಂದ ಮೋದಿಯದ್ದೇ ಮೇಕ್ ಇನ್ ಇಂಡಿಯಾ ಮೂಲೆ ಗುಂಪು: ಸಿದ್ದು ವ್ಯಂಗ್ಯ