AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aero India 2021 ಲೋಹದ ಹಕ್ಕಿಗಳ ಹಾರಾಟಕ್ಕೆ ಇಂದು ಬೀಳಲಿದೆ ತೆರೆ

Aero India 2021 ಕಲರ್ ಪುಲ್ ಇವೆಂಟ್ ಏರ್ ಶೋ ಗೆ ಇವತ್ತು ಲಾಸ್ಟ್ ಡೇ.. ಎರಡು ದಿನ ಬಾನಂಗಳದಲ್ಲಿ ಲೋಹದ ಹಕ್ಕಿಗಳು ಮೋಡಿ ಮಾಡಿ ಡಿಫರೆಂಟ್ ಆಗಿ ಹಾರಾಟ ಮಾಡಿ ಫುಲ್ ಎಂಟರ್​ಟೇನ್ಮೆಂಟ್ ನೀಡಿದ್ವು. ಬಾನಂಗಳದ ಕಮಾಲ್ ಮಾಡುತ್ತಿದ್ದ ಏರ್‌ಶೋ ಇವತ್ತಿಗೆ ತೆರೆ ಬೀಳಲಿದೆ.

Aero India 2021 ಲೋಹದ ಹಕ್ಕಿಗಳ ಹಾರಾಟಕ್ಕೆ ಇಂದು ಬೀಳಲಿದೆ ತೆರೆ
ಏರೋ ಇಂಡಿಯಾ 2021
Follow us
ಆಯೇಷಾ ಬಾನು
|

Updated on: Feb 05, 2021 | 7:47 AM

ಬೆಂಗಳೂರು: Aero India 2021 ದೇಶದ ಪ್ರತಿಷ್ಠಿತ ಏರೋ ಶೋಗೆ ಇಂದು ಅದ್ಧೂರಿ ತೆರೆ ಬೀಳಲಿದೆ. 2 ದಿನ ಎದೆ ಝೆಲ್ ಅನ್ನಿಸೋ ಲೋಹದ ಹಕ್ಕಿಗಳ ಸಾಹಸ ಪ್ರದರ್ಶನ ನೋಡುಗರನ್ನ ನಿಬ್ಬೆರಗಾಗಿಸಿತ್ತು. 3ನೇ ದಿನವಾದ ಇಂದು ಈ ಕಲರ್‌ಪುಲ್ ಶೋಗೆ ತೆರಬೀಳಲಿದೆ. ಕೊರೊನಾ ಆತಂಕದ ನಡುವೆ ನಡೆದ ಏರೋ ಶೋ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಬಾರಿ ಸೂರ್ಯಕಿರಣ್ ಹಾಗೂ ಸಾರಂಗ್ ತಂಡ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿತ್ತು.‌ ಆಕಾಶದಲ್ಲಿ ಈ ತಂಡಗಳು ನಡೆಸಿದ ಝಲಕ್ ಎಲ್ಲರ ಹುಬ್ಬೆರಿಸುವಂತೆ ಮಾಡಿದೆ.

ಈ ಬಾರಿಯ ಏರೋ ಶೋ ಅಷ್ಟೊಂದು ಭರ್ಜರಿಯಾಗಿ ಇರಲಿಲ್ಲ, ಬಟ್ ವಿಶ್ವದ ರಕ್ಷಣಾ ಕ್ಷೇತ್ರವನ್ನ ತನ್ನತ್ತ ಸೆಳೆದಿದ್ದಂತ್ತು ಸತ್ಯ. ಸ್ವದೇಶಿ ನಿರ್ಮಿತ ತೇಜಸ್, ಸುಖೋಯ್, ಸೂರ್ಯಕಿರಣ್ ಹಾಗೂ ಸಾರಂಗ್ ತಂಡ ಮತ್ತು ಭಾರತ ರಕ್ಷಣಾ ಕ್ಷೇತ್ರಕ್ಕೆ ಸೇರ್ಪಡೆಗೊಂಡ ರಫೆಲ್ ವಿಮಾನಗಳು ಎಲ್ಲರ ಗಮನ ಸೆಳೆದಿದ್ವು. ಕೊನೆಯ ದಿನವಾದ ಇಂದಿನ ಏರೋ ಶೋ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ರಾಮ್ ನಾಥ್ ಕೋವಿಂದ್ ಏರೋ ಶೋ ಉದ್ದೇಶಿಸಿ ಭಾಷಣ ಮಾಡಲಿದ್ದಾರಂತೆ.

ಕಳೆದ ಎರಡು ದಿನಗಳಿಂದ ನಾನಾ ಕಂಪನಿಗಳು ಬ್ಯುಸಿನೆಸ್ ಟಾಕ್ ನಡೆಸಿದ್ದು, ಏರೋ ಶೋನ ಕೊನೆಯ ದಿನವಾದ ಇಂದು ಕೆಲ ಒಪ್ಪಂದಗಳಿಗೆ ಸಹಿಹಾಕಲಿದ್ದಾರೆ. ಡಿಆರ್ ಡಿಒ ಗೆ ಬಾಂಗ್ಲಾದೇಶ ರಕ್ಷಣಾ ಅಧಿಕಾಗಳು ಭೇಟಿ ನೀಡಲಿದ್ದು, ಕೆಲ ರಕ್ಷಣಾ ಕ್ಷೇತ್ರ ಒಪ್ಪಂದದ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಇನ್ನೂ ಈ ಬಾರಿ ಸಾರ್ವಜನಿಕರಿಗೆ ಪ್ರವೇಶ ಕಂಪ್ಲೀಟ್ ಆಗಿ ಕ್ಲೋಸ್ ಮಾಡಿರುವ ಕಾರಣ ಸಾರ್ವಜನಿಕರು ಈ ಏರ್‌ಶೋವನ್ನ ಮಿಸ್‌ ಮಾಡ್ಕೊಂಡಿದ್ದಾರೆ. ಒಟ್ಟಾರೆ ಕೊನೆಯ ದಿನವಾದ ಇಂದಿನ ಏರ್‌ ಶೋನಲ್ಲಿ ಲೋಹದ ಹಕ್ಕಿಗಳು ಮತ್ತಷ್ಟು ಚಮತ್ಕಾರ ಮಾಡಲಿವೆ.

Aero India 2021 ಲಘು ಯುದ್ಧ ವಿಮಾನ ತೇಜಸ್​ ಬೆನ್ನೇರಿದ ಸಂಸದ ತೇಜಸ್ವಿ ಸೂರ್ಯ.. Photos