IMA ಬಹುಕೋಟಿ ವಂಚನೆ: IAS ಪಿ.ಡಿ. ಕುಮಾರ್‌ಗೆ ಸಿಕ್ತು ಜಾಮೀನು

|

Updated on: Nov 25, 2020 | 2:09 PM

ಬೆಂಗಳೂರು: ಹೂಡಿಕೆದಾರರಿಗೆ IMAನಿಂದ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಪಿ.ಡಿ.ಕುಮಾರ್ ಅಲಿಯಾಸ್ ಬಿಡಿಎ ಕುಮಾರ್‌ಗೆ ಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ. ಕುಮಾರ್ ಅಮೆರಿಕದಲ್ಲಿ ನಡೆಯಲಿರುವ ತನ್ನ ಮಗಳ ವಿವಾಹಕ್ಕೆ ಹೋಗಲು ಅವಕಾಶ ಕೇಳಿದ್ದರು. ಆದರೆ ಭಾರತ ಬಿಟ್ಟು ಹೋಗದಂತೆ ಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ. ಹಾಗೂ 2 ಶ್ಯೂರಿಟಿ, ₹5 ಲಕ್ಷ ಬಾಂಡ್, ಸಾಕ್ಷ್ಯನಾಶ ಮಾಡದಂತೆ ಷರತ್ತು ಹಾಕಿದೆ. ಕೆಲ ದಿನಗಳ ಹಿಂದೆಯಷ್ಟೇ CBI ಅಧಿಕಾರಿಗಳಿಂದ BDA ವಿಶೇಷ ಭೂಸ್ವಾಧೀನಾಧಿಕಾರಿ ಪಿ.ಡಿ.ಕುಮಾರ್ ಬಂಧನವಾಗಿತ್ತು. […]

IMA ಬಹುಕೋಟಿ ವಂಚನೆ: IAS ಪಿ.ಡಿ. ಕುಮಾರ್‌ಗೆ ಸಿಕ್ತು ಜಾಮೀನು
Follow us on

ಬೆಂಗಳೂರು: ಹೂಡಿಕೆದಾರರಿಗೆ IMAನಿಂದ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಪಿ.ಡಿ.ಕುಮಾರ್ ಅಲಿಯಾಸ್ ಬಿಡಿಎ ಕುಮಾರ್‌ಗೆ ಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ.

ಕುಮಾರ್ ಅಮೆರಿಕದಲ್ಲಿ ನಡೆಯಲಿರುವ ತನ್ನ ಮಗಳ ವಿವಾಹಕ್ಕೆ ಹೋಗಲು ಅವಕಾಶ ಕೇಳಿದ್ದರು. ಆದರೆ ಭಾರತ ಬಿಟ್ಟು ಹೋಗದಂತೆ ಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ. ಹಾಗೂ 2 ಶ್ಯೂರಿಟಿ, ₹5 ಲಕ್ಷ ಬಾಂಡ್, ಸಾಕ್ಷ್ಯನಾಶ ಮಾಡದಂತೆ ಷರತ್ತು ಹಾಕಿದೆ. ಕೆಲ ದಿನಗಳ ಹಿಂದೆಯಷ್ಟೇ CBI ಅಧಿಕಾರಿಗಳಿಂದ BDA ವಿಶೇಷ ಭೂಸ್ವಾಧೀನಾಧಿಕಾರಿ ಪಿ.ಡಿ.ಕುಮಾರ್ ಬಂಧನವಾಗಿತ್ತು. ಮನ್ಸೂರ್​ ಖಾನ್ ಬಳಿ 3-4 ಕೋಟಿ ರೂಪಾಯಿ ಪಡೆದಿದ್ದ ಕುಮಾರ್​ ವಿರುದ್ಧ ಸಿಬಿಐ ಅಧಿಕಾರಿಗಳು FIR ದಾಖಲಿಸಿದ್ದರು.

ಇದನ್ನೂ ಓದಿ: IMA ವಂಚನೆ ಪ್ರಕರಣ: BDA ವಿಶೇಷ ಭೂಸ್ವಾಧೀನಾಧಿಕಾರಿ ಅರೆಸ್ಟ್

 

Published On - 2:07 pm, Wed, 25 November 20