AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಸೆಂಬರ್ 5ಕ್ಕೆ ನಡೆಯೋ ಬಂದ್​ಗೆ ಸಿಗ್ತಿಲ್ಲ ಬೆಂ‘ಬಲ’.. ಮತ್ತೊಮ್ಮೆ ಸಭೆ!

ಡಿಸೆಂಬರ್ 5ರಂದು ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ನಡೆಯಲಿರುವ ಬಂದ್​ಗೆ ಸಂಪೂರ್ಣ ಬೆಂಬಲ ಸಿಕ್ಕಿಲ್ಲ. ಕೆಲ ಸಂಘಟನೆಗಳು ರಾಜ್ಯ ಬಂದ್ ಮಾಡಬೇಕು ಅಂತಿವೆ. ಇನ್ನು ಕೆಲ ಸಂಘಟನೆಗಳು ಬಂದ್ ಬೇಡ ಅಂತಾ ಹೇಳ್ತಿವೆ.

ಡಿಸೆಂಬರ್ 5ಕ್ಕೆ ನಡೆಯೋ ಬಂದ್​ಗೆ ಸಿಗ್ತಿಲ್ಲ ಬೆಂ‘ಬಲ’.. ಮತ್ತೊಮ್ಮೆ ಸಭೆ!
ಆಯೇಷಾ ಬಾನು
|

Updated on:Nov 25, 2020 | 1:48 PM

Share

ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಡಿಸೆಂಬರ್ 5ರಂದು ಬಂದ್ ಮಾಡುವ ಬಗ್ಗೆ ಇಂದು ಮತ್ತೊಮ್ಮೆ ಸಭೆ ನಡೆಯುತ್ತಿದೆ. ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಒಕ್ಕೂಟ ಸಂಘದಿಂದ ಸಭೆ ನಡೆಯುತ್ತಿದೆ. ಸಭೆಯಲ್ಲಿ ಡಿಸೆಂಬರ್ 5ರ ರಾಜ್ಯ ಬಂದ್ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತೆ.

ಸಭೆಯಲ್ಲಿ ಕನ್ನಡ ಪರ ಹೋರಾಟಗಾರರಾದ ಶಿವರಾಮೇಗೌಡ, ಪ್ರವೀಣ್ ಕುಮಾರ್ ಶೆಟ್ಟಿ, ಮುಖ್ಯಮಂತ್ರಿ ಚಂದ್ರು, ಸಾ.ರಾ.ಗೋವಿಂದು, ವಕೀಲರ ಸಂಘದ ಅಧ್ಯಕ್ಷ ರಂಗನಾಥ್, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ, ಓಲಾ ಊಬರ್ ಸಂಘಟನೆ ಅಧ್ಯಕ್ಷ ತನ್ವೀರ್ ಭಾಗಿಯಾಗಿದ್ದಾರೆ.

ಬಂದ್ ಸಂಬಂಧ ಸಭೆಯಲ್ಲಿ ಹಗ್ಗಜಗ್ಗಾಟ ಮುಂದುವರೆದಿದೆ. ಮೀಟಿಂಗ್​​ನಲ್ಲಿ ಬಂದ್ ಬಗ್ಗೆ ಒಮ್ಮತದ ಅಭಿಪ್ರಾಯ ಬರ್ತಿಲ್ಲ. ಕೆಲ ಸಂಘಟನೆಗಳು ರಾಜ್ಯ ಬಂದ್ ಮಾಡಬೇಕು ಅಂತಿವೆ. ಇನ್ನು ಕೆಲ ಸಂಘಟನೆಗಳು ಬಂದ್ ಬೇಡ ಅಂತಾ ಹೇಳ್ತಿವೆ. ಹೀಗಾಗಿ ಬಂದ್ ಮೀಟಿಂಗ್ ಭಾರಿ ಕುತೂಹಲ ಹೆಚ್ಚಿಸಿದೆ.

ಬಂದ್​ಗೆ ಸಿಕ್ತಿಲ್ಲ ಬೆಂಬಲ: ಇನ್ನು ಡಿ.5ರ ರಾಜ್ಯ ಬಂದ್​ಗೆ ಬೀದಿಬದಿ ವ್ಯಾಪಾರಿಗಳ ಬೆಂಬಲವಿಲ್ಲ ಎಂದು ಬೀದಿಬದಿ ವ್ಯಾಪಾರಿಗಳ ಸಂಘದ ರಾಜ್ಯಾಧ್ಯಕ್ಷ ರಂಗಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಬಂದ್​ಗೆ ಕೇವಲ ನೈತಿಕ ಬೆಂಬಲ ನೀಡೋದಾಗಿ ತಿಳಿಸಿದ್ದಾರೆ. ರೈಲು ಸಂಚಾರ ಎಂದಿನಂತೆ ಇರುತ್ತೆ. ನಮ್ಮ ಮೆಟ್ರೋ ಎಂದಿನಂತೆ ತನ್ನ ಕರ್ತವ್ಯ ನಿರ್ವಹಿಸಲಿದೆ ಎಂದು BMRCL ಸ್ಪಷ್ಟಪಡಿಸಿದೆ. ಆದರೆ ಓಲಾ, ಉಬರ್, ಟ್ಯಾಕ್ಸಿ, ಕ್ಯಾಬ್ ಬಂದ್​ಗೆ ಬೆಂಬಲ ನೀಡಿವೆ.

ಲಾರಿ ಮಾಲೀಕರ ಸಂಘ ಬೆಂಬಲ ಸೂಚಿಸಿಲ್ಲ. ರಾಜ್ಯಾದ್ಯಂತ ಎಂದಿನಂತೆ BMTC ಮತ್ತು KSRTC ಬಸ್​ಗಳು ಸಂಚರಿಸಲಿವೆ. ಬಾರ್ ಅಂಡ್ ರೆಸ್ಟೋರೆಂಟ್ ಎಂದಿನಂತೆ ತೆರೆದಿರುತ್ತವೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಬಂದ್​ಗೆ ಬೆಂಬಲ ಸೂಚಿಸಿಲ್ಲ. ಕೊರೊನಾ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ಆನ್​ಲೈನ್ ತರಗತಿಗಳು ನಡೀತಿವೆ. ಕೇವಲ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜು ಆರಂಭ ಆಗಿದೆ. ಆದ್ರೆ ಬಂದ್​ಗೆ ಕಾಲೇಜು ಆಡಳಿತ ಮಂಡಳಿ ಬೆಂಬಲ ಸೂಚಿಸಿಲ್ಲ.

ನೂರಕ್ಕೆ ನೂರರಷ್ಟು ಬೆಂಗಳೂರು ಬಂದ್ ಆಗುತ್ತೆ: ಬೆಂಗಳೂರಲ್ಲಿ ಬಸ್​ಗಳ ಓಡಾಟ ಬಂದ್ ಆಗಬೇಕು. ಆಟೋ, ಓಲಾ ಸೇರಿ ಎಲ್ಲಾ ವಾಹನ ಸಂಚಾರ ಬಂದ್ ಆಗುತ್ತೆ. ಏನಾದ್ರೂ ಅನಾಹುತ ಆದ್ರೆ ಅದಕ್ಕೆ ನಾವು ಹೊಣೆ ಅಲ್ಲ. ನೂರಕ್ಕೆ ನೂರರಷ್ಟು ಬೆಂಗಳೂರು ಬಂದ್ ಆಗುತ್ತೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿಕೆ ನೀಡಿದ್ದಾರೆ.

Published On - 12:54 pm, Wed, 25 November 20

ಥ್ರಿಲ್ಲರ್ ಸೂಪರ್ ಥ್ರಿಲ್ಲರ್... ಕೊನೆಯ ಎಸೆತದಲ್ಲಿ ಸಿಕ್ಸ್, ಮ್ಯಾಚ್ ವಿನ್
ಥ್ರಿಲ್ಲರ್ ಸೂಪರ್ ಥ್ರಿಲ್ಲರ್... ಕೊನೆಯ ಎಸೆತದಲ್ಲಿ ಸಿಕ್ಸ್, ಮ್ಯಾಚ್ ವಿನ್
ಎಷ್ಟು ಅದ್ದೂರಿಯಾಗಿದೆ ನೋಡಿ ಅಲ್ಲು ಅರ್ಜುನ್ ಹೊಸ ಥಿಯೇಟರ್
ಎಷ್ಟು ಅದ್ದೂರಿಯಾಗಿದೆ ನೋಡಿ ಅಲ್ಲು ಅರ್ಜುನ್ ಹೊಸ ಥಿಯೇಟರ್
ಗಿಲ್ಲಿ ಬಿಗ್ ಬಾಸ್ ಮನೆ ಒಳಗೆ ಇಟ್ಟ ಬೇಡಿಕೆಯನ್ನು ಹೊರಗೆ ಈಡೇರಿಸಿದ ಫ್ಯಾನ್ಸ
ಗಿಲ್ಲಿ ಬಿಗ್ ಬಾಸ್ ಮನೆ ಒಳಗೆ ಇಟ್ಟ ಬೇಡಿಕೆಯನ್ನು ಹೊರಗೆ ಈಡೇರಿಸಿದ ಫ್ಯಾನ್ಸ
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
ಮರಣಿಸಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಯಾಕೆ?
ಮರಣಿಸಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಯಾಕೆ?
ಓಲಾ, ಊಬರ್, ರ್ಯಾಪಿಡೋ, ನಮ್ಮ ಯಾತ್ರಿ ಬಗ್ಗೆ ಸರ್ಕಾರ ಬಿಗ್ ಅಪ್​ಡೇಟ್!
ಓಲಾ, ಊಬರ್, ರ್ಯಾಪಿಡೋ, ನಮ್ಮ ಯಾತ್ರಿ ಬಗ್ಗೆ ಸರ್ಕಾರ ಬಿಗ್ ಅಪ್​ಡೇಟ್!
ಈ ರಾಶಿಯವರಿಗೆ ಇಂದು ವೃತ್ತಿಯಲ್ಲಿ ಪ್ರಗತಿ, ವ್ಯವಹಾರದಲ್ಲಿ ಲಾಭ
ಈ ರಾಶಿಯವರಿಗೆ ಇಂದು ವೃತ್ತಿಯಲ್ಲಿ ಪ್ರಗತಿ, ವ್ಯವಹಾರದಲ್ಲಿ ಲಾಭ
ಕಿಕ್ಕಿರಿದ ರೈಲಿನೊಳಗೆ ಹತ್ತಲು ಬಡ ಯುವಕನ ಪರದಾಟ; ಇಲ್ಲಿದೆ ವಿಡಿಯೋ
ಕಿಕ್ಕಿರಿದ ರೈಲಿನೊಳಗೆ ಹತ್ತಲು ಬಡ ಯುವಕನ ಪರದಾಟ; ಇಲ್ಲಿದೆ ವಿಡಿಯೋ
ಟಿಕೆಟ್ ದರ ಹೆಚ್ಚಿಸಲು ಪ್ರಭಾಸ್, ಚಿರಂಜೀವಿ ಸಿನಿಮಾಗಳಿಗೆ ಸಿಕ್ತು ಅವಕಾಶ
ಟಿಕೆಟ್ ದರ ಹೆಚ್ಚಿಸಲು ಪ್ರಭಾಸ್, ಚಿರಂಜೀವಿ ಸಿನಿಮಾಗಳಿಗೆ ಸಿಕ್ತು ಅವಕಾಶ