ಜನಸಾಮಾನ್ಯರೊಡನೆ ತಾಳ್ಮೆಯಿಂದ ವರ್ತಿಸಿ: ಮಾರ್ಷಲ್​ಗಳಿಗೆ BBMP ಆಯುಕ್ತ ಕಿವಿಮಾತು

ಬೆಂಗಳೂರು: ಕೊರೊನಾ ಕ್ರಮಗಳನ್ನು ಪಾಲಿಸದಿದ್ದಲ್ಲಿ ಜನರಿಗೆ ದಂಡ ವಿಧಿಸುವುದಾಗಿ ಕಾಯ್ದೆ ಹೊರಹೊಮ್ಮಿತ್ತು. ಈ ನಿಟ್ಟಿನಲ್ಲಿ ಜನಸಾಮಾನ್ಯರು ಮತ್ತು ಮಾರ್ಷಲ್ ನಡುವೆ ವಾಗ್ವಾದಗಳು ನಡೆಯುತ್ತಿದ್ದವು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮೂಗು, ಬಾಯಿಯನ್ನು ಸಂಪೂರ್ಣವಾಗಿ ಮುಚ್ಚುವ ಕರವಸ್ತ್ರ, ಬಟ್ಟೆಗಳನ್ನು ಬಳಸುವವರಿಗೆ ಯಾವುದೇ ದಂಡವನ್ನು ವಿಧಿಸಬೇಕಾಗಿಲ್ಲ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಶುಕ್ರವಾರ ನಡೆದ ಪಾಲಿಕೆ ಅಧಿಕಾರಿಗಳು ಮತ್ತು ಮಾರ್ಷಲ್​ಗಳ ಮೇಲ್ವಿಚಾರಣೆ ಸಭೆಯಲ್ಲಿ ಸೂಚನೆ ನೀಡಿದ್ದಾರೆ. ಸಾರ್ವಜನಿಕರು ಹೆಚ್ಚು ಸೇರುವ ಜಾಗಗಳಾದ ಮಾರುಕಟ್ಟೆ, ಮಾಲ್​ಗಳಲ್ಲಿ ಸರಿಯಾಗಿ ಗಮನಿಸಿ ಕೊರೊನಾ ನಿಯಂತ್ರಣ […]

ಜನಸಾಮಾನ್ಯರೊಡನೆ ತಾಳ್ಮೆಯಿಂದ ವರ್ತಿಸಿ: ಮಾರ್ಷಲ್​ಗಳಿಗೆ BBMP ಆಯುಕ್ತ ಕಿವಿಮಾತು

Updated on: Nov 07, 2020 | 4:51 PM

ಬೆಂಗಳೂರು: ಕೊರೊನಾ ಕ್ರಮಗಳನ್ನು ಪಾಲಿಸದಿದ್ದಲ್ಲಿ ಜನರಿಗೆ ದಂಡ ವಿಧಿಸುವುದಾಗಿ ಕಾಯ್ದೆ ಹೊರಹೊಮ್ಮಿತ್ತು. ಈ ನಿಟ್ಟಿನಲ್ಲಿ ಜನಸಾಮಾನ್ಯರು ಮತ್ತು ಮಾರ್ಷಲ್ ನಡುವೆ ವಾಗ್ವಾದಗಳು ನಡೆಯುತ್ತಿದ್ದವು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಮೂಗು, ಬಾಯಿಯನ್ನು ಸಂಪೂರ್ಣವಾಗಿ ಮುಚ್ಚುವ ಕರವಸ್ತ್ರ, ಬಟ್ಟೆಗಳನ್ನು ಬಳಸುವವರಿಗೆ ಯಾವುದೇ ದಂಡವನ್ನು ವಿಧಿಸಬೇಕಾಗಿಲ್ಲ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಶುಕ್ರವಾರ ನಡೆದ ಪಾಲಿಕೆ ಅಧಿಕಾರಿಗಳು ಮತ್ತು ಮಾರ್ಷಲ್​ಗಳ ಮೇಲ್ವಿಚಾರಣೆ ಸಭೆಯಲ್ಲಿ ಸೂಚನೆ ನೀಡಿದ್ದಾರೆ.

ಸಾರ್ವಜನಿಕರು ಹೆಚ್ಚು ಸೇರುವ ಜಾಗಗಳಾದ ಮಾರುಕಟ್ಟೆ, ಮಾಲ್​ಗಳಲ್ಲಿ ಸರಿಯಾಗಿ ಗಮನಿಸಿ ಕೊರೊನಾ ನಿಯಂತ್ರಣ ಕ್ರಮಗಳನ್ನು ಪಾಲಿಸದವರಿಗೆ ದಂಡ ವಿಧಿಸಿರಿ ಮತ್ತು ಸಾರ್ವಜನಿಕರೊಂದಿಗೆ ವಾಗ್ವಾದ ನಡೆಸದೆ ತಾಳ್ಮೆಯಿಂದ ವರ್ತಿಸಿ ಎಂದು ಮಾರ್ಷಲ್​ಗಳಿಗೆ ಖಡಕ್​ ವಾರ್ನಿಂಗ್​ ನೀಡಿದ್ದಾರೆ.

Published On - 4:48 pm, Sat, 7 November 20