ಹೀನಾಯ ಸೋಲು ಕಂಡ RCB ಮೇಲೆ ಟ್ರೋಲ್ ಹಾವಳಿ, ದಾಳಿ

  • TV9 Web Team
  • Published On - 18:12 PM, 7 Nov 2020
ಹೀನಾಯ ಸೋಲು ಕಂಡ RCB ಮೇಲೆ ಟ್ರೋಲ್ ಹಾವಳಿ, ದಾಳಿ

ನಿನ್ನೆ ನಡೆದ IPL elimination matchನಲ್ಲಿ ಸೋತ ಬೆಂಗಳೂರಿನ ಆರ್.ಸಿ.ಬಿ ತಂಡ ಮನೆಗೆ ಹಿಂತಿರುಗುವ ಮೊದಲೇ ಈಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ಗಳನ್ನು ಎದುರಿಸುವ ಸಂದರ್ಭ ಬಂದಿದೆ. ಟ್ವಿಟರ್ ನಲ್ಲಿ EesalaCupNamde ಅಂತ ಹ್ಯಾಶ್ ಟ್ಯಾಗ್ ಮಾಡಿ ಜನ ಮನಸೋ ಇಚ್ಛೆ ಗೋಳು ಹೊಯ್ದುಕೊಳ್ಳುತ್ತಿದ್ದರೆ. ಇನ್ನು ಕೆಲವರು ತಮ್ಮ ಹೃದಯ ವೈಶಾಲ್ಯತೆ ಮೆರೆದು ತಾವು ಎಂದಿಗೂ ಆರ್.ಸಿ.ಬಿ ಫ್ಯಾನ್ ಎಂದು ಹೇಳಿಕೊಂಡಿದ್ದಾರೆ. ಈ ಹಿಂದೆ ಬೇರೆ ಬೇರೆ ತಂಡಗಳ ಬಗ್ಗೆ ಕೂಡ ಇದೇ ರೀತಿ ಗೋಳು ಹೊಯ್ದಿದ್ದು ಇದೆ.

ಈ ಸಲ ಕಪ್ ನಮ್ದೆ ಎನ್ನುವ ಟ್ರೋಲ್ ಕನ್ನಡಿಗರದ್ದು. ಅದರಲ್ಲೂ ಆರ್.ಸಿ.ಬಿ ಫ್ಯಾನ್​ಗಳದ್ದು. ಈ ಸ್ಲೋಗನ್ ಹೆಚ್ಚು ಜನಪ್ರಿಯಗೊಂಡಿದ್ದು ಎಲ್ಲರ ಬಾಯಲ್ಲೂ ರಾರಾಜಿಸುತ್ತಿತ್ತು. ಆದರೆ, ಪ್ರತಿ ವರ್ಷದಂತೆ ಇದು ಕೇವಲ ಸ್ಲೋಗನ್ ಆಗಿ ಉಳಿದಿದೆ ಎನ್ನುವುದು ಅಭಿಮಾನಿಗಳ ಕೊರಗು. ಇದು ಟ್ರೊಲ್​ಗಳ ಮೂಲಕ ಬಿಂಬಿತವಾಗಿದೆ.

ನಾನಾ ಆಯಾಮಗಳಲ್ಲಿ ಕಾಣಸಿಗುವ ಆರ್.ಸಿ.ಬಿ ಮೇಲಿನ ಟ್ರೋಲ್​ಗಳು ನಿನ್ನೆ ನಡೆದ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ಎದುರು ಸೋತಾಗ ಈ ಸಲ ತಪ್ಪು ನಮ್ದೆ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದರು.

ಗೆಲುವು ಕಟ್ಟಿಟ್ಟ ಬುತ್ತಿ ಎಂದು ಹೆಚ್ಚು ವಿಶ್ವಾಸವನ್ನು ಹೊಂದಿದ್ದ ಫ್ಯಾನ್​ಗಳಿಗೆ ನಿರಾಸೆ ಮೂಡಿದೆ. ರೊಚ್ಚಿಗೆದ್ದ ಅದೆಷ್ಟೋ ಅಭಿಮಾನಿಗಳು ಕಪ್ ಕನಸು ಕನಸಾಗಿಯೇ ಉಳಿಯಿತೆಂಬ ಟ್ರೋಲ್​ಗಳ ಮೂಲಕ ತಂಡದ ಮೇಲೆ ರೊಚ್ಚಿಗೆದ್ದರು. ಸೋಲು ಖಚಿತ ಎಂದು ತಿಳಿದಾಗ ಈ ಆರ್ ಸಿ ಬಿ ಅವ್ರು ಇಂತಹ ಕಿತ್ತೋಗಿರೋ ಆಟ ಆಡುವ ಬದಲು ನಮ್ಮ ಹಾಗೆ ಸೀರೆಯನ್ನು ಉಟ್ಕೊಂಡು ಬಿಡೋದು ಒಳ್ಳೆದೆಂದು ಅನುಷ್ಕಾ ಶರ್ಮ ಅವರೇ ಹೇಳುವಂತೆ ಹಾಸ್ಯಮಯ ಟ್ರೋಲ್​ಗಳೂ ರಚನೆಯಾದವು.

ಕ್ವಾಲಿಫೈನಲ್ ಪಂದ್ಯದಲ್ಲಿ ಸೋಲನ್ನು ಅನುಭವಿಸಲು ಮುಖ್ಯ ಕಾರಣ ಆರಂಭಿಕ ಬ್ಯಾಟ್ಸ್​ಮನ್ ರನ್ ಗಳಿಸುವಲ್ಲಿ ವಿಫಲವಾಗಿದ್ದು. ತಂಡದ ನಾಯಕ ಕೊಹ್ಲಿ ಆಟವನ್ನು ಬೇಗ ಬಿಟ್ಟುಕೊಟ್ಟರು. ಇದಕ್ಕೆ ಸಿಟ್ಟಿಗೆದ್ದ ಟ್ರೋಲಿಗರು ಏನಾದ್ರು ಕೆಲ್ಸ ಇದ್ರೆ ನೋಡ್ಕೊಳ್ರೋ ಎಂದು ಹೀನಾಯವಾಗಿ ಟ್ರೋಲ್ ರಚಿಸಿ ಸೋಷಿಯಲ್ ಮೀಡಿಯಾದಲ್ಲಿ ಹರಿದುಬಿಟ್ಟರು. ಸೋಲಿಗೆ ಮೂಲ ಕಾರಣ ತಂಡದ ನಾಯಕನೆಂದು ವಿರಾಟ್ ಮುಖವನ್ನು ಕೋತಿಯ ಮುಖಕ್ಕೆ ಜೋಡಿಸಿ ಹಗೆ ಕಾರಿದರು.

ಐಪಿಎಲ್ ಆರಂಭದ ವೇಳೆಯಲ್ಲಿ ನಿರೀಕ್ಷೆಗೂ ಮೀರಿ ಆಟವಾಡುತ್ತಿದ್ದ ಆರ್ ಸಿ ಬಿ ತಂಡದ ಎಬಿಡಿ ಮೇಲೆ- ಅಬ್ಬರಿಸಿದ ಎಬಿಡಿಯಿಂದ ಆರ್ ಸಿ ಬಿ ಗೆ ಭರ್ಜರಿ ಗೆಲವು ಖಚಿತ ಎನ್ನುವಂತಹ ಟ್ರೋಲ್​ಗಳು ಈ ಮೊದಲು ರೂಪಿತವಾಗಿದ್ದವು. ತಂಡಕ್ಕೆ ಎಬಿಡಿ ರಾಜಾಹುಲಿ ಎಂಬ ಮಾತುಗಳು ಕೇಳಿಬರುತ್ತಿದ್ದ ವೇಳೆಯಲ್ಲಿ ಆಪತ್ಭಾಂದವ ಕೈ ಕೊಟ್ಟನೆಂಬಂತೆ ಟೀಕಿಸಿದರು.

ಇನ್ನು ಕೆಲವರು ಸೋಲು ಗೆಲವು ಸಹಜ. ಯಾವತ್ತಿದ್ರು ನಾವು ಆರ್ ಸಿ ಬಿ ಫ್ಯಾನ್ಸ್ ಗಳೆ. ರಾಯಲ್ ಆಗಿ ಹೇಳಿ ನೆಕ್ಸ್ಟ್ ಕಪ್ ನಮ್ದೆ ಅಂತಾ. ಸೋತರು ಎಬಿಡಿ ಮೇಲೆ ಇರುವ ಗೌರವ ಕಡಿಮೆಯಾಗಲ್ಲ. ಅವರು ತಂಡಕ್ಕೆ ಕಳೆ ಕಟ್ಟಿದ್ದಂತೆಂದು ಟ್ರೋಲ್ ಗಳ ಮುಖಾಂತರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು. ದೇಶದಾದ್ಯಂತ ಆರ್ ಸಿ ಬಿ ಟೀಮ್ ಗೆದ್ದಿರೋಕ್ಕಿಂತ ಸೋತಿದಕ್ಕೆ ಚರ್ಚೆ ಆಗ್ತಾ ಇದೆ ಅಂದ್ರೆ ಅವರು ನಿಜವಾಗಿಯೂ ಸಾಧಕರೇ ಸರಿ ಎಂಬ ಟ್ರೋಲ್ ಹೆಚ್ಚು ಗಮನಾರ್ಹವಾಗಿದೆ.