ಏನಿದು ಹಸಿರು ಪಟಾಕಿ? ಬೆಂಗಳೂರಲ್ಲಿ ದೊರಕುತ್ತದೆಯೇ?
ಹಲವು ರಾಜ್ಯಗಳು ಪಟಾಕಿ ನಿಷೇಧಿಸಿರುವ ಬೆನ್ನಲ್ಲೇ ಹಸಿರು ಪಟಾಕಿಗಳು ಮುನ್ನೆಲೆಗೆ ಬಂದಿವೆ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಮುಕ್ತವಾಗಿ ಹಸಿರು ಪಟಾಕಿ ಬಳಸಲು ಕೋರಿದ್ದಾರೆ. ಹಾಗಾದರೆ ಹಸಿರು ಪಟಾಕಿ ಎಂದರೇನು?ಇಲ್ಲಿದೇ ಡಿಟೇಲ್ಸ್: ಅತೀವ ವಾಯುಮಾಲಿನ್ಯದ ಕಾರಣದಿಂದಾಗಿ 2018ರಲ್ಲಿ ಸರ್ವೋಚ್ಛ ನ್ಯಾಯಾಲಯ ದೆಹಲಿಯಲ್ಲಿ ಸಾಂಪ್ರದಾಯಿಕ ಪಟಾಕಿಗಳನ್ನು ನಿಷೇಧಿಸಿ ಹಸಿರು ಪಟಾಕಿ ಬಳಸಲು ತಿಳಿಸಿತ್ತು. ಆಗ ಮಾರುಕಟ್ಟೆಗೆ ಪ್ಲವರ್ ಪ್ಲಾಟ್ಸ್ ಮತ್ತು ಸ್ಪಾರ್ಕ್ಲರ್ಸ್ ಎಂಬ ಎರಡು ಹಸಿರು ಪಟಾಕಿಗಳು ಚಿತ್ತಾರ ಮೂಡಿಸಿದ್ದವು.ಈಗ ಪಟಾಕಿ ನಿಷೇಧದಿಂದ ಹಸಿರು ಪಟಾಕಿ […]

ಹಲವು ರಾಜ್ಯಗಳು ಪಟಾಕಿ ನಿಷೇಧಿಸಿರುವ ಬೆನ್ನಲ್ಲೇ ಹಸಿರು ಪಟಾಕಿಗಳು ಮುನ್ನೆಲೆಗೆ ಬಂದಿವೆ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಮುಕ್ತವಾಗಿ ಹಸಿರು ಪಟಾಕಿ ಬಳಸಲು ಕೋರಿದ್ದಾರೆ. ಹಾಗಾದರೆ ಹಸಿರು ಪಟಾಕಿ ಎಂದರೇನು?ಇಲ್ಲಿದೇ ಡಿಟೇಲ್ಸ್:
ಅತೀವ ವಾಯುಮಾಲಿನ್ಯದ ಕಾರಣದಿಂದಾಗಿ 2018ರಲ್ಲಿ ಸರ್ವೋಚ್ಛ ನ್ಯಾಯಾಲಯ ದೆಹಲಿಯಲ್ಲಿ ಸಾಂಪ್ರದಾಯಿಕ ಪಟಾಕಿಗಳನ್ನು ನಿಷೇಧಿಸಿ ಹಸಿರು ಪಟಾಕಿ ಬಳಸಲು ತಿಳಿಸಿತ್ತು. ಆಗ ಮಾರುಕಟ್ಟೆಗೆ ಪ್ಲವರ್ ಪ್ಲಾಟ್ಸ್ ಮತ್ತು ಸ್ಪಾರ್ಕ್ಲರ್ಸ್ ಎಂಬ ಎರಡು ಹಸಿರು ಪಟಾಕಿಗಳು ಚಿತ್ತಾರ ಮೂಡಿಸಿದ್ದವು.ಈಗ ಪಟಾಕಿ ನಿಷೇಧದಿಂದ ಹಸಿರು ಪಟಾಕಿ ಮಾರುಕಟ್ಟೆಗೆ ಲಗ್ಗೆಯಿಡುವ ಸಾಧ್ಯತೆಗಳಿವೆ. 
ಹಸಿರು ಪಟಾಕಿಗಳು ಸಾಂಪ್ರದಾಯಿಕ ಪಟಾಕಿಗಳಿಗಿಂತ ಗಾತ್ರದಲ್ಲಿ ಚಿಕ್ಕದಾಗಿರುತ್ತವೆ. ಅಲ್ಲದೇ ದುಬಾರಿಯೂ ಹೌದು. ಆದರೆ ಕಡಿಮೆ ಹೊಗೆ ಸೂಸುವ ಇವು ತೀರಾ ಅಪಾಯಕಾರಿಯಲ್ಲ.30 ಪ್ರತಿಶತ ಕಡಿಮೆ ಮಲಿನ ಉಂಟುಮಾಡುತ್ತವೆ. ಈ ಕಾರಣ ಹಸಿರು ಪಟಾಕಿ ಬಳಕೆಯತ್ತ ಸಾರ್ವಜನಿಕರು ಗಮನಹರಿಸಬೇಕು ಎಂಬುದು ಪರಿಸರಾಸಕ್ತರ ಕೂಗು.
ಇತರ ಪಟಾಕಿಗಳಿಗಿಂತ ಹೇಗೆ ಭಿನ್ನ? ಸಾಂಪ್ರದಾಯಿಕ ಪಟಾಕಿಗಳಲ್ಲಿ ಹೇರಳವಾಗಿ ಬಳಸುವ ಲಿಥಿಯಂ,ಬೇರಿಯಂ ಮುಂತಾದ ರಾಸಾಯನಿಕಗಳನ್ನು ಹಸಿರು ಪಟಾಕಿಗಳಲ್ಲಿ ಬಳಸುವುದಿಲ್ಲ.ಆ ಕಾರಣ ಹಸಿರು ಪಟಾಕಿಗಳು ಮಾಲಿನ್ಯದ ಪ್ರಮಾಣವನ್ನು 30 ರಿಂದ 90 ಪ್ರತಿಶತ ಕಡಿಮೆಗೊಳಿಸುತ್ತದೆ. ಆದರೆ ಬೆಳಕು ಮತ್ತು ಶಬ್ದದಲ್ಲಿ ಹೆಚ್ಚು ವ್ಯತ್ಯಾಸವಾಗುವುದಿಲ್ಲ. 105-110 dba ದಷ್ಟು ಶಬ್ದಕ್ಕೆ ಯಾವುದೇ ಕಡಿಮೆಯಿರುವುದಿಲ್ಲ.
ಗುರುತಿಸುವುದು ಹೇಗೆ? ಹಸಿರು ಪಟಾಕಿಗಳ ಮೇಲೆ ನಮೂದಿಸಲಾಗಿರುವ ಲೋಗೊ ಮತ್ತು ಕ್ಯೂ ಆರ್ ಕೋಡ್ ಗಳ ಮೂಲಕ ಹಸಿರು ಪಟಾಕಿಗಳನ್ನು ಗುರುತಿಸಬಹುದು.ಸಾಂಪ್ರದಯಕ ಪಟಾಕಿಗಳ ಮೇಲೆ ಈ ವಿಶಿಷ್ಟ ಕ್ಯೂ ಆರ್ ಕೋಡ್ ಗಳು ಇರುವುದಿಲ್ಲ.
ಬೆಂಗಳೂರಲ್ಲಿ ದೊರಕುತ್ತದೆಯೇ? ಕರ್ನಾಟಕ ಮಾಲಿನ್ಯ ನಿಯಂತ್ರಣ ಪ್ರಾಧಿಕಾರದ ಪ್ರಕಾರ ಹಸಿರು ಪಟಾಕಿಗಳು ಇದುವರೆಗೂ ಕರ್ನಾಟಕದ ಮಾರುಕಟ್ಟೆಗೆ ಬಂದಿಲ್ಲ.ವರ್ತಕರು ಸಹ ಹಿಂದಿನ ವರ್ಷವಷ್ಟೇ ಅದು ಬಿಡುಗಡೆಯಾದ ಕಾರಣ ಇನ್ನಷ್ಟೇ ಮಾರುಕಟ್ಟೆಯಲ್ಲಿ ಸದ್ದುಮಾಡಬೇಕಿದೆ ಎನ್ನುತ್ತಾರೆ. -ಗುರುಗಣೇಶ ಭಟ್
Published On - 4:40 pm, Sat, 7 November 20




