ಜನಸಾಮಾನ್ಯರೊಡನೆ ತಾಳ್ಮೆಯಿಂದ ವರ್ತಿಸಿ: ಮಾರ್ಷಲ್ಗಳಿಗೆ BBMP ಆಯುಕ್ತ ಕಿವಿಮಾತು
ಬೆಂಗಳೂರು: ಕೊರೊನಾ ಕ್ರಮಗಳನ್ನು ಪಾಲಿಸದಿದ್ದಲ್ಲಿ ಜನರಿಗೆ ದಂಡ ವಿಧಿಸುವುದಾಗಿ ಕಾಯ್ದೆ ಹೊರಹೊಮ್ಮಿತ್ತು. ಈ ನಿಟ್ಟಿನಲ್ಲಿ ಜನಸಾಮಾನ್ಯರು ಮತ್ತು ಮಾರ್ಷಲ್ ನಡುವೆ ವಾಗ್ವಾದಗಳು ನಡೆಯುತ್ತಿದ್ದವು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮೂಗು, ಬಾಯಿಯನ್ನು ಸಂಪೂರ್ಣವಾಗಿ ಮುಚ್ಚುವ ಕರವಸ್ತ್ರ, ಬಟ್ಟೆಗಳನ್ನು ಬಳಸುವವರಿಗೆ ಯಾವುದೇ ದಂಡವನ್ನು ವಿಧಿಸಬೇಕಾಗಿಲ್ಲ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಶುಕ್ರವಾರ ನಡೆದ ಪಾಲಿಕೆ ಅಧಿಕಾರಿಗಳು ಮತ್ತು ಮಾರ್ಷಲ್ಗಳ ಮೇಲ್ವಿಚಾರಣೆ ಸಭೆಯಲ್ಲಿ ಸೂಚನೆ ನೀಡಿದ್ದಾರೆ. ಸಾರ್ವಜನಿಕರು ಹೆಚ್ಚು ಸೇರುವ ಜಾಗಗಳಾದ ಮಾರುಕಟ್ಟೆ, ಮಾಲ್ಗಳಲ್ಲಿ ಸರಿಯಾಗಿ ಗಮನಿಸಿ ಕೊರೊನಾ ನಿಯಂತ್ರಣ […]

ಬೆಂಗಳೂರು: ಕೊರೊನಾ ಕ್ರಮಗಳನ್ನು ಪಾಲಿಸದಿದ್ದಲ್ಲಿ ಜನರಿಗೆ ದಂಡ ವಿಧಿಸುವುದಾಗಿ ಕಾಯ್ದೆ ಹೊರಹೊಮ್ಮಿತ್ತು. ಈ ನಿಟ್ಟಿನಲ್ಲಿ ಜನಸಾಮಾನ್ಯರು ಮತ್ತು ಮಾರ್ಷಲ್ ನಡುವೆ ವಾಗ್ವಾದಗಳು ನಡೆಯುತ್ತಿದ್ದವು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಮೂಗು, ಬಾಯಿಯನ್ನು ಸಂಪೂರ್ಣವಾಗಿ ಮುಚ್ಚುವ ಕರವಸ್ತ್ರ, ಬಟ್ಟೆಗಳನ್ನು ಬಳಸುವವರಿಗೆ ಯಾವುದೇ ದಂಡವನ್ನು ವಿಧಿಸಬೇಕಾಗಿಲ್ಲ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಶುಕ್ರವಾರ ನಡೆದ ಪಾಲಿಕೆ ಅಧಿಕಾರಿಗಳು ಮತ್ತು ಮಾರ್ಷಲ್ಗಳ ಮೇಲ್ವಿಚಾರಣೆ ಸಭೆಯಲ್ಲಿ ಸೂಚನೆ ನೀಡಿದ್ದಾರೆ.
ಸಾರ್ವಜನಿಕರು ಹೆಚ್ಚು ಸೇರುವ ಜಾಗಗಳಾದ ಮಾರುಕಟ್ಟೆ, ಮಾಲ್ಗಳಲ್ಲಿ ಸರಿಯಾಗಿ ಗಮನಿಸಿ ಕೊರೊನಾ ನಿಯಂತ್ರಣ ಕ್ರಮಗಳನ್ನು ಪಾಲಿಸದವರಿಗೆ ದಂಡ ವಿಧಿಸಿರಿ ಮತ್ತು ಸಾರ್ವಜನಿಕರೊಂದಿಗೆ ವಾಗ್ವಾದ ನಡೆಸದೆ ತಾಳ್ಮೆಯಿಂದ ವರ್ತಿಸಿ ಎಂದು ಮಾರ್ಷಲ್ಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
Published On - 4:48 pm, Sat, 7 November 20