
ಬಳ್ಳಾರಿ: ನವೆಂಬರ್ 17 ರಿಂದ ಕಾಲೇಜು ಪ್ರಾರಂಭಿಸಲು ಸರ್ಕಾರ ಮುಂದಾಗಿದೆ. ಆದರೆ ಸರ್ಕಾರದ ಅಂತಿಮ ಆದೇಶಕ್ಕೂ ಮುನ್ನವೇ B.Ed ಶಿಕ್ಷಣ ಸಂಸ್ಥೆಯೊಂದು ಕಾಲೇಜ್ ಆರಂಭಿಸಿರುವ ಘಟನೆ ಬಳ್ಳಾರಿಯ ಹೊಸಪೇಟೆಯಲ್ಲಿ ನಡೆದಿದೆ.
ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ, ಶಾಲಾ- ಕಾಲೇಜು ತೆರೆಯಲು ಹಿಂಜರಿಯುತ್ತಿದೆ. ಆದರೆ ಇಲ್ಲಿ ಬಿ.ಇಡ್ ವಿದ್ಯಾರ್ಥಿಗಳು ದಿನನಿತ್ಯ ಕಾಲೇಜಿಗೆ ಬರುತ್ತಿದ್ದಾರೆ. ಭವಿಷ್ಯದ ಶಿಕ್ಷಕರನ್ನ ರೂಪಿಸುವ ಶಿಕ್ಷಣ ಸಂಸ್ಥೆಯಿಂದಲೇ ರೂಲ್ಸ್ ಬ್ರೆಕ್ ಆಗುತ್ತಿರುವುದನ್ನು ಅಲ್ಲಿನ ಜನ ತೀವ್ರವಾಗಿ ವಿರೋಧಿಸುತ್ತಿದ್ದಾರೆ.
ಇದನ್ನೂ ಓದಿ: ಸರ್ಕಾರದ ಆದೇಶಕ್ಕೂ ಮುನ್ನವೇ ಕಾಲೇಜು ಆರಂಭ.. ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳ ಬೇಸರ
Published On - 7:14 pm, Thu, 12 November 20