‘ಅನಂತ’ ನೆನಪಿಗೆ 2 ವರ್ಷ: ಬಾಲ್ಯದ ಫೋಟೋ ಹಂಚಿಕೊಂಡು ಅಪ್ಪನನ್ನು ನೆನೆದ ಮಗಳು

ಬೆಂಗಳೂರು : ಸಜ್ಜನ ರಾಜಕಾರಣಿ, ಉತ್ತಮ ಸಂಸದೀಯ ಪಟು ಎಂದು ಹೆಸರು ಪಡೆದಿದ್ದ ಬಿಜೆಪಿಯ ಹಿರಿಯ ನಾಯಕ ಅನಂತ್ ಕುಮಾರ್ ನಿಧನರಾಗಿ ಇಂದಿಗೆ ಎರಡು ವರ್ಷ ಸಂದಿದೆ. ಮೋದಿ ಸಂಪುಟದಲ್ಲಿ ರಾಸಾಯನಿಕ ಮತ್ತು ಗೊಬ್ಬರ ಖಾತೆ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಅನಂತ್ ಕುಮಾರ್ 2018ರ ನವೆಂಬರ್ 12ರಂದು ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದರು. ಅನಂತ್ ಕುಮಾರ್ ನೆನಪಿಗಾಗಿ ನಗರದ ಲಾಲ್​ಬಾಗ್ ಸಮೀಪ ನಿರ್ಮಿಸಲಾಗಿರುವ ಅನಂತ ಸ್ಮೃತಿ ಸ್ಮಾರಕಕ್ಕೆ ಇಂದು ಭೇಟಿ ನೀಡಿದ ಅವರ ಮಡದಿ […]

‘ಅನಂತ’ ನೆನಪಿಗೆ 2 ವರ್ಷ: ಬಾಲ್ಯದ ಫೋಟೋ ಹಂಚಿಕೊಂಡು ಅಪ್ಪನನ್ನು ನೆನೆದ ಮಗಳು
Follow us
KUSHAL V
|

Updated on:Nov 12, 2020 | 6:02 PM

ಬೆಂಗಳೂರು : ಸಜ್ಜನ ರಾಜಕಾರಣಿ, ಉತ್ತಮ ಸಂಸದೀಯ ಪಟು ಎಂದು ಹೆಸರು ಪಡೆದಿದ್ದ ಬಿಜೆಪಿಯ ಹಿರಿಯ ನಾಯಕ ಅನಂತ್ ಕುಮಾರ್ ನಿಧನರಾಗಿ ಇಂದಿಗೆ ಎರಡು ವರ್ಷ ಸಂದಿದೆ. ಮೋದಿ ಸಂಪುಟದಲ್ಲಿ ರಾಸಾಯನಿಕ ಮತ್ತು ಗೊಬ್ಬರ ಖಾತೆ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಅನಂತ್ ಕುಮಾರ್ 2018ರ ನವೆಂಬರ್ 12ರಂದು ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದರು. ಅನಂತ್ ಕುಮಾರ್ ನೆನಪಿಗಾಗಿ ನಗರದ ಲಾಲ್​ಬಾಗ್ ಸಮೀಪ ನಿರ್ಮಿಸಲಾಗಿರುವ ಅನಂತ ಸ್ಮೃತಿ ಸ್ಮಾರಕಕ್ಕೆ ಇಂದು ಭೇಟಿ ನೀಡಿದ ಅವರ ಮಡದಿ ತೇಜಸ್ವಿನಿ ಅನಂತ್ ಕುಮಾರ್ ತಮ್ಮ ಪತಿಯ ಎರಡನೇ ಪುಣ್ಯಸ್ಮರಣೆಯ ನಿಮಿತ್ತ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು.

‘ಅನಂತ’ ನೆನಪುಗಳನ್ನು ಹಂಚಿಕೊಂಡ ನಾಯಕರು!

ಅನಂತ್ ಕುಮಾರ್​ರ ಎರಡನೇ ಪುಣ್ಯಸ್ಮರಣೆಯ ಪ್ರಯುಕ್ತ ಅನೇಕ ನಾಯಕರು ಟ್ವೀಟ್ ಮಾಡುವ ಮೂಲಕ ಮಾಜಿ ಕೇಂದ್ರ ಸಚಿವರನ್ನು ಸ್ಮರಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ವೈಯಕ್ತಿಕ ಖಾತೆಯಲ್ಲಿ ಅನಂತ್ ಕುಮಾರ್ ಅವರೊಂದಿಗಿರುವ ಫೋಟೋ ಹಂಚಿಕೊಂಡಿದ್ದು ಅನಂತ್ ಕುಮಾರ್ ಅವರ ಸೇವೆ ಸದಾ ನೆನಪಿನಲ್ಲಿ ಉಳಿಯುತ್ತವೆ ಎಂದಿದ್ದಾರೆ.

ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಕೇಂದ್ರ ಸಚಿವ ನಿತಿನ್ ಗಡ್ಕರಿ, ಸದಾನಂದ ಗೌಡ, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ, ಸಂಸದ ಪ್ರತಾಪ್ ಸಿಂಹ, ಪೂನಂ ಮಹಾಜನ್ ಸೇರಿದಂತೆ ಅನೇಕ ನಾಯಕರು ಅನಂತ್ ಕುಮಾರ್ ಅವರಿಗೆ ನಮನ ಸಲ್ಲಿಸಿದ್ದಾರೆ.

ಬಾಲ್ಯದ ಫೋಟೋ ಹಂಚಿಕೊಂಡು ಅಪ್ಪನನ್ನು ನೆನೆದ ಮಗಳು ಅಪ್ಪನ ಎರಡನೇ ವರ್ಷದ ಪುಣ್ಯ ತಿಥಿಯ ದಿನ ನಮ್ಮ ಕುಟುಂಬದ ಹಳೆಯ ಫೋಟೋವೊಂದನ್ನು ಹಂಚಿಕೊಳ್ಳುತ್ತಿರುವೆ ಎಂದು ತಮ್ಮ ಬಾಲ್ಯದ ಫೋಟೋವನ್ನು ಟ್ವೀಟ್ ಮಾಡಿರುವ ಪುತ್ರಿ ಐಶ್ವರ್ಯಾ ಅನಂತ್ ಕುಮಾರ್ ಅಪ್ಪನಿಲ್ಲದೆ ನಮ್ಮ ಕುಟುಂಬ ಅಪೂರ್ಣವಾಗಿದೆ. ಆದರೆ, ಅವರು ಕಲಿಸಿಕೊಟ್ಟ ಪಾಠ ನಮ್ಮನ್ನು ಸದಾ ದೇಶಸೇವೆ ಹಾಗೂ ಸಮಾಜಸೇವೆಗೆ ಪ್ರೇರೇಪಿಸುತ್ತದೆ ಎಂಬ ಸಂದೇಶವನ್ನು ಹಂಚಿಕೊಂಡಿದ್ದಾರೆ.

Published On - 6:00 pm, Thu, 12 November 20

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?