ಈ ಅಂಗಡಿಯಲ್ಲಿ ಲೆಕ್ಕದ ಪುಸ್ತಕ ಖರೀದಿಸಿದ್ರೆ ಅದೃಷ್ಟವೋ ಅದೃಷ್ಟ!

ಬೆಂಗಳೂರು: ದೀಪಾವಳಿ ಬಂದರೆ ಸಾಕು ವ್ಯಾಪಾರಿ ಹಾಗೂ ವರ್ತಕರಿಗೆ ಹೊಸ ಲೆಕ್ಕದ ಪುಸ್ತಕ ಕೊಳ್ಳುವ ಸಮಯ. ಲಕ್ಷ್ಮೀ ದೇವಿಯ ಕೃಪಾಕಟಾಕ್ಷ ತಮ್ಮ ಮೇಲೆ ಸದಾ ಇರಲಿ ಎಂದು ವರ್ತಕರು ಅಂದಿನ ದಿನ ಹೊಸ ಲೆಕ್ಕದ ಪುಸ್ತಕವನ್ನು ಖರೀದಿಸಿ ದೇವಿಯ ಮುಂದೆ ಪೂಜೆಗೆ ಇಡುತ್ತಾರೆ. ನಂತರ ಅದರಲ್ಲಿ, ಮುಂದಿನ ಹಣಕಾಸು ವರ್ಷದ ಲೆಕ್ಕಾಚಾರವನ್ನು ಬರೆಯುತ್ತಾರೆ. ಅಂತೆಯೇ, ಸಿಲಿಕಾನ್​ ಸಿಟಿಯ ವರ್ತಕರು ಅದರಲ್ಲೂ ನಗರದ ಹೃದಯಭಾಗದಲ್ಲಿರುವ ಚಿಕ್ಕಪೇಟೆಯ ವ್ಯಾಪಾರಿಗಳು ಲೆಕ್ಕದ ಪುಸ್ತಕ ಖರೀದಿಸಲು ಮುಗಿಬೀಳುವ ಏಕೈಕ ಪುಸ್ತಕ ಮಳಿಗೆ ಅಂದರೆ […]

ಈ ಅಂಗಡಿಯಲ್ಲಿ ಲೆಕ್ಕದ ಪುಸ್ತಕ ಖರೀದಿಸಿದ್ರೆ ಅದೃಷ್ಟವೋ ಅದೃಷ್ಟ!
Follow us
KUSHAL V
|

Updated on:Nov 12, 2020 | 5:08 PM

ಬೆಂಗಳೂರು: ದೀಪಾವಳಿ ಬಂದರೆ ಸಾಕು ವ್ಯಾಪಾರಿ ಹಾಗೂ ವರ್ತಕರಿಗೆ ಹೊಸ ಲೆಕ್ಕದ ಪುಸ್ತಕ ಕೊಳ್ಳುವ ಸಮಯ. ಲಕ್ಷ್ಮೀ ದೇವಿಯ ಕೃಪಾಕಟಾಕ್ಷ ತಮ್ಮ ಮೇಲೆ ಸದಾ ಇರಲಿ ಎಂದು ವರ್ತಕರು ಅಂದಿನ ದಿನ ಹೊಸ ಲೆಕ್ಕದ ಪುಸ್ತಕವನ್ನು ಖರೀದಿಸಿ ದೇವಿಯ ಮುಂದೆ ಪೂಜೆಗೆ ಇಡುತ್ತಾರೆ. ನಂತರ ಅದರಲ್ಲಿ, ಮುಂದಿನ ಹಣಕಾಸು ವರ್ಷದ ಲೆಕ್ಕಾಚಾರವನ್ನು ಬರೆಯುತ್ತಾರೆ. ಅಂತೆಯೇ, ಸಿಲಿಕಾನ್​ ಸಿಟಿಯ ವರ್ತಕರು ಅದರಲ್ಲೂ ನಗರದ ಹೃದಯಭಾಗದಲ್ಲಿರುವ ಚಿಕ್ಕಪೇಟೆಯ ವ್ಯಾಪಾರಿಗಳು ಲೆಕ್ಕದ ಪುಸ್ತಕ ಖರೀದಿಸಲು ಮುಗಿಬೀಳುವ ಏಕೈಕ ಪುಸ್ತಕ ಮಳಿಗೆ ಅಂದರೆ ಅದು ಷಾ ಜಸ್​ರಾಜ್ ಜೈನ್ ಅಂಗಡಿ. ಹೌದು, ಚಿಕ್ಕಪೇಟೆಯಲ್ಲಿರುವ ಈ ಪುಸ್ತಕದ ಅಂಗಡಿಯಲ್ಲಿ ಲೆಕ್ಕದ ಪುಸ್ತಕ ಖರೀದಿಸಿದ್ರೆ ಅದೃಷ್ಟ ಹೊಳೆಯಂತೆ ಹರಿದುಬರುತ್ತದೆ ಎಂಬುದು ವರ್ತಕರ ಅಚಲ ನಂಬಿಕೆ.

ಹಾಗಾಗಿ, ಇಲ್ಲಿ ಲೆಕ್ಕದ ಪುಸ್ತಕ ಖರೀದಿಗೆ ಜನಜಂಗುಳಿಯೇ ಕಂಡುಬಂತು. ಕಳೆದ 23 ವರ್ಷಗಳಿಂದ ಲೆಕ್ಕದ ಪುಸ್ತಕ ಮಾರಾಟ ಮಾಡುತ್ತಿರುವ ಷಾ ಜಸ್​ರಾಜ್ ಜೈನ್ ಅಂಗಡಿ ಎದುರು ಜನ ಪುಸ್ತಕ ಖರೀದಿಸಲು ಇಂದು ಬೆಳಗ್ಗೆಯಿಂದ ಸಾಲುಗಟ್ಟಿರುವುದು ಕಂಡುಬಂತು.

ಅಂದ ಹಾಗೆ, ಇಂದು ಸಂಜೆ 4.30 ರಿಂದ 7 ಗಂಟೆಯವರೆಗೆ ಬಹಳ ಒಳ್ಳೆಯ ಸಮಯವಂತೆ. ಹಾಗಾಗಿ, ಲೆಕ್ಕದ ಪುಸ್ತಕ ಖರೀದಿಗಿ ಜನ ಮುಗ್ಗಿಬಿದ್ದರು. ದೀಪಾವಳಿಯ ಲಕ್ಷ್ಮೀ ಪೂಜೆಗೆ ಇಲ್ಲಿ‌ ಖರೀದಿ ಮಾಡುವ ಲೆಕ್ಕದ ಪುಸ್ತಕವನ್ನಿಟ್ಟು ಪೂಜೆ ಮಾಡಿದ್ರೆ ಅದೃಷ್ಟ ಒಲಿಯುತ್ತಂತೆ. ಹೀಗಾಗಿ, ಬೇರೆ ಬೇರೆ ಜಿಲ್ಲೆಗಳಿಂದಲೂ ಇಲ್ಲಿ ಲೆಕ್ಕದ ಪುಸ್ತಕ ಖರೀದಿ ಮಾಡಲು ವ್ಯಾಪಾರಿಗಳು ಬಂದಿದ್ದಾರೆ.

Published On - 5:04 pm, Thu, 12 November 20

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!