ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದವಳನ್ನೂ ಬಿಡಲಿಲ್ಲ ಪಾಪಿಗಳು!

ಮಂಡ್ಯ: ಭಿಕ್ಷುಕಿ ಮೇಲೆ ಅತ್ಯಾಚಾರಗೈದು ಕೊಲೆ ಮಾಡಿರುವ ಅಮಾನವೀಯ ಘಟನೆ ಮಂಡ್ಯ ನಗರದ ಬಾಟಾ ಶೋ ರೂಂ ಬಳಿ ನಡೆದಿದೆ. ರೇಪ್ ಅಂಡ್ ಮರ್ಡರ್ ಕಿರಾತಕರು ಫುಟ್ ಪಾತ್​ನಲ್ಲಿ ಮಲಗಿದ್ದ ಅಪರಿಚಿತ ಭಿಕ್ಷುಕಿಯ ಮೇಲೆಯೇ ಅತ್ಯಾಚಾರ ಎಸಗಿ, ಆಕೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. ಮೃತ ಭಿಕ್ಷುಕಿ ಫುಟ್ ಪಾತ್​ನಲ್ಲೇ ಭಿಕ್ಷೆ ಬೇಡಿ, ಅಲ್ಲೇ ಮಲಗುತ್ತಿದ್ದಳು. ಸ್ಥಳಕ್ಕೆ ಎಸ್ಪಿ ಪರಶುರಾಮ್, ಎಎಸ್ಪಿ, ಡಿವೈಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮಂಡ್ಯ ಪೂರ್ವ ಪೊಲೀಸ್ […]

ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದವಳನ್ನೂ ಬಿಡಲಿಲ್ಲ ಪಾಪಿಗಳು!
Updated By:

Updated on: Jul 25, 2020 | 6:19 PM

ಮಂಡ್ಯ: ಭಿಕ್ಷುಕಿ ಮೇಲೆ ಅತ್ಯಾಚಾರಗೈದು ಕೊಲೆ ಮಾಡಿರುವ ಅಮಾನವೀಯ ಘಟನೆ ಮಂಡ್ಯ ನಗರದ ಬಾಟಾ ಶೋ ರೂಂ ಬಳಿ ನಡೆದಿದೆ.

ರೇಪ್ ಅಂಡ್ ಮರ್ಡರ್
ಕಿರಾತಕರು ಫುಟ್ ಪಾತ್​ನಲ್ಲಿ ಮಲಗಿದ್ದ ಅಪರಿಚಿತ ಭಿಕ್ಷುಕಿಯ ಮೇಲೆಯೇ ಅತ್ಯಾಚಾರ ಎಸಗಿ, ಆಕೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. ಮೃತ ಭಿಕ್ಷುಕಿ ಫುಟ್ ಪಾತ್​ನಲ್ಲೇ ಭಿಕ್ಷೆ ಬೇಡಿ, ಅಲ್ಲೇ ಮಲಗುತ್ತಿದ್ದಳು. ಸ್ಥಳಕ್ಕೆ ಎಸ್ಪಿ ಪರಶುರಾಮ್, ಎಎಸ್ಪಿ, ಡಿವೈಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ. ಈ ಘಟನೆ ನೋಡುದ್ರೆ ನಮ್ಮ ಸಮಾಜ ಎಲ್ಲಿಗೆ ಬಂದು ನಿಂತಿದೆ ಎಂಬ ಚಿಂತೆ ಕಾಡುತ್ತೆ. ಅಮಾಯಕ ಮಹಿಳೆ ರಕ್ಕಸರ ದಾಹಕ್ಕೆ ಬಲಿಯಾಗಿರುವುದು ನಿಜಕ್ಕೂ ಅವಮಾನಕರ. ಘಟನೆಗೆ ಕಾರಣರಾದವರ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.

Published On - 1:19 pm, Fri, 24 July 20