ಅಮ್ಮನನ್ನು ಆಸ್ಪತ್ರೆಗೆ ಸೇರಿಸಿದ ಮಗ-ತಂದೆ ದಿಢೀರ್ ಸಾವು, ಇತ್ತ ಅಮ್ಮನೂ ಬದುಕುಳಿಯಲಿಲ್ಲ
ಬೆಂಗಳೂರು: ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ತಾಯಿಯನ್ನು ಆಸ್ಪತ್ರೆಗೆ ಸೇರಿಸಲು ಹೋದ ಮಗ ಹಾಗೂ ಗಂಡ ಇಬ್ಬರೂ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಕೆ.ಆರ್ ಪುರಂನ ವಿಜಿನಾಪುರದ ನಿವಾಸಿ 46 ವರ್ಷದ ಅಪ್ರೋಜ್. ಬಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಜುಲೈ 13 ರಂದು ITPL ಬಳಿಯಿರುವ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ವೈದ್ಯರು ಐಸಿಯು ವಾರ್ಡ್ಗೆ ಶಿಫ್ಟ್ ಮಾಡಬೇಕು ಅಂತ ಹೇಳಿದ್ರು. ಈ ವಿಚಾರ ಕೇಳಿದ್ದೆ ತಡ ಅಪ್ರೋಜ್ ಬಿ ಪತಿ ಸೈಯದ್ […]

ಬೆಂಗಳೂರು: ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ತಾಯಿಯನ್ನು ಆಸ್ಪತ್ರೆಗೆ ಸೇರಿಸಲು ಹೋದ ಮಗ ಹಾಗೂ ಗಂಡ ಇಬ್ಬರೂ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಕೆ.ಆರ್ ಪುರಂನ ವಿಜಿನಾಪುರದ ನಿವಾಸಿ 46 ವರ್ಷದ ಅಪ್ರೋಜ್. ಬಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಜುಲೈ 13 ರಂದು ITPL ಬಳಿಯಿರುವ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ವೈದ್ಯರು ಐಸಿಯು ವಾರ್ಡ್ಗೆ ಶಿಫ್ಟ್ ಮಾಡಬೇಕು ಅಂತ ಹೇಳಿದ್ರು. ಈ ವಿಚಾರ ಕೇಳಿದ್ದೆ ತಡ ಅಪ್ರೋಜ್ ಬಿ ಪತಿ ಸೈಯದ್ ಸರ್ತಾಜ್ ಹೃದಯಾಘಾತದಿಂದ ಕಾರಿನಲ್ಲೇ ತೀರಿಕೊಂಡಿದ್ದಾರೆ.
2 ದಿನಗಳ ಅಂತರದಲ್ಲಿ ಇಹಲೋಕ ತ್ಯಜಿಸಿದ ಅಪ್ಪ-ಮಗ ತಾಯಿಯನ್ನು ಆಸ್ಪತ್ರೆಗೆ ಅಡ್ಮಿಟ್ ಮಾಡಿ ಮನೆಗೆ ಬಂದ ಮಗ, ತಂದೆಯ ಅಂತ್ಯಸಂಸ್ಕಾರ ಮಾಡಿದ್ದಾನೆ. ಎರಡು ದಿನದ ನಂತರ ಮಗ ಸೈಯದ್ ಇಮ್ರಾನ್ಗೆ ಹಾರ್ಟ್ ಅಟ್ಯಾಕ್ ಆಗಿ, ಆತನೂ ತೀರಿಕೊಂಡಿದ್ದಾನೆ. ಅಲ್ಲಿಗೆ ಅಪ್ಪ-ಮಗ 2 ದಿನಗಳ ಅಂತರದಲ್ಲಿ ಇಹಲೋಕ ತ್ಯಜಿಸಿದ್ದಾರೆ.
ತಾಯಿ ಅಪ್ರೋಜ್ ಸಹ ತೀರಿಕೊಂಡಿದ್ದಾರೆ ಈ ಮಧ್ಯೆ, ಅಪ್ರೋಜ್ ಬಿ ಕುಟುಂಬಸ್ಥರಿಗೆ ನಿನ್ನೆ ಬೆಳಿಗ್ಗೆ 8.45 ಕ್ಕೆ ಆಸ್ಪತ್ರೆಯಿಂದ ದೂರವಾಣಿ ಕರೆ ಬಂದಿದೆ. ಕಾಲ್ ಮಾಡಿದ್ದ ಆಸ್ಪತ್ರೆಯವರು ಇಮ್ರಾನ್ ತಾಯಿ ಅಪ್ರೋಜ್ ತೀರಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಅದೇ ವೇಳೆ, 9 ಲಕ್ಷ ರುಪಾಯಿ ಹಣ ಕಟ್ಟಿ, ಬಾಡಿ ತೆಗೆದುಕೊಂಡು ಹೋಗಿ ಎಂದೂ ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರಂತೆ.
ತಾಯಿಯ ಶವ ಇನ್ನೂ ಆಸ್ಪತ್ರೆಯಲ್ಲೇ.. ಹೀಗಾಗಿ ಅಷ್ಟು ಹಣ ಕಟ್ಟಲಾಗದೆ ನಿನ್ನೆಯಿಂದ ಅಪ್ರೋಜ್ ಬಿ ಅವರ ಮಕ್ಕಳು ಆಸ್ಪತ್ರೆಯ ಮುಂಭಾಗದಲ್ಲೇ ಕಾಯುತ್ತಿದ್ದಾರೆ. ಇದನ್ನು ನೋಡಿದ ಆಸ್ಪತ್ರೆಯವರು ಬಿಬಿಎಂಪಿ ಅಧಿಕಾರಿಗಳನ್ನು ಕರೆದುಕೊಂಡು ಬನ್ನಿ ಅಂದಿದ್ದಾರೆ. ಇತ್ತ ಬಿಬಿಎಂಪಿ ಅಧಿಕಾರಿಗಳಿಗೆ ಕಾಲ್ ಮಾಡಿದ್ರೆ ಅವರು ನಾವು ಆಸ್ಪತ್ರೆಯವರ ಜೊತೆಗೆ ಮಾತಾಡಿದ್ದೀವಿ ಬಾಡಿ ಕೊಡ್ತಾರೆ ಅಂತಿದ್ದಾರೆ. ಆದರೆ ಆಸ್ಪತ್ರೆಯವರು ಮಾತ್ರ ಬಾಡಿ ಕೊಡ್ತಿಲ್ಲ ಅಂತ ಅಪ್ರೋಜ್ ಬಿ ಕುಟುಂಬಸ್ಥರು ಆರೋಪ ಮಾಡ್ತಿದ್ದಾರೆ.
Published On - 12:33 pm, Fri, 24 July 20




