ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದವಳನ್ನೂ ಬಿಡಲಿಲ್ಲ ಪಾಪಿಗಳು!
ಮಂಡ್ಯ: ಭಿಕ್ಷುಕಿ ಮೇಲೆ ಅತ್ಯಾಚಾರಗೈದು ಕೊಲೆ ಮಾಡಿರುವ ಅಮಾನವೀಯ ಘಟನೆ ಮಂಡ್ಯ ನಗರದ ಬಾಟಾ ಶೋ ರೂಂ ಬಳಿ ನಡೆದಿದೆ. ರೇಪ್ ಅಂಡ್ ಮರ್ಡರ್ ಕಿರಾತಕರು ಫುಟ್ ಪಾತ್ನಲ್ಲಿ ಮಲಗಿದ್ದ ಅಪರಿಚಿತ ಭಿಕ್ಷುಕಿಯ ಮೇಲೆಯೇ ಅತ್ಯಾಚಾರ ಎಸಗಿ, ಆಕೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. ಮೃತ ಭಿಕ್ಷುಕಿ ಫುಟ್ ಪಾತ್ನಲ್ಲೇ ಭಿಕ್ಷೆ ಬೇಡಿ, ಅಲ್ಲೇ ಮಲಗುತ್ತಿದ್ದಳು. ಸ್ಥಳಕ್ಕೆ ಎಸ್ಪಿ ಪರಶುರಾಮ್, ಎಎಸ್ಪಿ, ಡಿವೈಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮಂಡ್ಯ ಪೂರ್ವ ಪೊಲೀಸ್ […]

ಮಂಡ್ಯ: ಭಿಕ್ಷುಕಿ ಮೇಲೆ ಅತ್ಯಾಚಾರಗೈದು ಕೊಲೆ ಮಾಡಿರುವ ಅಮಾನವೀಯ ಘಟನೆ ಮಂಡ್ಯ ನಗರದ ಬಾಟಾ ಶೋ ರೂಂ ಬಳಿ ನಡೆದಿದೆ.
ರೇಪ್ ಅಂಡ್ ಮರ್ಡರ್ ಕಿರಾತಕರು ಫುಟ್ ಪಾತ್ನಲ್ಲಿ ಮಲಗಿದ್ದ ಅಪರಿಚಿತ ಭಿಕ್ಷುಕಿಯ ಮೇಲೆಯೇ ಅತ್ಯಾಚಾರ ಎಸಗಿ, ಆಕೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. ಮೃತ ಭಿಕ್ಷುಕಿ ಫುಟ್ ಪಾತ್ನಲ್ಲೇ ಭಿಕ್ಷೆ ಬೇಡಿ, ಅಲ್ಲೇ ಮಲಗುತ್ತಿದ್ದಳು. ಸ್ಥಳಕ್ಕೆ ಎಸ್ಪಿ ಪರಶುರಾಮ್, ಎಎಸ್ಪಿ, ಡಿವೈಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ. ಈ ಘಟನೆ ನೋಡುದ್ರೆ ನಮ್ಮ ಸಮಾಜ ಎಲ್ಲಿಗೆ ಬಂದು ನಿಂತಿದೆ ಎಂಬ ಚಿಂತೆ ಕಾಡುತ್ತೆ. ಅಮಾಯಕ ಮಹಿಳೆ ರಕ್ಕಸರ ದಾಹಕ್ಕೆ ಬಲಿಯಾಗಿರುವುದು ನಿಜಕ್ಕೂ ಅವಮಾನಕರ. ಘಟನೆಗೆ ಕಾರಣರಾದವರ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.
Published On - 1:19 pm, Fri, 24 July 20