
ಬೆಳಗಾವಿ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮಿತಿ ಮೀರುತ್ತಿದೆ. ಜೊತೆಗೆ ಸಾವಿನ ಸಂಖ್ಯೆ ಸಹ. ಆದರೆ ಇದನ್ನು ನಿಭಾಯಿಸುವಲ್ಲಿ ಸರ್ಕಾರ ಎಡುವುತ್ತಿದೆ. ಕೊರೊನಾ ಸೋಂಕಿನಿಂದ ಮೃತಪಟ್ಟವರ ಶವ ಸಂಸ್ಕಾರದಲ್ಲಿ ಬಹಳಷ್ಟು ಎಡವಟ್ಟು ಮಾಡಿದೆ. ಆದರೆ ಇನ್ನೂ ಎಚ್ಚೆತ್ತುಕೊಳ್ಳದ ಸರ್ಕಾರ ಪದೇ ಪದೇ ತಪ್ಪು ಮಾಡುತ್ತಿದೆ. ತನ್ನ ಬೇಜವಾಬ್ದಾರಿತನವನ್ನ ತೂರಿಸುತ್ತಿದೆ.
ಕೊರೊನಾ ಸೋಂಕಿತರ ಅಂತ್ಯಕ್ರಿಯೆಗೆ ಮಹಾನಗರ ಪಾಲಿಕೆ ಮತ್ತು ಆರೋಗ್ಯ ಇಲಾಖೆ ನಡುವೆ ಕಿತ್ತಾಟ ಉಂಟಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಸಿಬ್ಬಂದಿ ಬೇಜವಾಬ್ದಾರಿತನದಿಂದ 2 ಶವಗಳು ಅನಾಥವಾಗಿವೆ. ಆರೋಗ್ಯ ಇಲಾಖೆ ಸಿಬ್ಬಂದಿ ಅಂತ್ಯಕ್ರಿಯೆ ಮಾಡುತ್ತಾರೆ. ನಾವೇಕೆ ಮಾಡಬೇಕೆಂದು ಎಂದು ಪಾಲಿಕೆಯ ಸಿಬ್ಬಂದಿ ಹೇಳಿದ್ರೆ.
ಬೆಳಗಾವಿ ಪಾಲಿಕೆ ಸಿಬ್ಬಂದಿ ಅಂತ್ಯಕ್ರಿಯೆ ಮಾಡುತ್ತಾರೆ ನಾವೇಕೆ ಮಾಡಬೇಕೆಂದು ಆರೋಗ್ಯ ಇಲಾಖೆ ಸಿಬ್ಬಂದಿ ಸುಮ್ಮನಾಗಿದ್ದಾರೆ. ಹೀಗಾಗಿ ಅವರು ಮಾಡಲಿ ಎಂದು ಇವರು. ಇವರು ಮಾಡಲಿ ಎಂದು ಅವರು ಹೀಗೆ ಕಿತ್ತಾಡುತ್ತ ಬೆಳಗಾವಿ ಪಾಲಿಕೆ, ಆರೋಗ್ಯ ಇಲಾಖೆ ಸಿಬ್ಬಂದಿ ಸುಮ್ಮನಾಗಿದ್ದಾರೆ. ಆದರೆ ಇಬ್ಬರ ಬೇಜವಾಬ್ದಾರಿತನದಿಂದ 2 ಶವಗಳು ಅನಾಥವಾಗಿವೆ. ಕೊರೊನಾದಿಂದ ಮೃತಪಟ್ಟವರ ದೇಹವನ್ನು ಕುಟುಂಬಸ್ಥರಿಗೂ ಹಸ್ತಾತರಿಸುವಂತಿಲ್ಲ. ಆದರೆ ಮೃತರ ಕುಟುಂಬದ ತಲಾ ಒಬ್ಬ ಸದಸ್ಯರು ಅಧಿಕಾರಿಗಳಿಗಾಗಿ ಕಾಯುತ್ತಿದ್ದಾರೆ. ಬೆಳಗಾವಿಯ ಕೊವಿಡ್ ಆಸ್ಪತ್ರೆಯ ಶವಾಗಾರದಲ್ಲಿಯೇ ಶವಗಳಿವೆ. ಇಷ್ಟೆಲ್ಲಾ ಆಗುತ್ತಿದ್ದರೂ ಬೆಳಗಾವಿ ಜಿಲ್ಲಾಧಿಕಾರಿ ತಲೆಕೆಡಿಸಿಕೊಳ್ಳುತ್ತಿಲ್ಲ.
Published On - 11:15 am, Sun, 5 July 20