ರಾಯಣ್ಣ ಪ್ರತಿಮೆ ವಿವಾದ: ಸ್ವತಃ CM ಜವಾಬ್ದಾರಿ ಕೊಟ್ಟರೂ ಸ್ಥಳಕ್ಕೆ ಬಾರದ DC ಹಿರೇಮಠ್

| Updated By: ಸಾಧು ಶ್ರೀನಾಥ್​

Updated on: Aug 28, 2020 | 4:24 PM

ಬೆಳಗಾವಿ: ಬೆಳಗಾವಿಯ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲಾಧಿಕಾರಿಗೆ ಸೂಕ್ತ ಕ್ರಮ ಕೈಗೊಂಡು ಪರಿಸ್ಥಿತಿ ತಿಳಿಗೊಳಿಸುವಂತೆ ಸಿಎಂ ಯಡಿಯೂರಪ್ಪ ಜವಾಬ್ದಾರಿ ವಹಿಸಿದ್ದಾರೆ. ಆದ್ರೆ ಬೆಳಗಾವಿಯ ಡಿಸಿ ಎಂಜಿ ಹಿರೇಮಠ್‌ ಮಾತ್ರ ಸಿಎಂ ಬಿಎಸ್‌ವೈ ಜವಾಬ್ದಾರಿ ನೀಡಿದರೂ ಇದುವರೆಗೆ ಸ್ಥಳಕ್ಕೆ ಬಂದಿಲ್ಲ. ಬದಲು ಕಚೇರಿಯಲ್ಲೇ ಕುಳಿತು ಎಂಇಎಸ್ ಮತ್ತು ಶಿವಸೇನೆ ಹಾಗೂ ಮರಾಠಿ ಸಮುದಾಯದ ನಾಯರೊಂದಿಗೆ ಮಾತ್ರ ಸಭೆ ಮಾಡಿದ್ದಾರೆ.‌ ಆದ್ರೆ ಈ ಸಂಧಾನ ಸಭೆ ಕೂಡ ಮುರಿದು ಬಿದ್ದಿದ್ದೆ. ಆದ್ರೂ […]

ರಾಯಣ್ಣ ಪ್ರತಿಮೆ ವಿವಾದ: ಸ್ವತಃ CM ಜವಾಬ್ದಾರಿ ಕೊಟ್ಟರೂ ಸ್ಥಳಕ್ಕೆ ಬಾರದ DC ಹಿರೇಮಠ್
Follow us on

ಬೆಳಗಾವಿ: ಬೆಳಗಾವಿಯ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲಾಧಿಕಾರಿಗೆ ಸೂಕ್ತ ಕ್ರಮ ಕೈಗೊಂಡು ಪರಿಸ್ಥಿತಿ ತಿಳಿಗೊಳಿಸುವಂತೆ ಸಿಎಂ ಯಡಿಯೂರಪ್ಪ ಜವಾಬ್ದಾರಿ ವಹಿಸಿದ್ದಾರೆ.

ಆದ್ರೆ ಬೆಳಗಾವಿಯ ಡಿಸಿ ಎಂಜಿ ಹಿರೇಮಠ್‌ ಮಾತ್ರ ಸಿಎಂ ಬಿಎಸ್‌ವೈ ಜವಾಬ್ದಾರಿ ನೀಡಿದರೂ ಇದುವರೆಗೆ ಸ್ಥಳಕ್ಕೆ ಬಂದಿಲ್ಲ. ಬದಲು ಕಚೇರಿಯಲ್ಲೇ ಕುಳಿತು ಎಂಇಎಸ್ ಮತ್ತು ಶಿವಸೇನೆ ಹಾಗೂ ಮರಾಠಿ ಸಮುದಾಯದ ನಾಯರೊಂದಿಗೆ ಮಾತ್ರ ಸಭೆ ಮಾಡಿದ್ದಾರೆ.‌

ಆದ್ರೆ ಈ ಸಂಧಾನ ಸಭೆ ಕೂಡ ಮುರಿದು ಬಿದ್ದಿದ್ದೆ. ಆದ್ರೂ ಮರಾಠಿ ಪುಂಡರ ವಿರುದ್ಧ ಕ್ರಮಕ್ಕೆ ಡಿಸಿ ಹಿರೇಮಠ್‌ ಮುಂದಾಗುತ್ತಿಲ್ಲ. ಕನ್ನಡಿಗರೊಂದಿಗೆ ಕೂಡಾ ಸಭೆ ಮಾಡದೇ ಕಚೇರಿಯಲ್ಲಿ ಕುಳಿತು ಪ್ರಕರಣ ಬಗೆ ಹರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕೇವಲ ಪೊಲೀಸ್ ಅಧಿಕಾರಿಗಳೊಂದಿಗೆ ಮಾತ್ರ ಸಂಪರ್ಕದಲ್ಲಿದ್ದು ಗಲಾಟೆ ಆಗದಂತೆ ಮುಂಜಾಗ್ರತೆ ವಹಿಸುವಂತೆ ಸೂಚಿಸಿದ್ದಾರೆ.

Also Read: ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ: DC ಸಭೆಯಿಂದ ಹೊರ ನಡೆದ ಮರಾಠಿ ಪುಂಡರು

Also Read: ಕಾನೂನು ಸುವ್ಯವಸ್ಥೆ ಕಾಪಾಡಲು ADGP ಅಮರಕುಮಾರ್‌ ಪಾಂಡೆ ಬೆಳಗಾವಿಗೆ

Also Read: ರಾಯಣ್ಣ ಪ್ರತಿಮೆ ವಿವಾದ: ಪರಿಸ್ಥಿತಿ ಶಾಂತವಾಗಿದೆ ಎಂದ CM ಯಡಿಯೂರಪ್ಪ!