ಮಲಪ್ರಭಾ ನದಿ ದಡದ ಸ್ವಚ್ಛತಾ ಕಾರ್ಯಕ್ಕೆ ನಿಂತ ಶಾಸಕಿ ಅಂಡ್ ಟೀಂ
ಬೆಳಗಾವಿ: ಖಾನಾಪುರದಲ್ಲಿ ಹುಟ್ಟುವ ಮಲಪ್ರಭಾ ನದಿ ಉತ್ತರ ಕರ್ನಾಟಕದ ಜೀವನಾಡಿಯಾಗಿದೆ. ಈ ಕಳಸಾಬಂಡೂರಿ ಯೋಜನೆ ಆಗಿದೆ. ಆದ್ರೇ ಆ ನೀರು ಕೂಡ ಇದೆ ನದಿಗೆ ಸೇರಿ ನಾಲ್ಕು ಜಿಲ್ಲೆಗಳ ಜನರ ದಾಹವನ್ನ ತಣಿಸಲಿದೆ. ಸದ್ಯ ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ ಜಿಲ್ಲೆಗಳ ರೈತರಿಗೆ ಹಾಗೂ ಜನರ ಪಾಲಿಗೆ ಮಲಪ್ರಭಾ ನದಿಯೇ ಗಂಗಾಮಾತಾ ಆಗಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಪಶ್ಚಿಮ ಘಟ್ಟ ಅರಣ್ಯ ಪ್ರದೇಶದಲ್ಲಿ ಹುಟ್ಟುವ ಮಲಪ್ರಭಾ ನದಿ ಲಕ್ಷಾಂತರ ರೈತರ ಪಾಲಿಕೆ ಅನ್ನದಾತೆಯಾಗಿದೆ. ಕಳೆದ ವರ್ಷ […]
ಬೆಳಗಾವಿ: ಖಾನಾಪುರದಲ್ಲಿ ಹುಟ್ಟುವ ಮಲಪ್ರಭಾ ನದಿ ಉತ್ತರ ಕರ್ನಾಟಕದ ಜೀವನಾಡಿಯಾಗಿದೆ. ಈ ಕಳಸಾಬಂಡೂರಿ ಯೋಜನೆ ಆಗಿದೆ. ಆದ್ರೇ ಆ ನೀರು ಕೂಡ ಇದೆ ನದಿಗೆ ಸೇರಿ ನಾಲ್ಕು ಜಿಲ್ಲೆಗಳ ಜನರ ದಾಹವನ್ನ ತಣಿಸಲಿದೆ. ಸದ್ಯ ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ ಜಿಲ್ಲೆಗಳ ರೈತರಿಗೆ ಹಾಗೂ ಜನರ ಪಾಲಿಗೆ ಮಲಪ್ರಭಾ ನದಿಯೇ ಗಂಗಾಮಾತಾ ಆಗಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಪಶ್ಚಿಮ ಘಟ್ಟ ಅರಣ್ಯ ಪ್ರದೇಶದಲ್ಲಿ ಹುಟ್ಟುವ ಮಲಪ್ರಭಾ ನದಿ ಲಕ್ಷಾಂತರ ರೈತರ ಪಾಲಿಕೆ ಅನ್ನದಾತೆಯಾಗಿದೆ.
ಕಳೆದ ವರ್ಷ ಸಾಕಷ್ಟು ಮಳೆಯಾಗಿದ್ದಕ್ಕೆ ಮಲಪ್ರಭಾ ನದಿ ಉಕ್ಕಿ ಹರಿದು ಜಲಪ್ರವಾಹವನ್ನೇ ಸೃಷ್ಟಿಸಿತ್ತು. ಈ ನದಿಯಲ್ಲಿಗ ಸಾಕಷ್ಟು ಪ್ರಮಾಣದಲ್ಲಿ ಹುಳು ತುಂಬಿಕೊಂಡಿದ್ದು ಅದನ್ನ ತೆಗೆಯುವ ಕೆಲಸ ಮತ್ತು ಸ್ವಚ್ಛಗೊಳಿಸುವ ಕೆಲಸ ಖಾನಾಪುರ ಕ್ಷೇತ್ರದ ಶಾಸಕಿ ಅಂಜಲಿ ಹೇಮಂತ ನಿಂಬಾಳ್ಕರ್ ಮಾಡುತ್ತಿದ್ದಾರೆ. ಹೌದು ತನ್ನೆಲ್ಲಾ ಕಾರ್ಯಕರ್ತರು ಮತ್ತು ಅಂಜಲಿತಾಯಿ ಪೌಂಡೇಷನ್ನ ಕಾರ್ಯಕರ್ತರು ಮತ್ತು ಬೆಂಬಲಿಗರು ಇದ್ರಲ್ಲಿ ಭಾಗವಹಿಸಿದ್ದರು. ಖಾನಾಪುರ ಪಟ್ಟಣದ ಹೊರ ವಲಯದ ಪ್ರದೇಶದಲ್ಲಿ ಮಲಪ್ರಭಾ ನದಿ ಹರಿಯುತ್ತಿದ್ದು ಈ ಭಾಗದಲ್ಲಿ ಸದ್ಯ ಸ್ವಚ್ಛತಾ ಕಾರ್ಯ ಆರಂಭಿಸಿದ್ದಾರೆ.
ಮಳೆ ಆರಂಭಕ್ಕೂ ಮುನ್ನ ಕ್ಲೀನಿಂಗ್ ಪಶ್ಚಿಮ ಘಟ್ಟಗಳಲ್ಲಿ ಈಗಾಗಲೇ ಕೊಂಚ ಪ್ರಮಾಣದಲ್ಲಿ ಮಳೆ ಆರಂಭವಾಗಿದ್ದು ಇನ್ನೊಂದು ವಾರ ಕಳೆದ್ರೂ ಹೆಚ್ಚಿನ ಪ್ರಮಾಣದಲ್ಲಿ ಈ ಭಾಗದಲ್ಲಿ ಮಳೆ ಅಬ್ಬರ ಶುರುವಾಗುತ್ತದೆ. ಅಷ್ಟರೊಳಗೆ ನದಿ ಸ್ವಚ್ಛಗೊಳಿಸುವ ಕೆಲಸಕ್ಕೆ ಶಾಸಕಿ ಅಂಜಲಿ ನಿಂಬಾಳ್ಕರ್ ಮುಂದಾಗಿದ್ದು ಕಳೆದ ನಾಲ್ಕು ದಿನಗಳಿಂದ ತಮ್ಮ ಟೀಮ್ ಜತೆಗೆ ತಾವೇ ಖುದ್ದು ಸ್ವಚ್ಛತೆ ಮಾಡುವುದರ ಮೂಲಕ ಎಲ್ಲರನ್ನೂ ಕರೆದುಕೊಂಡು ಸ್ವಚ್ಛತೆಗೊಳಿಸುತ್ತಿದ್ದಾರೆ.
ಬೆಳಗ್ಗೆ ಆರು ಗಂಟೆಯಿಂದ ಒಂಬತ್ತು ಗಂಟೆ ವರೆಗೂ ಈ ರೀತಿ ನಿತ್ಯವೂ ಸ್ವಚ್ಛಗೊಳಿಸುತ್ತಿದ್ದಾರೆ. ನದಿ ದಡದ ಮೇಲೆ ಮತ್ತು ನದಿಯಲ್ಲಿ ಬೆಳೆದ ಕಸದ ಗಿಡಗಂಟೆಗಳನ್ನ ಕಿತ್ತು, ನದಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ಗಳನ್ನ ಆಯ್ದು ಒಂದು ಕಡೆ ಜಮಾವಣೆ ಮಾಡಿ ನಂತರ ಅದನ್ನ ಬೇರೆಡೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಶಾಸಕಿ ನದಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ಖಾನಾಪುರ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
Published On - 7:42 am, Mon, 8 June 20